ETV Bharat / entertainment

'ಕಂಗನಾ ವಿರುದ್ಧ ಅಕಾಲಿದಳ ಮುಖಂಡನ ನಿಕೃಷ್ಟ ಹೇಳಿಕೆ ಖಂಡನೀಯ': ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಆಕ್ರೋಶ - AKALI LEADER ON KANGANA RANAUT

author img

By ETV Bharat Karnataka Team

Published : Aug 30, 2024, 8:16 PM IST

ಪಂಜಾಬ್‌ನ ಮಾಜಿ ಸಂಸದರು ಹಾಗೂ ಶಿರೋಮಣಿ ಅಕಾಲಿದಳದ (ಅಮೃತಸರ) ಮುಖ್ಯಸ್ಥ ಸಿಮ್ರಂಜಿತ್ ಸಿಂಗ್ ಮಾನ್ ಅವರು ಕಂಗನಾ ರಣಾವತ್ ಬಗ್ಗೆ ಮಾತನಾಡಿರುವುದನ್ನು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ತೀವ್ರವಾಗಿ ಖಂಡಿಸಿದೆ.

C Manjula and Kangana Ranaut
ಸಿ.ಮಂಜುಳಾ, ಕಂಗನಾ ರಣಾವತ್ (ETV Bharat, ANI)

ಬೆಂಗಳೂರು: ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರ ಹೇಳಿಕೆಯನ್ನು ಖಂಡಿಸುವ ಭರದಲ್ಲಿ ಅಕಾಲಿದಳದ ಮುಖಂಡ ಮುಖಂಡ, ಮಾಜಿ ಸಂಸದ ಸಿಮ್ರಂಜಿತ್​​ ಸಿಂಗ್​​ ಮಾನ್ ಅವರು 'ಕಂಗನಾ ಅವರಿಗೆ ಅತ್ಯಾಚಾರದ ಅನುಭವ ಇದೆ' ಎಂಬ ತುಚ್ಛ ಮತ್ತು ಅತ್ಯಂತ ನಿಷ್ಕೃಷ್ಟ ಹೇಳಿಕೆ ನೀಡಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುವುದಾಗಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷರಾದ ಸಿ ಮಂಜುಳಾ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮಂಜುಳಾ, ಸಂಸದೆ ಮತ್ತು ಮಹಿಳೆಯನ್ನು ಅವಮಾನಿಸಿದ ಇವರ ನಿಷ್ಕೃಷ್ಟ ಮನಸ್ಥಿತಿಯನ್ನು ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ. ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ-ಹತ್ಯೆ ಪ್ರಕರಣ ಇಡೀ ದೇಶದಾದ್ಯಂತ ಆಕ್ರೋಶ ನಿರ್ಮಾಣ ಮಾಡಿರುವ ಈ ಸಂದರ್ಭದಲ್ಲಿ ಅವರು ಈ ಹೇಳಿಕೆ ಕೊಟ್ಟಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯಗಳ ಸೂಕ್ಷ್ಮ ಪರಿಸ್ಥಿತಿಯನ್ನು ಗ್ರಹಿಸದೇ ಈ ಒಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಇದು ದುಶ್ಯಾಸನ ಮತ್ತು ದುರ್ಯೋಧನರ ಇತಿಹಾಸವನ್ನು ನೆನಪಿಸುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಪಂಜಾಬ್‌ನ ಮಾಜಿ ಸಂಸದರು ಹಾಗೂ ಶಿರೋಮಣಿ ಅಕಾಲಿದಳದ (ಅಮೃತಸರ) ಮುಖ್ಯಸ್ಥ ಸಿಮ್ರಂಜಿತ್ ಸಿಂಗ್ ಮಾನ್ ಅವರು ಕಂಗನಾ ಬಗ್ಗೆ ಮಾತನಾಡುವಾಗ "ಅತ್ಯಾಚಾರದ ಸಾಕಷ್ಟು ಅನುಭವವಿದೆ" ಎಂದು ಹೇಳಿದ್ದಾರೆಂದು ವರದಿಯಾಗಿದೆ. ಈ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ಸಂಸದೆ ಕಂಗನಾ ರಣಾವತ್​​ಗೆ ಅತ್ಯಾಚಾರ ಬೆದರಿಕೆ: ಬುಲೆಟ್ಸ್ ನನ್ನನ್ನು ಶಾಂತಗೊಳಿಸಲು ಸಾಧ್ಯವಿಲ್ಲವೆಂದ ನಟಿ - Rape Threats to Kangana Ranaut

ಬಾಲಿವುಡ್​​ ನಟಿ ಕಂಗನಾ ಅವರ ಬಹುನಿರೀಕ್ಷಿತ 'ಎಮರ್ಜೆನ್ಸಿ' ಸಿನಿಮಾ ಬಿಡುಗಡೆಗೆ ಅಣಿಯಾಗುತ್ತಿದೆ. ಆದ್ರೆ ನಟಿ ಸಾಕಷ್ಟು ಬೆದರಿಕೆಗಳನ್ನು ಸ್ವೀಕರಿಸುತ್ತಿದ್ದಾರೆ. ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು ಕೆಲವರು ನನ್ನ ಮೇಲೆ ಬಂದೂಕು ಚಲಾಯಿಸಲು ತರಬೇತಿ ಪಡೆದುಕೊಂಡಿದ್ದಾರೆ. ಆದ್ರೆ ನಾನು ಯಾವುದೇ ಬುಲೆಟ್‌ಗಳು ಮತ್ತು ಬೆದರಿಕೆಗಳಿಗೆ ನಡುಗುವವಳಲ್ಲ. ಅತ್ಯಾಚಾರ ಬೆದರಿಕೆಗಳು ಬರುತ್ತಿವೆ. ಆದ್ರೆ ನನ್ನನ್ನು ಮೌನಗೊಳಿಸಲು ಸಾಧ್ಯವಿಲ್ಲ. ಎಲ್ಲಾ ವಿರೋಧಗಳು ಮತ್ತು ಒತ್ತಡಗಳನ್ನು ತಡೆದುಕೊಳ್ಳಲು ಸಿದ್ಧ ಆದ್ರೆ ನನ್ನ ಧ್ವನಿ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕರಿಯಾ ರೀ ರಿಲೀಸ್: ಉದ್ಧಟತನ ತೋರಿದ ಅಭಿಮಾನಿಗಳ ಮೇಲೆ ಪೊಲೀಸರಿಂದ ಲಘು ಲಾಠಿ ಪ್ರಹಾರ - Darshan Fans On Media

2024ರ ಬಹುನಿರೀಕ್ಷಿತ 'ಎಮರ್ಜೆನ್ಸಿ' ಚಿತ್ರ ಸೆಪ್ಟೆಂಬರ್​​ 6ರಂದು ಬಿಡುಗಡೆ ಆಗಲಿದೆ. ದಿವಂಗತ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜೀವನಾಧಾರಿತ ಸಿನಿಮಾವಾಗಿದ್ದು, ಕಂಗನಾ ಇಂದಿರಾಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ 2021ರಲ್ಲಿ ಬಂದ ತಲೈವಿ ಸಿನಿಮಾದಲ್ಲಿ ನಟಿ-ರಾಜಕಾರಣಿ ದಿವಂಗತ ಜೆ ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.