ETV Bharat / entertainment

'ಪ್ರೇಮಲೋಕ-2'ಗೆ ಕ್ರೇಜಿಸ್ಟಾರ್ ಸಜ್ಜು; ಹುಟ್ಟುಹಬ್ಬದಂದೇ ಸೆಟ್ಟೇರಲಿದೆ ಸಿನಿಮಾ - Ravichandran Cinema

ಶೀಘ್ರದಲ್ಲೇ ಪ್ರೇಮಲೋಕ-2 ಚಿತ್ರದ ಶೂಟಿಂಗ್​ ಆರಂಭಿಸುವುದಾಗಿ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ತಿಳಿಸಿದರು.

premaloka 2
ಪ್ರೇಮಲೋಕ-2
author img

By ETV Bharat Karnataka Team

Published : Mar 6, 2024, 8:27 AM IST

ಕನ್ನಡ ಚಿತ್ರರಂಗದ 'ಶೋ ಮ್ಯಾನ್' ಅಂತಲೇ ಕರೆಯಿಸಿಕೊಂಡವರು ಕ್ರೇಜಿಸ್ಟಾರ್​ ವಿ.ರವಿಚಂದ್ರನ್. ಇವತ್ತಿಗೂ ರವಿಚಂದ್ರನ್ ಅವರನ್ನು ಪ್ರೇಮಲೋಕದ ಪ್ರೋಫೆಸರ್ ಅಂತಾನೇ ಅಭಿಮಾನಿಗಳು ಕರೆಯುತ್ತಾರೆ. ಇದೀಗ ಕ್ರೇಜಿಸ್ಟಾರ್ ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಹೌದು, ರವಿಚಂದ್ರನ್​ ಅಭಿನಯದ ಸೂಪರ್​ ಹಿಟ್​​ ಚಿತ್ರ 'ಪ್ರೇಮಲೋಕ' 1987ರಲ್ಲಿ ಬಿಡುಗಡೆಯಾಗಿತ್ತು. ಇದು ಕನ್ನಡ ಚಿತ್ರರಂಗದ ಮಾಸ್ಟರ್ ಪೀಸ್ ಚಿತ್ರಗಳಲ್ಲಿ ಒಂದು. ಈ ಸಿನಿಮಾದ ಮೇಕಿಂಗ್‍, ಅದ್ಧೂರಿತನ ಹಾಗೂ ಹಾಡುಗಳು ಇಂದಿಗೂ ಸಿನಿಪ್ರಿಯರನ್ನು ಸೆಳೆಯುತ್ತಿವೆ.

ಇದೀಗ ಕ್ರೇಜಿಸ್ಟಾರ್ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಅದೇನಪ್ಪಾ ಅಂದ್ರೆ, 'ಪ್ರೇಮಲೋಕ-2' ಮಾಡುವುದಾಗಿ ರವಿಚಂದ್ರನ್‍ ಕಳೆದ ಕೆಲವು ವರ್ಷಗಳಲ್ಲಿ ಹೇಳುತ್ತಲೇ ಇದ್ದರು. ಅದರಲ್ಲೂ 2024ರಲ್ಲಿ ಪ್ರಾರಂಭಿಸುವುದಾಗಿ ಹಿಂಟ್ ‍ಕೊಟ್ಟಿದ್ದರು. ಆದರೆ, ಯಾವಾಗ, ಚಿತ್ರದಲ್ಲಿ ಯಾರೆಲ್ಲಾ ಇರುತ್ತಾರೆ ಎಂಬಿತ್ಯಾದಿ ಯಾವುದೇ ವಿಚಾರವನ್ನು ಅವರು ಬಹಿರಂಗಗೊಳಿಸಿರಲಿಲ್ಲ. ಈಗ ಮೊದಲ ಬಾರಿಗೆ ಚಿತ್ರದ ಕುರಿತು ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ರವಿಚಂದ್ರನ್‍, ಪ್ರೇಮಲೋಕ 2 ಚಿತ್ರದ ಕುರಿತು ಒಂದಷ್ಟು ಅಪ್‍ಡೇಟ್ಸ್​​ ಕೊಟ್ಟರು. ಪ್ರಮುಖವಾಗಿ, ಮೇ 30ರಂದು ತಮ್ಮ ಹುಟ್ಟುಹಬ್ಬದ ದಿನ ಚಿತ್ರವನ್ನು ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಚಿತ್ರದಲ್ಲಿ ಅವರ ದೊಡ್ಡ ಮಗ ಮನೋರಂಜನ್ ನಾಯಕನಾಗಿ ನಟಿಸಿದರೆ, ಚಿಕ್ಕ ಮಗ ವಿಕ್ರಮ್‍ ಒಂದು ಚಿಕ್ಕ ಪಾತ್ರ ಮಾಡುತ್ತಾರಂತೆ. ಮಿಕ್ಕಂತೆ, ರವಿಚಂದ್ರನ್‍ ಅವರು ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

