ETV Bharat / entertainment

ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಲಿರುವ ದೀಪಿಕಾ ಪಡುಕೋಣೆ - ಬಿಎಎಫ್​​ಟಿಎ ಅವಾರ್ಡ್ಸ್

BAFTA 2024: ಬಿಎಎಫ್​​ಟಿಎ ಅವಾರ್ಡ್ಸ್ 2024ರ ಪ್ರೆಸೆಂಟರ್​ ಲಿಸ್ಟ್​​ನಲ್ಲಿ ಭಾರತೀಯ ಚಿತ್ರರಂಗದ ಹೆಸರಾಂತ ನಟಿ ದೀಪಿಕಾ ಪಡುಕೋಣೆ ಅವರ ಹೆಸರಿದೆ.

Deepika Padukone
ನಟಿ ದೀಪಿಕಾ ಪಡುಕೋಣೆ
author img

By ETV Bharat Karnataka Team

Published : Feb 13, 2024, 12:19 PM IST

ಭಾರತೀಯ ಚಿತ್ರರಂಗದ ಖ್ಯಾತ ನಟಿ ದೀಪಿಕಾ ಪಡುಕೋಣೆ ಪ್ರತಿಷ್ಠಿತ ''BAFTA'' (ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಅಂಡ್​​ ಟೆಲಿವಿಷನ್ ಆರ್ಟ್ಸ್) ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಲು ಸಜ್ಜಾಗಿದ್ದಾರೆ. ಫುಟ್ಬಾಲ್​​ ಐಕಾನ್ ಡೇವಿಡ್ ಬೆಕ್‌ಹ್ಯಾಮ್, ಪ್ರಸಿದ್ಧ ನಟ ಕೇಟ್ ಬ್ಲಾಂಚೆಟ್ ಮತ್ತು ಸಿಂಗರ್ ದುವಾ ಲಿಪಾ ಅವರಂತಹ ಗೌರವಾನ್ವಿತ ಪ್ರೆಸೆಂಟರ್ಸ್ ಶ್ರೇಣಿಗೆ 'ಫೈಟರ್' ನಟಿ ಸೇರುತ್ತಿದ್ದಾರೆ. ಇದೇ ಫೆಬ್ರವರಿ 19 ರಂದು ಬಫ್ತಾ ಅಥವಾ ಬಿಎಎಫ್​​ಟಿಎ ಅವಾರ್ಡ್ಸ್ ನಡೆಯಲಿದ್ದು, ಅಂತಾರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ 'ಪಠಾಣ್​' ನಟಿ ಕಾಣಿಸಿಕೊಳ್ಳಲಿದ್ದಾರೆ.

ದೀಪಿಕಾ ಪಡುಕೋಣೆ ಅವಾರ್ಡ್ ಪ್ರೆಸೆಂಟರ್ ಆಗಿ ಈವೆಂಟ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಯಾವ ಕ್ಯಾಟಗರಿಯಲ್ಲಿ ಪ್ರೆಸೆಂಟರ್ ಆಗಿ ಕೆಲಸ ನಿರ್ವಹಿಸಲಿದ್ದಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಬಿಎಎಫ್​​ಟಿಎ ಅವಾರ್ಡ್ಸ್ ಪ್ರೆಸೆಂಟರ್​​ ಟೀಮ್​ನಲ್ಲಿ ಹಗ್ ಗ್ರಾಂಟ್, ಲಿಲಿ ಕಾಲಿನ್ಸ್ ಮತ್ತು ಇಡ್ರಿಸ್ ಎಲ್ಬಾ ಅವರಂತಹ ಖ್ಯಾತನಾಮರು ಇದ್ದಾರೆ. ತಮ್ಮದೇ ಆದ ಸಾಧನೆ ಮೂಲಕ ಗುರುತಿಸಿಕೊಂಡಿರುವ ಇವರು ಸಾಧಕರಿಗೆ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡುವ ಅದ್ಧೂರಿ ವೇದಿಕೆಯ ಮೆರುಗು ಹೆಚ್ಚಿಸಲಿದ್ದಾರೆ.

