ETV Bharat / entertainment

ನಾಳೆ ಚಿಯಾನ್​ ವಿಕ್ರಮ್​ ಅಭಿನಯದ 'ತಂಗಲಾನ್​' ಟ್ರೇಲರ್​ ರಿಲೀಸ್​ - Thangalaan Trailer - THANGALAAN TRAILER

ಚಿಯಾನ್ ವಿಕ್ರಮ್ ಅಭಿನಯದ ಮತ್ತು ಪಾ ರಂಜಿತ್ ನಿರ್ದೇಶನದ ಬಹುನಿರೀಕ್ಷಿತ 'ತಂಗಲಾನ್​' ಚಿತ್ರದ ಟ್ರೇಲರ್​ ನಾಳೆ ಅನಾವರಣಗೊಳ್ಳಲಿದೆ.

Thangalaan poster
'ತಂಗಲಾನ್​' ಪೋಸ್ಟರ್ (Photo: X)
author img

By ETV Bharat Karnataka Team

Published : Jul 9, 2024, 5:19 PM IST

ತಮಿಳಿನ ಬಹುಬೇಡಿಕೆ​ ನಟ ಚಿಯಾನ್​ ವಿಕ್ರಮ್​ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ತಂಗಲಾನ್​'. ಆ್ಯಕ್ಷನ್ ಡ್ರಾಮಾದ ಟ್ರೇಲರ್​ ರಿಲೀಸ್​ ಡೇಟ್ ಘೋಷಣೆಯಾಗಿದೆ. ಪಾ ರಂಜಿತ್ ಆ್ಯಕ್ಷನ್​ ಕಟ್​ ಹೇಳಿರುವ ಈ ಚಿತ್ರದ ಟ್ರೇಲರ್​​ ಅನ್ನು ಇದೇ ಜುಲೈ 10ರಂದು ಅಂದರೆ ನಾಳೆ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ. ಅಧಿಕೃತ ಘೋಷಣೆಯಾಗದಿದ್ದರೂ 'ತಂಗಲಾನ್​' ಆಗಸ್ಟ್‌ನಲ್ಲಿ ಚಿತ್ರಮಂದಿರ ಪ್ರವೇಶಿಸಲು ಸಜ್ಜಾಗುತ್ತಿದೆ ಎಂದು ವರದಿಗಳು ಸೂಚಿಸಿವೆ.

ಚಿತ್ರನಿರ್ಮಾಪಕರು ಅಧಿಕೃತ ಎಕ್ಸ್ ಖಾತೆಯಲ್ಲಿ 'ತಂಗಲಾನ್‌'ನ ಹೊಸ ಪೋಸ್ಟರ್ ಅನಾವರಣಗೊಳಿಸಿ ಟ್ರೇಲರ್ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಪೋಸ್ಟರ್‌ನಲ್ಲಿ, ಕೋಲಾರ ಚಿನ್ನದ ಗಣಿ (ಕೆಜಿಎಫ್​) ಬಳಿ ಸಹ ಕಾರ್ಮಿಕರ ನಡುವೆ ಚಿಯಾನ್ ವಿಕ್ರಮ್ ಅವರನ್ನು ಕಾಣಬಹುದು. ಪೋಸ್ಟ್‌ಗೆ "ದಬ್ಬಾಳಿಕೆ, ಶೌರ್ಯ ಮತ್ತು ವಿಜಯಗಳ ಯುಗ. ತಂಗಲಾನ್ ಟ್ರೇಲರ್ ಜುಲೈ 10ರಂದು ಬಿಡುಗಡೆ" ಎಂದು ಕ್ಯಾಪ್ಷನ್​ ಕೊಡಲಾಗಿದೆ.

ಆರಂಭದಲ್ಲಿ ಈ ಚಿತ್ರವನ್ನು 2024ರ ಜನವರಿಗೆ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್​ ಹಾಕಿಕೊಂಡಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಕೆಲವು ಬಾರಿ ವಿಳಂಬ ಎದುರಿಸಿದ್ದು, ಸದ್ಯ ಆಗಸ್ಟ್ 15ಕ್ಕೆ ಬಿಡುಗಡೆಗೊಳ್ಳಲು ಎದುರು ನೋಡುತ್ತಿದೆ. ಟ್ರೇಲರ್ ರಿಲೀಸ್​ ಜೊತೆಗೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸುವ ನಿರೀಕ್ಷೆಯಿದೆ.

