ETV Bharat / entertainment

ಬಿಗ್​ ಬಾಸ್​ನಲ್ಲಿ ಗುಣ, ಯೋಗ್ಯತೆ ಪ್ರಶ್ನೆ: 'ನಾನು ಪಾಸಿಟಿವಿಟಿ' ಅನ್ನೋದನ್ನು ಮರೆತುಬಿಡಿಯೆಂದ ಗೌತಮಿ - BIGG BOSS KANNADA 11

''ದೀಪಾವಳಿಗೂ ಮುನ್ನ ಮನೆಯಲ್ಲಿ ಹಾವಳಿಯೋ ಹಾವಳಿ!'' - ಇದು ಕನ್ನಡ ಬಿಗ್​ ಬಾಸ್​ನ ಪರಿಸ್ಥಿತಿ

bigg boss kannada 11
ಬಿಗ್ ಬಾಸ್ ಕನ್ನಡ ಸೀಸನ್ 11 (bigg boss poster)
author img

By ETV Bharat Entertainment Team

Published : Oct 31, 2024, 10:21 AM IST

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್​ ಬಾಸ್​​ ಸೀಸನ್​ 11'ರ ಐದನೇ ವಾರದಲ್ಲಿದೆ. ಶೋ ಮುಂದುವರಿದಂತೆ ವಾದ ವಿವಾದ, ಮನಸ್ತಾಪಗಳು ಮುಂದುವರಿದಿವೆ. ಅದರಂತೆ, ಇಂದಿನ ಸಂಚಿಕೆಯಲ್ಲೂ ಮಾತಿನ ಕಿಚ್ಚು ಹೊತ್ತುಕೊಂಡಿದೆ.

''ದೀಪಾವಳಿಗೂ ಮುನ್ನ ಮನೆಯಲ್ಲಿ ಹಾವಳಿಯೋ ಹಾವಳಿ!'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​ನೊಂದಿಗೆ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಂಡಿದೆ. ಬಿಗ್​ ಬಾಸ್​ ಮನೆಯಲ್ಲಿ ಗುಣ, ಯೋಗ್ಯತೆ ಪ್ರಶ್ನೆ ಹುಟ್ಟಿಕೊಂಡಿದೆ. ಮಾತಿನ ಭರ ಜೋರಾಗೇ ಇದೆ. ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ.

ಮನೆ ಮಂದಿಗೆ ಲಕ್ಷುರಿ ಬಜೆಟ್​ ಗಳಿಸಲು ಟಾಸ್ಕ್​​ ಒಂದನ್ನು ಬಿಗ್​ ಬಾಸ್​ ನೀಡಿದ್ದಾರೆ. ಸ್ಪರ್ಧಿಯೋರ್ವರು ಚಿತ್ರವೊಂದನ್ನು ಬಿಡಿಸಬೇಕು, ಅದನ್ನು ಇತರೆ ಸ್ಪರ್ಧಿಗಳು ಕಂಡು ಹಿಡಿಯಬೇಕು. ಇದರಲ್ಲಿ ಗೌತಮಿ ಅವರ ತಂಡ ಗೆದ್ದು ಬೀಗಿದೆ. ನಂತರ ಮಂಜು ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ತ್ರಿವಿಕ್ರಮ್​​, ಭವ್ಯಾ ಅವರು ಮಂಜು ಬಳಿ ವಾದಕ್ಕಿಳಿದಿದ್ದಾರೆ. ಎಲ್ಲರ ನಂಬಿಕೆಯನ್ನು ಹಾಳು ಮಾಡಿಕೊಂಡ್ರಿ ಎಂದು ಮಂಜು ಬಗ್ಗೆ ತ್ರಿವಿಕ್ರಮ್​​​ ಹೇಳಿದ್ರೆ, ನಿಮ್ಮ ಗುಣಾನೆ ಇದು ಅಂತಾ ಭವ್ಯಾ ತಿಳಿಸಿದ್ದಾರೆ. ಗುಣದ ಬಗ್ಗೆ ಬಂದ ಹಿನ್ನೆಲೆ, ಮಂಜು ದನಿ ಏರಿಸಿದ್ದಾರೆ. ಬೇರೆಯವರ ಆ್ಯಕ್ಟಿಂಗ್​​ ಬಗ್ಗೆ ಮಾತನಾಡುತ್ತಿದ್ರಲ್ವಾ? ನಿಮ್ಮ ಯೋಗ್ಯತೆ ಏನು ಎಂದು ಭವ್ಯಾ ಕಿಡಿ ಕಾರಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳ ನಡೆದಂತೆ ತೋರುತ್ತಿದೆ.

