ETV Bharat / entertainment

ಜಯಸೂರ್ಯ, ಸಿದ್ದಿಕ್​ ವಿರುದ್ಧ ದೂರು: ಮಲಯಾಳಂ ಫಿಲ್ಮ್ ಪಾಲಿಸಿ ಕಮಿಟಿಯಿಂದ ಕೆಳಗಿಳಿದ ಶಾಸಕ ಮುಖೇಶ್​​ - Case Against Actor Jayasurya - CASE AGAINST ACTOR JAYASURYA

ಕೇರಳ ಚಲನಚಿತ್ರೋದ್ಯಮದಲ್ಲಿ ನಡೆಯುತ್ತಿರುವ 'ಮಿ ಟೂ' ಹೋರಾಟದಲ್ಲಿ ಜನಪ್ರಿಯ ನಟ ಜಯಸೂರ್ಯ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈ ಸಂಬಂಧ ನಟ ಜಯಸೂರ್ಯ ಮತ್ತು ನಟ ಸಿದ್ದಿಕ್ ವಿರುದ್ಧ ಪ್ರಕರಣಗಳು ದಾಖಲಾಗಿದೆ. ಫಿಲ್ಮ್ ಪಾಲಿಸಿ ಮೇಕಿಂಗ್​ ಕಮಿಟಿಯ ತಮ್ಮ ಸ್ಥಾನಕ್ಕೆ 'ಸಿಪಿಐಎಂ'ನ ಶಾಸಕ ಮುಖೇಶ್ ಅವರು ರಾಜೀನಾಮೆ ನೀಡಿದ್ದಾರೆ.

Siddique, Jayasurya, Mukesh
ಸಿದ್ದಿಕ್​​, ಜಯಸೂರ್ಯ, ಮುಖೇಶ್ (ANI)
author img

By ETV Bharat Karnataka Team

Published : Aug 28, 2024, 2:05 PM IST

ತಿರುವನಂತಪುರಂ: ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಬಹಿರಂಗಗೊಂಡ ಬೆನ್ನಲ್ಲೇ ಮಲಯಾಳಂ ಚಿತ್ರರರಂಗದಲ್ಲಿ ಬಿರುಗಾಳಿಯೆದ್ದಿದೆ. ನಟ ಸಿದ್ದಿಕ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಅಲ್ಲದೇ ಕೇರಳ ಚಲನಚಿತ್ರೋದ್ಯಮದಲ್ಲಿ ನಡೆಯುತ್ತಿರುವ 'ಮಿ ಟೂ' ಹೋರಾಟದಲ್ಲಿ ನಟ ಜಯಸೂರ್ಯ ಕೂಡ ಆರೋಪಗಳನ್ನು ಎದುರಿಸುತ್ತಿದ್ದಾರೆ. ಲೈಂಗಿಕ ದುರ್ವರ್ತನೆಯ ಆರೋಪಗಳನ್ನು ಎದುರಿಸಿರುವ ನಟ - ರಾಜಕಾರಣಿ ಮುಖೇಶ್ ಚಲನಚಿತ್ರ ನೀತಿ ಸಮಿತಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ನಟ ಜಯಸೂರ್ಯ ವಿರುದ್ಧ ಪ್ರಕರಣ ದಾಖಲಾಗಿದೆ. ಆರಂಭದಲ್ಲಿ, ಜನಪ್ರಿಯ ನಟನ ವಿರುದ್ಧ ಸಾರ್ವಜನಿಕವಾಗಿ ಆರೋಪಗಳ ಮಳೆಯನ್ನೇ ಹರಿಸಿದ್ದ ನಟಿಯೋರ್ವರು ಇದೀಗ ಔಪಚಾರಿಕವಾಗಿ ದೂರು ದಾಖಲಿಸಿದ್ದಾರೆ. ವರದಿಗಳ ಪ್ರಕಾರ, 2013ರಲ್ಲಿ ತೊಡುಪುಳದಲ್ಲಿ ನಡೆದ ಶೂಟಿಂಗ್ ವೇಳೆ ಜಯಸೂರ್ಯ ನಟಿಯನ್ನು ಹಿಡಿದಿದ್ದರು ಎಂದು ಆರೋಪಿಸಲಾಗಿದೆ. ಮಲಯಾಳಂ ಚಿತ್ರರಂಗದ ವಿವಾದಗಳಿಗೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಸ್ವೀಕರಿಸಿರುವ ಒಟ್ಟು 18 ದೂರುಗಳಲ್ಲಿ ಇದು ಕೂಡಾ ಒಂದು. ಆರೋಪಗಳ ಸಂಖ್ಯೆ ದಿನೇ ದಿನೆ ಏರುತ್ತಿದೆ.

