ಜಗತ್ತಿನೆದುರು ಎಷ್ಟಾದರೂ ಸುಳ್ಳು ಹೇಳಬಹುದೇನೋ? ತಮ್ಮನ್ನು ತಾವು ಬೇರೆ ಯಾರೋ ಎಂಬಂತೆ ಪ್ರೊಜೆಕ್ಟ್ ಮಾಡಿಕೊಳ್ಳಬಗುದೇನೋ? ನಟಿಸಬಹುದೇನೋ? ಯಾಮಾರಿಸಬಹುದೇನೋ?!. ಆದರೆ ಆತ್ಮಸಾಕ್ಷಿಯ ಕನ್ನಡಿಯ ಎದುರು ನಿಂತಾಗ ನಮಗೆ ಎದುರಾಗುವುದು ಸುತ್ತಲಿನ ಜಗತ್ತಲ್ಲ. ಅಲ್ಲಿನ ಜೈಕಾರ, ಹೀಗಳಿಕೆಗಳಲ್ಲ. ಹೊಗಳಿಕೆ ತೆಗಳಿಕೆಗಳಲ್ಲ. ಬದಲಾಗಿ, ಆತ್ಮಸಾಕ್ಷಿಯ ಕನ್ನಡಿಯ ಎದುರು ಕಾಣಿಸುವುದು ನಮ್ಮ ಚಿತ್ರವೇ. ಅದು ನಮ್ಮೊಳಗಿನ ನೈಜ ವ್ಯಕ್ತಿತ್ವ. ಅಲ್ಲಿ ನಮ್ಮ ಚಿತ್ರದ ಜೊತೆಗೆ ಕಾಣಿಸುವುದು ಹೊರಜಗತ್ತಿನೆದುರು ನಾವು ನಡೆದುಕೊಂಡ ರೀತಿ. ಅದು ಪ್ರಾಮಾಣಿಕವಾಗಿದ್ದರೆ ಹೂವಂತೆ ನೇವರಿಸುತ್ತದೆ. ಅಪ್ರಾಮಾಣಿಕವಾಗಿದ್ದರೆ ಮುಳ್ಳಂತೆ ಚುಚ್ಚುತ್ತದೆ.
ಬಿಗ್ ಬಾಸ್ ಪ್ರೋಮೋ: ಇಂಥದ್ದೊಂದು ಆತ್ಮಸಾಕ್ಷಿಯ ಕನ್ನಡಿ ಈಗ ಬಿಗ್ ಬಾಸ್ ಮನೆಯ ಫಿನಾಲೆ ವಾರದ ಆರು ಸ್ಪರ್ಧಿಗಳ ಎದುರಿಗೆ ಇಡಲಾಗಿದೆ. ಆಗ ಅವರ ರಿಯಾಕ್ಷನ್ ಹೇಗಿತ್ತು? ಎಂಬುದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಸೆರೆಯಾಗಿದೆ. 'ಆಟದಲ್ಲಿ ಕಳೆದುಹೋಗಿರೋ ಸ್ಪರ್ಧಿಗಳು ತಮ್ಮನ್ನು ತಾವು ಮರಳಿ ಪಡೀತಾರಾ?' ಎಂಬ ಶೀರ್ಷಿಕೆಯಡಿ ಬಿಗ್ ಬಾಸ್ ಪ್ರೋಮೋ ಅನಾವರಣಗೊಂಡಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ.