ಬಾಜಿರಾವ್​ ಮಸ್ತಾನಿ ನಟಿ ಈಗಾಗಲೇ ಜಾಗತಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳೋ ಮೂಲಕ ಭಾರತೀಯ ಚಿತ್ರರಂಗದ ಖ್ಯಾತಿ ಹೆಚ್ಚಿಸಿದ್ದಾರೆ. ಬಿಎಎಫ್​​ಟಿಎ ಅವಾರ್ಡ್ಸ್ ಮೂಲಕ ತಮ್ಮ ಜನಪ್ರಿಯತೆ ವಿಸ್ತರಿಸಿಕೊಳ್ಳುತ್ತಿದ್ದಾರೆ. 2023ರ ವಿಶ್ವ ಪ್ರತಿಷ್ಠಿತ 'ಆಸ್ಕರ್‌' ವೇದಿಕೆಯಲ್ಲಿ ಪ್ರೆಸೆಂಟರ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಇಡಲು ಹೆಸರಾಂತ ತಾರೆ ಸಜ್ಜಾಗಿದ್ದಾರೆ.

ಇದನ್ನೂ ಓದಿ: ಇಳಿಕೆ ಕಂಡ 'ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ' ಕಲೆಕ್ಷನ್​: ಶಾಹಿದ್ -​ ಕೃತಿ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗುತ್ತಿದೆ. ಓಪನ್‌ಹೈಮರ್, ಪುವರ್ ಥಿಂಗ್ಸ್, ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್ ಪ್ರಾಜೆಕ್ಟ್​ಗಳು ಹೆಚ್ಚಿನ ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿವೆ. ಲಂಡನ್‌ನ ರಾಯಲ್ ಫೆಸ್ಟಿವ್ ಹಾಲ್‌ನಲ್ಲಿ ಬಿಎಎಫ್​​ಟಿಎ ಅವಾರ್ಡ್ಸ್ 2024 ಸಮಾರಂಭ ಬಹಳ ಅದ್ಧೂರಿಯಾಗಿ ಜರುಗಲಿದೆ.

ಇದನ್ನೂ ಓದಿ: 'Mr ನಟ್ವರ್ ಲಾಲ್' ಸಿನಿಮಾ ಟ್ರೇಲರ್ ಬಿಡುಗಡೆ

ನಟಿ ಯಶಸ್ವಿ ವೃತ್ತಿಜೀವನ ಮುನ್ನಡೆಸುತ್ತಿದ್ದಾರೆ. ಇತ್ತೀಚೆಗೆ ತೆರೆಗಪ್ಪಳಿಸಿರೋ ಫೈಟರ್ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶ ಕಂಡಿದೆ. ಹೃತಿಕ್ ರೋಷನ್ ಜೊತೆ ಇದೇ ಮೊದಲ ಬಾರಿ ಸ್ಕ್ರೀನ್​​ ಶೇರ್ ಮಾಡಿದ್ದು, ಸಿದ್ಧಾರ್ಥ್ ಆನಂದ್​ ನಿರ್ದೇಶಿಸಿದ್ದರು. ಮುಂದೆ, ಪ್ಯಾನ್​​ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ 'ಕಲ್ಕಿ 2898 ಎಡಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ್ಯಕ್ಷನ್-ಪ್ಯಾಕ್ಡ್ 'ಸಿಂಗಮ್ ಎಗೈನ್​​​'ನಲ್ಲಿಯೂ ನಟಿಸುತ್ತಿದ್ದಾರೆ. ರೋಹಿತ್ ಶೆಟ್ಟಿ ಅವರ ಈ ಚಿತ್ರದಲ್ಲಿ ಶಕ್ತಿ ಶೆಟ್ಟಿ ಪಾತ್ರ ನಿರ್ವಹಿಸಿದ್ದಾರೆ. ಒಟ್ಟಾರೆ ಅಪಾರ ಸಂಖ್ಯೆಯ ಅಭಿಮಾನಿಗಳು, ಸಿನಿಪ್ರಿಯರು ದೀಪಿಕಾ ಪಡುಕೋಣೆ ಅವರ ಮುಂದಿನ ಚಿತ್ರಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.