ETV Bharat / entertainment

ಸಿನಿಮಾ ಟೈಟಲ್​ ಆಯ್ತು "ಕರಿಮಣಿ ಮಾಲೀಕ ನೀನಲ್ಲ" - Karimani malika neenalla - KARIMANI MALIKA NEENALLA

ಯು ಟರ್ನ್ 2 ಖ್ಯಾತಿಯ ನಿರ್ದೇಶಕ ಚಂದ್ರು ಓಬಯ್ಯ ಅವರು ಟ್ರೆಂಡಿಂಗ್​ನಲ್ಲಿದ್ದ "ಕರಿಮಣಿ ಮಾಲೀಕ ನೀನಲ್ಲ" ಸಾಂಗ್​ ಲೈನ್​ನ್ನು ತಮ್ಮ ಸಿನಿಮಾಕ್ಕೆ ಟೈಟಲ್​ ಆಗಿ ಇಟ್ಟಿದ್ದಾರೆ.

"ಕರಿಮಣಿ ಮಾಲೀಕ ನೀನಲ್ಲ"
"ಕರಿಮಣಿ ಮಾಲೀಕ ನೀನಲ್ಲ"
author img

By ETV Bharat Karnataka Team

Published : Apr 12, 2024, 2:00 PM IST

ಸ್ಯಾಂಡಲ್​ವುಡ್​ನಲ್ಲಿ ಯು ಟರ್ನ್ 2 ಚಿತ್ರದ ಮೂಲಕ ಗಮನ ಸೆಳೆದ ನಿರ್ದೇಶಕ ಚಂದ್ರು ಓಬಯ್ಯ ಈಗ ಮತ್ತೊಂದು ಕ್ಯಾಚೀ ಟೈಟಲ್​ನೊಂದಿಗೆ ಈ ಬಾರಿ ಪ್ರೇಕ್ಷಕರ ಮುಂದೆ ಬರ್ತಾ ಇದ್ದಾರೆ. ಕೆಲವು ದಿನಗಳ ಹಿಂದೆ ಸೋಷಿಯಲ್​​ ಮೀಡಿಯಾದಲ್ಲಿ ಸಿಕ್ಕಾಪಟ್ಟೇ ವೈರಲ್​ ಆಗಿದ್ದ ಹಾಡಿನ ಟೈಟಲ್ ಇಟ್ಟುಕೊಂಡು ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಅದುವೇ "ಕರಿಮಣಿ ಮಾಲೀಕ ನೀನಲ್ಲ".

ಇತ್ತೀಚೆಗಷ್ಟೇ ತಮ್ಮ ಹೊಸ ಈ ಸಿನಿಮಾದ ಶೀರ್ಷಿಕೆಯನ್ನು ಬಿಡುಗಡೆ ಮಾಡಿಸಿದ್ದಾರೆ. ಮ್ಯೂಸಿಕ್​​ ಅಡ್ಡಾದ ಲೋಕೇಶ್​​ ಅವರು ಟೈಟಲ್​​​ ಲಾಂಚ್​ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರು ಓಬಯ್ಯ "ಯುಟರ್ನ್ 2 ಆದ ನಂತರ ರಾಮು ಅಂಡ್​ ರಾಮು ಚಿತ್ರ ಮಾಡಿದ್ದೆ. ಅದು ಸೆನ್ಸಾರ್​​ ಹಂತದಲ್ಲಿದೆ. ಅಲ್ಲದೇ ಪ್ಯಾಟಿ ಹುಡ್ಗಿ ಹಳ್ಳಿ ಲೈಫು ಇನ್ನೂ ಚಿತ್ರೀಕರಣ ಹಂತದಲ್ಲಿದೆ. ಈಗ ಕರಿಮಣಿ ಮಾಲಿಕ ನೀನಲ್ಲ ಟೈಟಲ್ ಇಟ್ಟುಕೊಂಡು ಈ ಚಿತ್ರವನ್ನು ಮುಂದಿನ ತಿಂಗಳು ಪ್ರಾರಂಭಿಸುತ್ತಿದ್ದೇನೆ".