premaloka 2
ಪ್ರೇಮಲೋಕ

ಪ್ರೇಮಲೋಕ ಚಿತ್ರದ ವಿಶೇಷವೆಂದರೆ, ಆ ಚಿತ್ರದಲ್ಲಿ 10ಕ್ಕೂ ಹೆಚ್ಚು ಹಾಡುಗಳಿದ್ದವು. ''ಪ್ರೇಮಲೋಕ-2 ಚಿತ್ರದಲ್ಲಿ 20ರಿಂದ 25 ಹಾಡುಗಳು ಇರುತ್ತವೆ. ಈ ಸಿನಿಮಾದಲ್ಲಿ ಪ್ರೀತಿ ಇರುತ್ತದೆ. ನನಗೆ ಪ್ರೀತಿ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಅದೊಂದೇ ಗೊತ್ತಿರೋದು ನನಗೆ'' ಎಂದು ಹೇಳಿಕೊಂಡಿದ್ದಾರೆ. ಚಿತ್ರದ ಇನ್ನೊಂದು ಸ್ಪೆಷಾಲಿಟಿಯೆಂದರೆ, ಜನರ ಮಧ್ಯೆ ನಡೆಯುವ ಕಥೆ ಅಂತೆ. ಅದು ಹೇಗೆ, ಸಾಧ್ಯವಾಗುತ್ತಾ? ಎಂಬುದನ್ನು ಕ್ರೇಜಿಸ್ಟಾರ್ ನಿಜ ಮಾಡಲು ಮುಂದಾಗಿರುವುದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.

''ಪ್ರೇಮಲೋಕ ರವಿಚಂದ್ರನ್‍ ಸಿನಿಮಾ ಅಲ್ಲ, ಈಶ್ವರಿ ಸಂಸ್ಥೆಯದ್ದು. ಅದು ಜನರದ್ದು. ಆ ಗೆಲುವು ಕೂಡ ಜನರದ್ದು. ನನಗೆ ಮತ್ತೆ ಇನ್ನೊಂದು ಪ್ರೇಮಲೋಕವನ್ನು ಸೃಷ್ಟಿ ಮಾಡಬೇಕು ಎಂಬ ಆಸೆ. ಆ ಪ್ರೇಮ ಲೋಕದಲ್ಲಿ ನೀವೆಲ್ಲಾ ಇರಬೇಕು, ಅದು ನಿಮ್ಮದಾಗಬೇಕು'' ಎಂದು ರವಿಚಂದ್ರನ್‍ ಹೇಳಿಕೊಂಡಿದ್ದಾರೆ.

ರವಿಚಂದ್ರನ್ ‍ಅವರು 'ರವಿ ಬೋಪಣ್ಣ' ನಂತರ ಯಾವೊಂದು ಚಿತ್ರವನ್ನು ನಿರ್ದೇಶಿಸಿಲ್ಲ. ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ಈ ಚಿತ್ರ ನಿರಾಸೆ ಮೂಡಿಸಿತ್ತು. ಈ ಬಗ್ಗೆ ರವಿಚಂದ್ರನ್‍ ಅವರಿಗೂ ಬೇಸರವಿದ್ದು, ಅದನ್ನು ಮರೆಸುವಂತಹ ಒಂದು ಒಳ್ಳೆಯ ಸಿನಿಮಾ ಮಾಡುವುದಾಗಿ ಅವರು ಹೇಳುತ್ತಲೇ ಇದ್ದರು. ಈ ನಡುವೆ 'ಪ್ರೇಮಲೋಕ-2'ಗೆ ಸಜ್ಜಾಗಿದ್ದಾರೆ.

ಇದನ್ನೂ ಓದಿ: ಹಿರಿಯ ಚಲನಚಿತ್ರ ನಿರ್ದೇಶಕ, ರಂಗಕರ್ಮಿ ಎಂ.ಎಸ್.ಸತ್ಯು ಅವರಿಗೆ 'ಜೀವಮಾನ ಸಾಧನೆ' ಪ್ರಶಸ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.