ETV Bharat / entertainment

ಮೊದಲ ದಿನವೇ ಬಿಗ್ ಬಾಸ್​ ಮನೆಯಲ್ಲಿ ದನಿಯೆತ್ತಿದ ಚೈತ್ರಾ ಕುಂದಾಪುರ್ - Bigg Boss Kannada 11

''ಮೊದಲ ದಿನವೇ ಸ್ವರ್ಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ರಾ ಚೈತ್ರಾ?'' ಎಂಬ ಶೀರ್ಷಿಕೆಯಡಿ ಅನಾವರಣಗೊಂಡಿರುವ ಕನ್ನಡ ಬಿಗ್​ ಬಾಸ್​ ಪ್ರೋಮೋ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

Chaitra Kundapur
ಚೈತ್ರಾ ಕುಂದಾಪುರ್ (Photo: Colors Kannada IG)
author img

By ETV Bharat Karnataka Team

Published : Sep 30, 2024, 6:57 PM IST

ಬಿಗ್​ ಬಾಸ್​, ಕನ್ನಡದ ಅತ್ಯಂತ ಜನಪ್ರಿಯ ಕಿರುತೆರೆ ಕಾರ್ಯಕ್ರಮ. ಸೀಸನ್​​ 11ರ ಆಟ ಈಗಾಗಲೇ ಶುರುವಾಗಿದೆ. ಇಂದು ರಾತ್ರಿ ಮೊದಲ ದಿನದ ಸಂಚಿಕೆ ಪ್ರಸಾರ ಕಾಣಲಿದ್ದು, ಅಪಾರ ಸಂಖ್ಯೆಯ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಕಳೆದ ದಿನ ಎಲ್ಲ ಸ್ಪರ್ಧಿಗಳನ್ನು ನಿರೂಪಕ ಕಿಚ್ಚ ಸುದೀಪ್​, ಬಿಗ್​ ಬಾಸ್​​ ಟೀಮ್​ ಹಾಗೂ ಕನ್ನಡಿಗರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಅಸಲಿ ಆಟ ಇಂದಿನಿಂದ ಶುರುವಾಗಲಿದ್ದು, ಮೊದಲ ದಿನವೇ ಚೈತ್ರಾ ಕುಂದಾಪುರ್ ದನಿಯೆತ್ತಿದ್ದಾರೆ.

ಮನೆ ಕೆಲಸದ ಜವಾಬ್ದಾರಿಯನ್ನು ನರಕ ನಿವಾಸಿಗಳ ಮೇಲೆ ಹೇರಲಾಗುತ್ತದೆ ಎಂದು ಹೇಳುವ ಟಾಸ್ಕ್​​ ಶುರುವಾಗಿದೆ. ಚೈತ್ರಾ ಕುಂದಾಪುರ್ ನರಕ ನಿವಾಸದಲ್ಲಿದ್ದು, ಕೆಲಸ ಶುರು ಮಾಡಿಕೊಂಡಿದ್ದಾರೆ. ಚೈತ್ರಾ ಹಣ್ಣೊಂದನ್ನು ಮತ್ತೋರ್ವರ ಕೈಯಿಂದ ಕಿತ್ತು ತಿಂದಿದ್ದಾರೆ. ಇದು ವಾದ ವಿವಾದಕ್ಕೆ ಕಾರಣವಾಗಿದೆ. ಹಣ್ಣು ಕೂಡಾ ಟಾಸ್ಕ್​ನ ಒಂದು ಭಾಗವಾಗಿರಬಹುದು. ಮಾತಿಗೆ ಮಾತು ಬೆಳದಂತೆ ಮಾತಾಡಬಾರದು ಎಂಬ ಸ್ಪರ್ಧಿಯ ದನಿಯೊಂದು ಕೇಳಿ ಬರುತ್ತದೆ. ಮಾತನಾಡಬಾರದು ಎಂದು ರೂಲ್​ ಬುಕ್​ನಲ್ಲಿದ್ದರೆ ಹೇಳಿ ಮಾತನಾಡಲ್ಲ ಎಂದು ಚೈತ್ರಾ ಗರಂ ಆಗಿದ್ದಾರೆ. ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿರುವ ಕಲರ್ಸ್ ಕನ್ನಡ, ''ಮೊದಲ ದಿನವೇ ಸ್ವರ್ಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ರಾ ಚೈತ್ರಾ?. ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ - ಶುಕ್ರ ರಾತ್ರಿ 9:30ಕ್ಕೆ ಎಂಬ ಕ್ಯಾಪ್ಷನ್​ ಕೊಟ್ಟಿದೆ.