![Bigg Boss](https://etvbharatimages.akamaized.net/etvbharat/prod-images/24-01-2024/20581553_anve3awfrsd.jpg)
ಫಿನಾಲೆಗೆ ಇನ್ನೆರಡೇ ದಿನ ಬಾಕಿ ಇರುವಾಗ ಬಿಗ್ ಬಾಸ್ ಸ್ಪರ್ಧಿಗಳು ತಮ್ಮ ಚಿತ್ರಣ ಸಿಗುವ ಆಳೆತ್ತರದ ಕನ್ನಡಿಯೆದುರು ಕುಳಿತಿದ್ದಾರೆ. ವಿನಯ್ ಗೌಡ ಅವರು ತಮ್ಮ ಬಿಂಬವನ್ನು ನೋಡಿಕೊಂಡು, 'ಹಲೋ ಮಿಸ್ಟರ್ ವಿನಯ್ ಗೌಡ' ಎಂದು ಕರೆದುಕೊಂಡಿದ್ದಾರೆ. 'ಈ ಮನೆಯಲ್ಲಿ ಜಾಸ್ತಿ ಮಾತನಾಡಿರುವುದು ನಿನ್ ಜೊತೆ. ಯಾರೂ ಜೊತೆಗಿಲ್ಲದಿರುವಾಗ ನೀನು ಇರುತ್ತೀಯ. ನನ್ನನ್ನು ನಾನು ಹುಡುಕಿಕೊಂಡಿದ್ದೇನೆ. ಐ ಆಮ್ ವೆರಿ ಪ್ರೌಢ್ ಆಫ್ ಯು' ಎಂದು ಸಂಗೀತಾ ತಮ್ಮ ಬಿಂಬದ ಎದುರು ಕಣ್ಣೀರಾಗಿದ್ದಾರೆ. 'ನನ್ನನ್ನು ನಾನೇ ನೋಡಿಕೊಂಡಾಗ ಕೆಲ ಸಂಗತಿಗಳು ಮನಸ್ಸಿನಲ್ಲಿ ಚುಚ್ಚುತ್ತವೆ' ಎಂದು ಪ್ರತಾಪ್ ಓಪನ್‌ಅಪ್ ಆಗಿದ್ದಾರೆ. 'ಫ್ರೆಂಡ್‌ಷಿಪ್‌ನ ಯೂಸ್ ಮಾಡ್ಕೊತಾನೆ ಅಂತಾರೆ' ಎಂದ ಕಾರ್ತಿಕ್ ಇಲ್ಲ ಎನ್ನುವಂತೆ ತಲೆಯಾಡಿಸಿದ್ದಾರೆ.
![Bigg Boss](https://etvbharatimages.akamaized.net/etvbharat/prod-images/24-01-2024/20581553_waebwjf.jpg)
ಇದನ್ನೂ ಓದಿ: ಅಜಯ್ ರಾವ್ ಬರ್ತ್ಡೇಗೆ ಸ್ಪೆಷಲ್ ಗಿಫ್ಟ್: 'ಧೈರ್ಯಂ' ನಿರ್ದೇಶಕರ ಜೊತೆ ಸಿನಿಮಾ ಘೋಷಣೆ
ಇಷ್ಟು ದಿನಗಳಲ್ಲಿ ಕಟ್ಟಿಕೊಂಡ ತಮ್ಮದೇ ವ್ಯಕ್ತಿತ್ವ ಚಿತ್ರಣಗಳನ್ನು ಕನ್ನಡಿಯೆದುರು ಕಂಡ ವಿಶಿಷ್ಟ ಘಳಿಗೆಗೆ ಬಿಗ್ ಬಾಸ್ ಸ್ಪರ್ಧಿಗಳು ಕರಗಿದ್ದಾರೆ. ತಮ್ಮನ್ನು ತಾವು ತೆರೆದುಕೊಂಡಿದ್ದಾರೆ.
-
ಆಟದಲ್ಲಿ ಕಳೆದುಹೋಗಿರೋ ಸ್ಪರ್ಧಿಗಳು ತಮ್ಮನ್ನು ತಾವು ಮರಳಿ ಪಡೀತಾರಾ?
— Colors Kannada (@ColorsKannada) January 24, 2024 " class="align-text-top noRightClick twitterSection" data="
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/uHFfg4uBJa
">ಆಟದಲ್ಲಿ ಕಳೆದುಹೋಗಿರೋ ಸ್ಪರ್ಧಿಗಳು ತಮ್ಮನ್ನು ತಾವು ಮರಳಿ ಪಡೀತಾರಾ?
— Colors Kannada (@ColorsKannada) January 24, 2024
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/uHFfg4uBJaಆಟದಲ್ಲಿ ಕಳೆದುಹೋಗಿರೋ ಸ್ಪರ್ಧಿಗಳು ತಮ್ಮನ್ನು ತಾವು ಮರಳಿ ಪಡೀತಾರಾ?
— Colors Kannada (@ColorsKannada) January 24, 2024
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/uHFfg4uBJa
ಇದನ್ನೂ ಓದಿ: ಧ್ರುವ ಸರ್ಜಾರ 'ಕೆ.ಡಿ' ಅಡ್ಡಕ್ಕೆ ಬಳುಕುವ ಬಳ್ಳಿ ನೋರಾ ಫತೇಹಿ ಎಂಟ್ರಿ