ETV Bharat / entertainment

ಅಂಬಾರಿ ಹೊತ್ತ ಅರ್ಜುನನ ಸಮಾಧಿಗೆ ದನಿ ಎತ್ತಿದ ಚಾಲೆಂಜಿಂಗ್​​ ಸ್ಟಾರ್ ದರ್ಶನ್​​ - Darshan - DARSHAN

ಅರ್ಜುನ ಆನೆ ಸಮಾಧಿ ಬಗ್ಗೆ ಜನಪ್ರಿಯ ನಟ ದರ್ಶನ್​​ ಸೋಷಿಯಲ್​​ ಮೀಡಿಯಾ ಪೋಸ್ಟ್ ಶೇರ್ ಮಾಡಿದ್ದಾರೆ.

Challenging star Darshan
ಅರ್ಜುನ ಆನೆ ಮತ್ತು ನಟ ದರ್ಶನ್​ (Etv Bharat)
author img

By ETV Bharat Karnataka Team

Published : May 3, 2024, 12:15 PM IST

ಸ್ಯಾಂಡಲ್​​​ವುಡ್​ನ​​ ಚಾಲೆಂಜಿಂಗ್​​ ಸ್ಟಾರ್ ಖ್ಯಾತಿಯ ದರ್ಶನ್ ಸೂಪರ್​ ಹಿಟ್​ ಸಿನಿಮಾಗಳ ಜೊತೆಗೆ ಕೆಲ ಮಾನವೀಯ ಕಾರ್ಯಗಳಿಂದಲೂ ಗುರುತಿಸಿಕೊಂಡಿದ್ದಾರೆ. 2002ರಲ್ಲಿ ಸಿನಿಮಾ ವೃತ್ತಿಜೀವನ ಆರಂಭಿಸಿದ ದಚ್ಚು ಈವರೆಗೆ ಹಲವು ಹಿಟ್​ ಚಿತ್ರಗಳನ್ನು ಮನರಂಜನಾ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಕೊನೆಯದಾಗಿ ತೆರೆಕಂಡ ಕಾಟೇರ ಕೂಡ ಸೂಪರ್ ಹಿಟ್​​ ಸಿನಿಮಾ ಲಿಸ್ಟ್​ಗೆ ಸೇರಿದೆ. ಅತ್ಯುತ್ತಮ ಅಭಿನಯಕ್ಕೆ ಹೆಸರುವಾಸಿಯಾಗಿರುವ ದರ್ಶನ್​​ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಭದ್ರ ನೆಲೆ ಹೊಂದಿದ್ದಾರೆ. ಯಶಸ್ವಿ ಚಿತ್ರಗಳ ಜೊತೆಗೆ ಸಮಾಜ ಸೇವೆಯೂ ನಟನ ಜೀವನದ ಒಂದು ಭಾಗ.​​

ಡಿಬಾಸ್​​ ಪ್ರಾಣಿಪ್ರಿಯ ಅನ್ನೋದು ಹೆಚ್ಚಿನವರಿಗೆ ತಿಳಿದಿರುವ ವಿಚಾರವೇ. ಅದೆಷ್ಟೋ ಪ್ರಾಣಿ ಪಕ್ಷಿಗಳನ್ನು ಸಾಕಿಕೊಂಡಿದ್ದಾರೆ. ಇದೀಗ ಇಹಲೋಕ ತ್ಯಜಿಸಿರುವ ಅರ್ಜುನ ಆನೆ ಬಗ್ಗೆ ಮಾತನಾಡಿದ್ದಾರೆ. ದಸರಾ ಅಂಬಾರಿ ಹೊತ್ತು ಗಜಗಾಂಭೀರ್ಯಕ್ಕೆ ಹೆಸರುವಾಸಿ ಆಗಿದ್ದ ಅರ್ಜುನ ಆನೆಗೆ ಸಂಬಂಧಿಸಿದಂತೆ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ನಟನ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ದರ್ಶನ್​ ಪೋಸ್ಟ್​​ನಲ್ಲೇನಿದೆ? ಇನ್​ಸ್ಟಾಗ್ರಾಮ್​​, ಎಕ್ಸ್​ ಸೇರಿದಂತೆ ಜನಪ್ರಿಯ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​ಗಳಲ್ಲಿ ನಟ ದರ್ಶನ್​​ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ''ದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದು ತಿಳಿದೇ ಇದೆ. ಆತನ ಸಮಾಧಿಗೆ ಯಾರು ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ. ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ. ಇನ್ನೇನು ಮಳೆಗಾಲ ಶುರುವಾಗುವ ಮುನ್ನ ಇದಕ್ಕೊಂದು ಒಳ್ಳೆ ವ್ಯವಸ್ಥೆಯಾಗಲಿ ಎಂಬ ಕೋರಿಕೆ ನಮ್ಮದು'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 'ಕಾಟೇರ' ಹಿಟ್​​: ಕತೆಗಾರ, ಸಂಭಾಷಣೆಗಾರ, ಕಾಲು ಕಳೆದುಕೊಂಡ ನಟನಿಗೆ ಕಾರು ಗಿಫ್ಟ್​​ ​ - Kaatera movie success

ನಟನ ನಡೆಗೆ ಬಹುತೇಕ ಮೆಚ್ಚುಗೆ ವ್ಯಕ್ತವಾಗಿದೆ. ನೆಟ್ಟಿಗರು ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಪ್ರತಿಕ್ರಿಯೆ ಕೊಡುತ್ತಿದ್ದಾರೆ. ದರ್ಶನ್​ ಪೋಸ್ಟ್​​ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು, ''ನಿಮ್ಮ ಈ ಸಾಮಾಜಿಕ ಕಳಕಳಿಗೆ ಈ ನಿಮ್ಮ ಸೆಲೆಬ್ರಿಟಿಗಳು ಸದಾ ಸಿದ್ಧ. ಪುಣ್ಯಾತ್ಮ ಕಣಯ್ಯ ನೀನು'' ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, 'ಮೂಕ ಪ್ರಾಣಿಗಳ ಪಾಲಿನ ಪುಣ್ಯಾತ್ಮ ಡಿ ಬಾಸ್' ಎಂದು ತಿಳಿಸಿದ್ದಾರೆ. 'ನಿಂದು ತಾಯಿ ಗುಣ. ತೀರೋದಿಲ್ಲ ಋಣ. ನಿಂದು ಕಾಲ ಮುಗಿದರೂ ನಿಲ್ಲದು ಅಧ್ಯಾಯ. ಪುಣ್ಯಾತ್ಮ, ಪುಣ್ಯಾತ್ಮ, ನಿನಯ್ಯ ಪುಣ್ಯಾತ್ಮ. ಕರುನಾಡ ಅರ್ಜುನನ ನ್ಯಾಯಕ್ಕೆ, ಕರುನಾಡ ಗಜನ ಹೋರಾಟ' ಎಂದು ಅಭಿಮಾನಿಯೋರ್ವರು ಕಾಮೆಂಟ್​ ಸೆಕ್ಷನ್​ನಲ್ಲಿ ತಿಳಿಸಿದ್ದಾರೆ. ಹೀಗೆ ದರ್ಶನ್​ ದೃಷ್ಟಿಕೋನಕ್ಕೆ ಹೆಚ್ಚಿನವರು ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ 24 ಗಂಟೆಯೊಳಗೆ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಲಿರಿಕಲ್ ಸಾಂಗ್ 'ಪುಷ್ಪ ಪುಷ್ಪ' - Pushpa Song Record

ETV Bharat Logo

Copyright © 2024 Ushodaya Enterprises Pvt. Ltd., All Rights Reserved.