"ಎಳನೀರು ಮಾರೋ ಹುಡುಗ, ಹೂ ಮಾರೋ ಹುಡುಗಿಯ ನಡುವೆ ನಡೆಯೋ ವಿಭಿನ್ನ ಪ್ರೇಮಕಥೆ ಈ ಚಿತ್ರದಲ್ಲಿದೆ. ನಾನು ರೆಡಿ ಮಾಡಿಕೊಂಡಿದ್ದ ಕಥೆಗೆ ಈ ಟೈಟಲ್ ಸೂಕ್ತ ಎನಿಸಿ ಇಟ್ಟಿದ್ದೇನೆ. ಮೇ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭಿಸಿ, 40 ದಿನಗಳ‌ ಕಾಲ‌ ಬೆಂಗಳೂರು, ಮೈಸೂರು, ಮಡಿಕೇರಿ ಸುತ್ತಮುತ್ತ ಶೂಟಿಂಗ್ ಮಾಡೋ ಪ್ಲಾನಿದೆ. ಚಿತ್ರದಲ್ಲಿ 4 ಹಾಡುಗಳಿದ್ದು, ಮ್ಯೂಸಿಕ್ ಕೂಡ ನಾನೇ ಮಾಡುತ್ತಿದ್ದೇನೆ. ನಾಯಕಿಯಾಗಿ ರಮಿಕಾ ಸುತಾರ ಅಭಿನಯಿಸುತ್ತಿದ್ದು, ನಾಯಕನ ಪಾತ್ರಕ್ಕೆ ಹುಡುಕಾಟ ನಡೆಸಿದ್ದೇವೆ, ಮುಂದಿನ ದಿನಗಳಲ್ಲಿ ಹೆಚ್ಚಿನ ವಿವರ ತಿಳಿಸುತ್ತೇನೆ" ಎಂದು ಹೇಳಿದರು.

ನಂತರ ನಾಯಕಿ ಪಾತ್ರ ಮಾಡುತ್ತಿರುವ ರಮಿಕಾ ಸುತಾರ ಮಾತನಾಡುತ್ತಾ "ನಾನು ಮೂಲತ: ಗುಲ್ಬರ್ಗದವಳು. ಸಿನಿಮಾ ಬಗ್ಗೆ ಮೊದಲಿಂದಲೂ ಆಸಕ್ತಿಯಿತ್ತು. ಅವಕಾಶ ಸಿಕ್ಕಿರಲಿಲ್ಲ, ಆ್ಯಕ್ಟಿಂಗ್ ಕ್ಲಾಸ್ ಹೋಗಿದ್ದೇನೆ. ಈ ಚಿತ್ರದಲ್ಲಿ ಹೂ ಮಾರುವ ಹುಡುಗಿಯಾಗಿ ನಟಿಸುತ್ತಿದ್ದೇನೆ ಎಂದು ಹೇಳಿದರು.

ಮತ್ತೊಬ್ಬ ನಟಿ ಮೀನಾ ಕಿರಣ್ ಮಾತನಾಡಿ "ನಾನು ಈಗಾಗಲೇ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಹಿಂದೆ ಚಂದ್ರು ಅವರ ಜೊತೆ ಒಂದು ಚಿತ್ರ ಮಾಡಿದ್ದೆ. ಇದರಲ್ಲಿ ನಾನು ನಾಯಕಿಯ ತಾಯಿ ಪಾತ್ರ ಮಾಡುತ್ತಿದ್ದೇನೆ ಎಂದರು".

ವೀನಸ್​​ ನಾಗರಾಜಮೂರ್ತಿ ಅವರು ಚಿತ್ರದ ಕ್ಯಾಮೆರಾ ವರ್ಕ್​ ನಿಭಾಯಿಸುತ್ತಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಸಖತ್​​ ಟ್ರೆಂಡ್​ನಲ್ಲಿದ್ದ ಕರಿಮಣಿ ಮಾಲಿಕ ನೀನಲ್ಲ ಚಿತ್ರ ಇನ್ನು ಶೂಟಿಂಗ್​ನಲ್ಲಿ ಬ್ಯುಸಿಯಾಗಲಿದೆ.

ಇದನ್ನೂ ಓದಿ: ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್, ವಂಚನೆ ಯತ್ನ; ದೂರು ನೀಡಿದ ಕಿರುತೆರೆ ನಟ - Actor Skanda Ashok

ETV Bharat Logo

Copyright © 2025 Ushodaya Enterprises Pvt. Ltd., All Rights Reserved.