ಇದನ್ನೂ ಓದಿ: ಹನುಮಾನ್ ಪಾತ್ರದಲ್ಲಿ ರಿಷಬ್​ ಶೆಟ್ಟಿ: ಟಾಲಿವುಡ್​ನಲ್ಲಿ ಛಾಪು ಮೂಡಿಸಲು ಕಾಂತಾರ ಸ್ಟಾರ್ ರೆಡಿ

ಇನ್ನೂ ಸತ್ಯ ಧಾರವಾಹಿ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿರುವ ಗೌತಮಿ ಅವರು ಈ ಮನೆಯಲ್ಲಿ ಪಾಸಿಟಿವಿಟಿಯಿಂದಾಗಿ ಗುರುತಿಸಿಕೊಂಡಿದ್ದಾರೆ. ಆದ್ರೆ ಎಲ್ಲಾ ಸಂದರ್ಭಗಳಲ್ಲೂ ಇದು ಸಾಧ್ಯವಿಲ್ಲ. ಧನರಾಜ್​ ಅವರ ವರ್ತನೆಯೊಂದನ್ನು ಖಂಡಿಸಿದ್ದು, ಇದೇ ಅವರು ಎಲಿಮಿನೇಶನ್​ಗೆ ನಾಮಿನೇಟ್​ ಆಗುವಂತೆ ಮಾಡಿದೆ.

ಇದನ್ನೂ ಓದಿ: ಯಶ್​ ಪುತ್ರನ 5ನೇ ಜನ್ಮದಿನ: ಕುಟುಂಬದ ಸುಂದರ ಕ್ಷಣಗಳನ್ನು ಹಂಚಿಕೊಂಡ ರಾಧಿಕಾ ಪಂಡಿತ್​​

ಬಿಗ್ ಬಾಸ್​ ಮನೆಯಲ್ಲಿ ಸಾಂಗ್ಸ್​​ ಅಲರಾಮ್​​ ಇದ್ದಂತೆ. ಬೆಳಗ್ಗೆ ಹಾಡು ಹಾಕಿದಾಗ ಹೆಚ್ಚಿನವರು ಸಖತ್​ ಸ್ಟೆಪ್​ ಹಾಕುತ್ತಾರೆ. ಆದ್ರೆ ಕಳೆದ ದಿನ ಗೌತಮಿ ಬೆಡ್​ ಬಿಟ್ಟಿರಲಿಲ್ಲ. ಇನ್ನೇನು ಎದ್ದು ಬರಬೇಕು ಅನ್ನುವಷ್ಟರಲ್ಲಿ ಧನರಾಜ್​ ಅವರು ಗೌತಮಿ ಅವರಿಗೆ ಪಿಲ್ಲೋ ಇಂದ ಹೊಡೆಯುತ್ತಾರೆ. ಇದು ಗೌತಮಿ ಅವರಿಗೆ ಕಿರಿಕಿರಿ ಉಂಟು ಮಾಡಿದೆ. ನನಗಿದು ಇಷ್ಟ ಆಗಲಿಲ್ಲ. ಮೊದಲ ಬಾರಿ ಅಂತಾ ಸುಮ್ಮನಿದ್ದೇನೆ. ದಯವಿಟ್ಟು ನನ್ನನ್ನು ಈ ರೀತಿ ಎಬ್ಬಿಸಬೇಡಿ. ಸಾಂಗ್​ ಪ್ಲೇ ಆದಾಗ ಏಳಬೇಕೆಂಬುದು ನನಗೂ ಗೊತ್ತು ಎಂದು ತಿಳಿಸಿದ್ದಾರೆ. ಇದು ಧನರಾಜ್​ಗೆ ಅಚ್ಚರಿ ಉಂಟುಮಾಡಿದೆ. ನಾಮಿನೇಷನ್​ನಲ್ಲಿ ಇದೇ ಕಾರಣ ಕೊಟ್ಟು ಧನರಾಜ್​ ಅವರು ಗೌತಮಿ ಅವರನ್ನು ನಾಮಿನೇಟ್​​ ಮಾಡಿದ್ದಾರೆ. ಇದರಿಂದ ಅಸಮಾಧಾನಗೊಂಡ ಗೌತಮಿ 'ನಾನು ಪಾಸಿಟಿವಿಟಿ' ಅನ್ನೋದನ್ನು ಮರೆತುಬಿಡಿ ಎಂದು ತಿಳಿಸಿದ್ದಾರೆ.

ಎಲಿಮಿನೇಷನ್​ಗೆ​ ನಾಮಿನೇಷನ್ಸ್: ಮೋಕ್ಷಿತಾ, ಭವ್ಯಾ, ಮಂಜು, ಅನುಷಾ, ಧರ್ಮ, ಮಾನಸಾ, ಚೈತ್ರಾ, ಐಶ್ವರ್ಯಾ, ಧನರಾಜ್​, ಶಿಶಿರ್​​, ಹನುಮಂತ, ಗೋಲ್ಡ್​ ಸುರೇಶ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.