ETV Bharat / entertainment

ಬುಡಕಟ್ಟು ಜನಾಂಗದವರೊಂದಿಗೆ ಕುಣಿದು ಸಂಭ್ರಮಿಸಿದ ದುನಿಯಾ ವಿಜಯ್​​: ವಿಡಿಯೋ - Bheema Promotion - BHEEMA PROMOTION

ಆಗಸ್ಟ್​​ 9ರಂದು ಬಿಡುಗಡೆ ಆಗಲಿರುವ 'ಭೀಮ' ಚಿತ್ರದ ಪ್ರಮೋಶನ್​​​ ಜೋರಾಗಿ ನಡೆಯುತ್ತಿದೆ.

Bheema Promotion
'ಭೀಮ' ಪ್ರಚಾರದಲ್ಲಿ ದುನಿಯಾ ವಿಜಯ್ (ETV Bharat)
author img

By ETV Bharat Karnataka Team

Published : Jul 25, 2024, 2:29 PM IST

ಬುಡಕಟ್ಟು ಜನಾಂಗದವರೊಂದಿಗೆ ಕುಣಿದು ಸಂಭ್ರಮಿಸಿದ ವಿಜಯ್​​ (ETV Bharat)

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಬೇಡಿಕೆ ಹೊಂದಿರುವ ನಟ ದುನಿಯಾ ವಿಜಯ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹುಟ್ಟುಹಾಕಿರುವ 'ಭೀಮ' ಚಿತ್ರ ಆಗಸ್ಟ್​​ 9ರಂದು ಚಿತ್ರಮಂದಿರ ಪ್ರವೇಶಿಸಲಿದೆ.

ಕೋವಿಡ್​ ಸಂದರ್ಭ ಸಿನಿಮಾ ಪ್ರದರ್ಶನ ಹಾಗೂ ಚಿತ್ರೀಕರಣ ಸ್ಥಗಿತಗೊಂಡಿತ್ತು. ನಂತರ, ಥಿಯೇಟರ್​​ಗಳಿಗೆ ಪ್ರೇಕ್ಷಕರು ಬರೋದು ಕಷ್ಟವಾಗಿತ್ತು. ಅಂಥಾ ಪರಿಸ್ಥಿತಿಯಲ್ಲಿ ನಟ ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡಿ, ಅಭಿನಯಿಸಿದ 'ಸಲಗ' ಚಿತ್ರವನ್ನು ಬಿಡುಗಡೆ ಮಾಡಲಾಯ್ತು. 'ಸಲಗ' ಮಾಸ್ ಎಂಟರ್​​ಟೈನ್ ಚಿತ್ರವಾದ ಹಿನ್ನೆಲೆಯಲ್ಲಿ ಹಿಟ್ ಆಗಿ ದುನಿಯಾ ವಿಜಯ್​ಗೆ ಯಶಸ್ವಿ ನಿರ್ದೇಶಕನ ಪಟ್ಟ ತಂದು ಕೊಟ್ಟಿತ್ತು. ಸದ್ಯ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಸಿನಿಮಾಗಳಿಲ್ಲದೇ ಪ್ರೇಕ್ಷಕರು ಥಿಯೇಟರ್​​ಗಳಿಗೆ ಬರುತ್ತಿಲ್ಲ ಎಂಬ ಆರೋಪವಿದೆ. ಈ ಸಂದರ್ಭ ವಿಜಯ್ ನಟಿಸಿ, ನಿರ್ದೇಶನ ಮಾಡಿರೋ ಈ 'ಭೀಮ' ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.

ಮಾಸ್ ಟೈಟಲ್​ನಿಂದಲೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್​​ ಟಾಕ್ ಆಗುತ್ತಿರುವ 'ಭೀಮ' ಚಿತ್ರ ಟ್ರೇಲರ್​​ ಇಲ್ಲದೇ ಹಾಡುಗಳಿಂದ ಸದ್ದು ಮಾಡಿದೆ. ಬ್ಯಾಡ್ ಬಾಯ್ಸ್, ಐ ಲವ್ ಯೂ ಕಣೆ ಮತ್ತು ಡೋಂಟ್ ವರಿ ಬೇಬಿ ಚಿನ್ನಮ್ಮ ಹಾಡುಗಳ ಮೂಲಕ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದೆ.

ಈ ಮಧ್ಯೆ ಬೂಮ್ ಬೂಮ್ ಬೆಂಗಳೂರು ಎಂಬ ಹಾಡು ಪಡ್ಡೆ ಹುಡುಗರ ಹಾಟ್ ಫೇವರೆಟ್ ಆಗಿದ್ದು, ಸಖತ್ ಟ್ರೆಂಡಿಂಗ್​​ನಲ್ಲಿದೆ. ಈ ಹಾಡಿನ್ನು ನಾಗರಹೊಳೆ ಸಮೀಪದ ಬುಡಕಟ್ಟು ತಂಡದ 30 ಸದಸ್ಯರು ಹಾಡಿರೋದು ವಿಶೇಷ. ಈ ಹಿನ್ನೆಲೆಯಲ್ಲಿ ಬುಡಕಟ್ಟು ಜನಾಂಗದ ಪ್ರತಿಭೆಗಳನ್ನು ಕರೆಸಿ ಮಾಧ್ಯಮದವರೆದುರು ಅವರ ಪ್ರತಿಭೆಯನ್ನು ಪ್ರದರ್ಶಿಸಲಾಯಿತು. ಭೀಮ ಚಿತ್ರದ ಹಾಡು ಹಾಗೂ ಅವರ ಬುಡಕಟ್ಟು ಜನಾಂಗದ ಹಾಡನ್ನು ಹಾಡುವ ಮೂಲಕ ಗಮನ ಸೆಳೆದರು. ಇವರ ಜೊತೆ ವಿಜಯ್ ಡ್ಯಾನ್ಸ್ ಮಾಡುವ ಮೂಲಕ ಈ ಪ್ರತಿಭೆಗಳಿಗೆ ಸಾಥ್​ ನೀಡಿದರು.