ಜಿಯೋ ಸ್ಟುಡಿಯೋಸ್, ಸ್ಟುಡಿಯೋ ಗ್ರೀನ್ ಮತ್ತು ನೀಲಂ ಪ್ರೊಡಕ್ಷನ್ಸ್ ಸೇರಿ ನಿರ್ಮಾಣ ಮಾಡಿರುವ ತಂಗಲಾನ್​ನಲ್ಲಿ ಚಿಯಾನ್ ವಿಕ್ರಮ್ ಜೊತೆ ಮಾಳವಿಕಾ ಮೋಹನನ್, ಪಾರ್ವತಿ, ಪಶುಪತಿ, ಡೇನಿಯಲ್ ಕಾಲ್ಟಗಿರೋನ್, ಅರ್ಜುನ್ ಅನ್ಬುದನ್, ಸಂಪತ್ ರಾಮ್ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಇದನ್ನೂ ಓದಿ: ಮಹೇಶ್ ಬಾಬು ಜನ್ಮದಿನಕ್ಕೆ 'ಎಸ್​​ಎಸ್​ಎಂಬಿ29' ಫಸ್ಟ್ ಲುಕ್​ ರಿಲೀಸ್​​: ಫ್ಯಾನ್ಸ್​ಗಿದು ರಾಜಮೌಳಿಯ ಸರ್ಪೈಸ್ - SSMB29 First Look

ರಾಜ್ಯದ ಕೋಲಾರ ಗೋಲ್ಡ್ ಫೀಲ್ಡ್ಸ್ ಹಿನ್ನೆಲೆಯಲ್ಲಿ ಕಥೆ ಸಾಗುತ್ತದೆ. ಚಿನ್ನದ ಗಣಿಗಾರಿಕೆಗಾಗಿ ತಮ್ಮ ಭೂಮಿಯನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿರುವ ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧ ಬುಡಕಟ್ಟು ನಾಯಕನ ಪ್ರತಿರೋಧವನ್ನು ಈ ಚಿತ್ರ ಸಾರಿ ಹೇಳಲಿದೆ. ಜಿ.ವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದರೆ, ಸಂಕಲನಕಾರರಾಗಿ ಸೆಲ್ವ ಆರ್​.ಕೆ ಕೆಲಸ ಮಾಡಿದ್ದಾರೆ. ಛಾಯಾಗ್ರಾಹಕರಾಗಿ ಕಿಶೋರ್ ಕುಮಾರ್ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಪ್ರೇಕ್ಷಕರಿಗೆ ಅದ್ಭುತ ಸಿನಿಮೀಯ ಅನುಭವ ನೀಡುವ ಗುರಿಯನ್ನು ಚಿತ್ರತಂಡ ಹೊಂದಿದೆ.

ಇದನ್ನೂ ಓದಿ: ಹೃದಯ ಸ್ತಂಭನದಿಂದ ಖ್ಯಾತ ಗಾಯಕಿ ಉಷಾ ಉತ್ತುಪ್ ಪತಿ ಜಾನಿ ನಿಧನ! - Usha Uthup Husband Passes Away

ಇನ್ನು ನಟ ಚಿಯಾನ್​ ವಿಕ್ರಮ್​ ಹಲವು ಹಿಟ್​ ಚಿತ್ರಗಳನ್ನು ಮನರಂಜನಾ ಕ್ಷೇತ್ರಕ್ಕೆ ಕೊಟ್ಟಿದ್ದು, ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂಡಿದ್ದಾರೆ. ಪಾ ರಂಜಿತ್ ಕೂಡ ಹಲವು ಸೂಪರ್ ಸ್ಟಾರ್​​ಗಳ ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ. ಈ ಹಿನ್ನೆಲೆ, ಈ ನಟ-ನಿರ್ದೇಶಕ ಕಾಂಬಿನೇಶನ್​ನ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.