ಐಪಿಎಸ್​ ಅಧಿಕಾರಿ ಜಿ ಪೂಂಘಲಿ ಮತ್ತು ಐಪಿಎಸ್​ ಆಫೀಸರ್ ಐಶ್ವರ್ಯಾ ಡೊಂಕ್ರೆ ನೇತೃತ್ವದಲ್ಲಿ ಪೊಲೀಸ್ ತನಿಖೆ ನಡೆಯುತ್ತಿದೆ. ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ದೂರುದಾರರಿಂದ ವಿವರವಾದ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದಕ್ಕೂ ಮೊದಲು, 2008ರ ಶೂಟಿಂಗ್‌ ಸಂದರ್ಭ ನಟ ಜಯಸೂರ್ಯ ಅವರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮತ್ತೋರ್ವ ಮಹಿಳಾ ನಟಿ ಆರೋಪಿಸಿದ್ದರು. ನಟ ತಮ್ಮ ಫ್ಲ್ಯಾಟ್‌ಗೆ ನನ್ನನ್ನು ಆಹ್ವಾನಿಸಿ ಹಿಂದಿನಿಂದ ತಬ್ಬಿಕೊಂಡು ಮುತ್ತಿಕ್ಕಿದ್ದರು ಎಂದು ನಟಿ ಆರೋಪಿಸಿದ್ದರು.

ಇದನ್ನೂ ಓದಿ: ಮಲಯಾಳಂ ನಟ ಸಿದ್ದಿಕ್​ ವಿರುದ್ದ ಅತ್ಯಾಚಾರ ಪ್ರಕರಣ ದಾಖಲು! - Rape Case against Actor Siddique

ನಟ ಮತ್ತು ಶಾಸಕ ಮುಖೇಶ್ ಅವರು ತಮ್ಮ ಸ್ವಪಕ್ಷ 'ಸಿಪಿಐಎಂ'ನ ನಿರ್ದೇಶನ ಮತ್ತು ವಿರೋಧ ಪಕ್ಷಗಳ ಒತ್ತಡದ ನಂತರ ಫಿಲ್ಮ್ ಪಾಲಿಸಿ ಮೇಕಿಂಗ್​ ಕಮಿಟಿಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯದ ಚಲನಚಿತ್ರ ನೀತಿಯನ್ನು ರೂಪಿಸುವ ಜವಾಬ್ದಾರಿಯನ್ನು ಹೊಂದಿರುವ ಸಮಿತಿಯಿಂದ ಅವರನ್ನು ತೆಗೆದುಹಾಕಲು ಹೆಚ್ಚುತ್ತಿರುವ ಬೇಡಿಕೆಗಳ ನಡುವೆ ಈ ನಿರ್ಧಾರ ಕೈಗೊಂಡಿದ್ದಾರೆ. ಆದರೆ, ಮುಖೇಶ್ ಶಾಸಕರಾಗಿ ಮುಂದುವರಿಯಲಿದ್ದಾರೆ. ಚಲನಚಿತ್ರ ನೀತಿ ರಚನಾ ಸಮಿತಿಯು ಶಾಜಿ ಎನ್ ಕರುಣ್ ಅವರ ನೇತೃತ್ವದಲ್ಲಿ ತನ್ನ ಕೆಲಸ ಮುಂದುವರಿಸಲಿದೆ. ಮಂಜು ವಾರಿಯರ್, ಬಿ. ಉನ್ನಿಕೃಷ್ಣನ್ ಮತ್ತು ಪದ್ಮಪ್ರಿಯಾ ಅವರಂತಹ ಪ್ರಮುಖ ಸದಸ್ಯರನ್ನು ಒಳಗೊಂಡಿದೆ.

ಇದನ್ನೂ ಓದಿ: 'ಹೃದಯವಿದ್ರಾವಕ': ನಟಿಯರ ಮೇಲಿನ ದೌರ್ಜನ್ಯದ ಬಗ್ಗೆ ಸ್ವರಾ ಭಾಸ್ಕರ್​ ಪ್ರತಿಕ್ರಿಯೆ - Swara Bhasker

ನಟ ಸಿದ್ದಿಕ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. 2016ರಲ್ಲಿ ಸಿದ್ದಿಕ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ನಟಿಯೊಬ್ಬರಿಂದ ಕೇಳಿ ಬಂದಿದೆ. ಮ್ಯೂಸಿಯಂ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.