ಇದನ್ನೂ ಓದಿ: ಬಿಗ್ ಬಾಸ್ ಮೊದಲ ದಿನವೇ ಕಣ್ಣೀರಿಟ್ಟ ಗೌತಮಿ: ವಿಗ್​​ ಕಳಚಿ ಅಸಲಿ ನೋಟ ಪ್ರದರ್ಶಿಸಿದ 'ಸತ್ಯ' ನಟಿ - Bigg Boss Kannada 11

ವಿಡಿಯೋ ವೈರಲ್​ ಆಗುತ್ತಿದ್ದು, ನೆಟ್ಟಿಗರು ತಮ್ಮ ಪ್ರತಿಕ್ರಿಯೆ ಕೊಡುತ್ತಿದ್ದಾರೆ. ಸೋಷಿಯಲ್​ ಮೀಡಿಯಾ ಬಳಕೆದಾರರೋರ್ವರು ಕಾಮೆಂಟ್​​ ಮಾಡಿ, ''ಈ ಕ್ಷಣಕ್ಕೆ ಎಷ್ಟು ಜನ ಕಾತರದಿಂದ ಕಾಯುತಿದ್ದರು'' ಎಂದು ಪ್ರಶ್ನಿಸಿದ್ದಾರೆ. 'ಇವಾಗ್ ಸ್ಟಾರ್ಟ್ ಆಯ್ತು ನೋಡ್ರಿ' ಎಂದು ಮತ್ತೋರ್ವರು ಕಾಮೆಂಟ್​ ಮಾಡಿದ್ದಾರೆ. 'ಹೊಸ ಅಧ್ಯಾಯ ಇವಾಗ ಶುರು' ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. 'ಮೊದಲ ದಿನ ಬೆಂಕಿ ಹತ್ತಿದೆ ಪ್ರೋಮೋದಲ್ಲಿ, ಎಪಿಸೋಡ್ ಅಲ್ಲಿ ಈ ಬೆಂಕಿ ಇರುತ್ತಾ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಶಂಕರ್​ ನಾಗ್ 34ನೇ​​ ಪುಣ್ಯಸ್ಮರಣೆ: 12 ವರ್ಷಗಳಲ್ಲಿ 80 ಸಿನಿಮಾ; ಆಟೋರಾಜನ ಬಾಲ್ಯ, ವೈಯಕ್ತಿಕ, ವೃತ್ತಿಜೀವನದ ಮೆಲುಕು - Shankar Nag 34th Death Anniversary

ಮತ್ತೊಂದು ಪ್ರೋಮೋ ಅನಾವರಣಗೊಂಡಿದ್ದು, ''ಸ್ವರ್ಗದಲ್ಲಿ ಅಸಮಾಧಾನಕ್ಕೆ ಕಾರಣವಾಯ್ತಾ ಬಿಸಿನೀರಿನ ಹೊಗೆ?. ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ - ಶುಕ್ರ ರಾತ್ರಿ 9:30ಕ್ಕೆ'' ಎಂಬ ಕ್ಯಾಪ್ಷನ್​ ಕೊಡಲಾಗಿದೆ. ಬಿಸಿನೀರಿನ ಬೇಡಿಕೆಯೇ ಸ್ಪರ್ಧಿಗಳ ನಡುವೆ ಚರ್ಚೆಗೆ ಕಾರಣವಾಗಿದೆ. ಒಟ್ಟಾರೆ ಪ್ರೋಮೋಗಳು ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತಿದ್ದು, ರಾತ್ರಿ 9:30ಕ್ಕೆ ಸಂಪೂರ್ಣ ಸಂಚಿಕೆ ಪ್ರಸಾರವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.