ETV Bharat / entertainment

'ಉತ್ತರಕಾಂಡ'ದ ವೀರವ್ವ ಪಾತ್ರದಲ್ಲಿ ಜಾಕಿ ಬೆಡಗಿ ಭಾವನಾ‌ ಮೆನನ್; ಪೋಸ್ಟರ್ ರಿಲೀಸ್ - Bhavana Poster - BHAVANA POSTER

ಡಾಲಿ ಧನಂಜಯ್ ಅಭಿನಯದ 'ಉತ್ತರಕಾಂಡ‌' ಚಿತ್ರದಿಂದ ಬಹುಭಾಷಾ‌ ತಾರೆ ಭಾವನಾ ಮೆನನ್ ಪೋಸ್ಟರ್ ಅನಾವರಣಗೊಂಡಿದೆ.

bhavana menon poster
ಭಾವನಾ‌ ಮೆನನ್ 'ಉತ್ತರಕಾಂಡ' ಪೋಸ್ಟರ್ (ETV Bharat)
author img

By ETV Bharat Karnataka Team

Published : Jun 8, 2024, 1:29 PM IST

ಡಾಲಿ ಧನಂಜಯ್ ಅಭಿನಯದ 'ಉತ್ತರಕಾಂಡ‌' ಇದೀಗ ಮತ್ತೊಮ್ಮೆ ಸದ್ದು ಮಾಡಿದೆ. ಬಹುಭಾಷಾ‌ ತಾರೆ ಭಾವನಾ ಮೆನನ್ ಈ ಚಿತ್ರದಲ್ಲಿ ವೀರವ್ವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಚಿತ್ರತಂಡ ಪೋಸ್ಟರ್ ಅನಾವರಣಗೊಳಿಸಿದೆ. ಭಾವನಾ ಅವರನ್ನು ಕರುನಾಡ ಚಕ್ರವರ್ತಿ ಡಾ. ಶಿವ ರಾಜ್​​ಕುಮಾರ್ ತೆರೆ ಮೇಲೆ ಕಾಣಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

bhavana menon poster
ಭಾವನಾ‌ ಮೆನನ್ 'ಉತ್ತರಕಾಂಡ' ಪೋಸ್ಟರ್ (ETV Bharat)

ರೋಹಿತ್ ಪದಕಿ ನಿರ್ದೇಶನದ "ಉತ್ತರಕಾಂಡ" ಒಂದು ಆ್ಯಕ್ಷನ್ ಡ್ರಾಮಾ. ಚಿತ್ರದಲ್ಲಿ ಐಶ್ವರ್ಯಾ ರಾಜೇಶ್, ದಿಗಂತ್ ಮಂಚಾಲೆ, ರಂಗಾಯಣ ರಘು, ಚೈತ್ರ ಆಚಾರ್, ವಿಜಯ್ ಬಾಬು ಸೇರಿದಂತೆ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ: ಮಾಧ್ಯಮ ಕ್ಷೇತ್ರದ ದಿಗ್ಗಜ ರಾಮೋಜಿ ರಾವ್​ಗೆ ಭಾರತ ರತ್ನ ನೀಡುವಂತೆ ನಿರ್ದೇಶಕ ರಾಜಮೌಳಿ ಒತ್ತಾಯ - Ramoji Rao

ಚಿತ್ರಕ್ಕೆ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡುತ್ತಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ. ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಮಾಡಿದ್ದು, ಅನಿಲ್ ಅನಿರುದ್ಧ್ ಮುಖ್ಯ ಸಂಕಲನಕಾರರಾಗಿ ಚಿತ್ರತಂಡದ ಭಾಗವಾಗಿದ್ದಾರೆ. ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ ರಾಜ್ ಅವರು ಕೆ.ಆರ್.ಜಿ. ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ: ಅಭಿನಯ ಚಕ್ರವರ್ತಿ ಸುದೀಪ್​ಗೆ ಡಾಲಿ ನಟನೆಯ 'ಕೋಟಿ' ಚಿತ್ರದ ಮೊದಲ‌ ಟಿಕೆಟ್ - Kotee First Ticket

ETV Bharat Logo

Copyright © 2024 Ushodaya Enterprises Pvt. Ltd., All Rights Reserved.