ಈ ಸಂದರ್ಭ ಮಾತನಾಡಿದ ನಟ-ನಿರ್ದೇಶಕ ದುನಿಯಾ ವಿಜಯ್, ನಾನು ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಬೇಕೆಂಬ ಉದ್ದೇಶದಿಂದ ನಾಗರಹೊಳೆ ಸಮೀಪದ ಬುಡಕಟ್ಟು ಜನಾಂಗದವರ ಮನೆಗೆ ಹೋಗಿ ಅವರ ಕಷ್ಟಗಳನ್ನು ವಿಚಾರಿಸಿ ಅವರಿಗೆ ಅವಕಾಶ ನೀಡಿದ್ದೇನೆ ಎಂದು ತಿಳಿಸಿದರು.

'ಭೀಮ' ಪ್ರಚಾರದಲ್ಲಿ ದುನಿಯಾ ವಿಜಯ್ (ETV Bharat)

ನಮ್ಮ ಈ ಭೀಮ ಸಿನಿಮಾ ಕಥೆ ಏನೆಂದು ಕೇಳಿದ್ರೆ, ಸದ್ಯ ಸಮಾಜದಲ್ಲಿ ನಡೆಯುತ್ತಿರುವ ಡ್ರಗ್ಸ್ ವಿಚಾರ, ಇಂದಿನ ಯುವಕರೇಕೆ ರೌಡಿಸಂಗೆ ಎಂಟ್ರಿ ಕೊಡುತ್ತಅರೆ ಅನ್ನೋದನ್ನು ತೋರಿಸುವ ಜೊತೆಗೆ ಒಂದು ಸಾಮಾಜಿಕ ಸಂದೇಶ ಇದೆ. ಆ ಸೋಷಿಯಲ್​ ಮೆಸೇಜ್​ ಬಗ್ಗೆ ಪ್ರಶ್ನಿಸಿದಾಗ, ನಾನು ಕಥೆ ಹೇಳೋದಿಲ್ಲ. ಆಗಸ್ಟ್ 9ರಂದು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಎಂದು ಜಾಣ್ಮೆಯ ಉತ್ತರ ನೀಡಿದ್ರು.

ಇದನ್ನೂ ಓದಿ: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಪ್ರಣಿತಾ: ಬೇಬಿ ಬಂಪ್​​ ಫೋಟೋ ಶೇರ್ ಮಾಡಿದ ನಟಿ - Pranitha Subhash Pregnant

ನೈಜ ಘಟನೆ ಆಧರಿತ ಕಥೆಯಾಗಿರುವ 'ಭೀಮ' ಸಹಜವಾಗಿ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿದೆ. ವಿಜಯ್ ಜೊತೆಗೆ ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್, ಕಲ್ಯಾಣಿ, ಅ ಶ್ವಿನಿ ಮತ್ತು ಪ್ರಿಯಾ ಸೇರಿದಂತೆ ದೊಡ್ಡ ತಾರಬಳಗ ಇದೆ.

ಇದನ್ನೂ ಓದಿ: ಅಜಿತ್ ನಟನೆಯ 2 ಸಿನಿಮಾ ನಿರ್ದೇಶಿಸಲಿದ್ದಾರೆ ಪ್ರಶಾಂತ್​ ನೀಲ್​: ಹೊಂಬಾಳೆ ಫಿಲ್ಮ್ಸ್​​​ನಿಂದ ನಿರ್ಮಾಣ - Prashanth Neel Ajith movie

ಈ ಚಿತ್ರಕ್ಕೆ ಶಿವಸೇನಾ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಚರಣ್ ರಾಜ್ ಅವರ ಸಂಗೀತ ಮತ್ತು ಮಾಸ್ತಿ ಡೈಲಾಗ್ಸ್ ಇದೆ. ದೀಪು ಎಸ್ ಕುಮಾರ್ ಸಂಕಲನ ನಿರ್ವಹಿಸಿದ್ರೆ, ಚೇತನ್ ಡಿಸೋಜಾ, ವಿನೋದ್, ಗೌತಮ್ ಅವರ ಸಾಹಸ ಮತ್ತು ಧನು ನೃತ್ಯ ನಿರ್ದೇಶನ 'ಭೀಮ'ನಿಗಿದೆ. ಕೃಷ್ಣ ಸಾರ್ಥಕ್, ಜಗದೀಶ್ ಗೌಡ ನಿರ್ಮಾಣ ಮಾಡಿರೋ 'ಭೀಮ' ಎಲ್ಲಾ ಆ್ಯಂಗಲ್​ನಿಂದಲೂ‌ ಚಿತ್ರರಂಗದಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಆಗಸ್ಟ್ 9ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ 'ಭೀಮ'ನ ಆಟ ಶುರುವಾಗಲಿದ್ದು, ಪ್ರೇಕ್ಷಕರು ಹೇಗೆ ಸ್ಪಂದಿಸುತ್ತಾರೆಂಬುದನ್ನು ಕಾದು ನೋಡಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.