ETV Bharat / entertainment

'ಭಕ್ಷಕ್'​ ಟ್ರೈಲರ್​ ಬಿಡುಗಡೆ: ಕ್ರೈಂ ಥ್ರಿಲ್ಲರ್​ ಚಿತ್ರದಲ್ಲಿ ನಿರ್ಭಿತ ಪತ್ರಕರ್ತೆಯಾಗಿ ನಟಿ ಭೂಮಿ ಪಡ್ನೇಕರ್​​ - ಪತ್ರಕರ್ತೆಯಾಗಿ ನಟಿ ಭೂಮಿ ಪಡ್ನೇಕರ್​​

ಇದೇ ಫೆಬ್ರವರಿ 9ರಂದು ಈ ಚಿತ್ರ ನೆಟ್​ಫ್ಲಿಕ್ಸ್​ ಒಟಿಟಿ ಮೂಲಕ ಬಿಡುಗಡೆಯಾಗಲಿದೆ.

bhakshak-trailer-out-bhumi-pednekar-plays-a-fierce-journalist-in-crime-thriller-watch

author img

By ETV Bharat Karnataka Team

Published : Jan 31, 2024, 4:34 PM IST

ಹೈದರಾಬಾದ್​: ಭೂಮಿ ಪಡ್ನೇಕರ್​ ಅಭಿನಯದ ಕ್ರೈಂ ಥ್ರಿಲ್ಲರ್​​ ಚಿತ್ರ 'ಭಕ್ಷಕ್'​ ಸಿನಿಮಾದ ಟ್ರೈಲರ್​ ಇಂದು ಬಿಡುಗಡೆಯಾಗಿದೆ. ಮಹಿಳಾ ಪತ್ರಕರ್ತೆಯೊಬ್ಬರ ಸತ್ಯಾನ್ವೇಷಣೆಯ ಕಥೆಯನ್ನು ಇದು ಹೊಂದಿದೆ. ನೈಜ ಘಟನೆ ಆಧಾರಿತ ಈ ಚಿತ್ರದಲ್ಲಿ ಭೂಮಿ ಪಡ್ನೆಕರ್​​ ವೈಶಾಲಿ ಸಿಂಗ್​ ಎಂಬ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳ ಅನಾವರಣ ಮತ್ತು ಅಪರಾಧ ಲೋಕದ ಮೇಲೆ ಬೆಳಕು ಚೆಲ್ಲುವ ತನಿಖಾ ಪತ್ರಕರ್ತೆಯಾಗಿ ಪಾತ್ರ ಪೋಷಣೆ ಮಾಡಿದ್ದಾರೆ

ಈ ಚಿತ್ರವೂ ಫೆಬ್ರವರಿ 9ರಂದು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಲಿದೆ. ಚಿತ್ರವನ್ನು ಪುಲ್ಕಿಟ್​​ ನಿರ್ದೇಶಿಸಿದ್ದು, ಭೂಮಿ ಪಡ್ನೇಕರ್​ ಜೊತೆಗೆ ಸಂಜಯ್​​ ಮಿಶ್ರಾ, ಆದಿತ್ಯ ಶ್ರೀವಾತ್ಸವ ಮತ್ತು ಸಾಯಿ ತಮ್ಹಂಕರ್​​​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಕಿಯರ ಆಶ್ರಯತಾಣದಲ್ಲಿ ನಡೆಯುವ ಮಕ್ಕಳ ಮೇಲಿನ ದೌರ್ಜನ್ಯದ ಅನಾವರಣ ಚಿತ್ರದ ಒನ್​ಲೈನ್​ ಸ್ಟೋರಿಯಾಗಿದೆ.

'ಕೊಠಡಿ ತುಂಬಾ ಅನಾಥ ಯುವತಿಯರು ತುಂಬಿರುವ ದೃಶ್ಯದಿಂದ ಟ್ರೈಲರ್​ ಆರಂಭವಾಗುತ್ತದೆ. ಮಕ್ಕಳ ಜೊತೆಯಲ್ಲಿ ತಪ್ಪು ನಡೆದಿರುವ ಕುರಿತು ತಿಳಿಯುವ ಭೂಮಿ ಈ ಸಂಬಂಧ ಮಾಹಿತಿಯನ್ನು ಸಂಗ್ರಹಿಸಲು ಮುಂದಾಗುತ್ತಾಳೆ. ಈ ತನಿಖೆ ಸಾಗಿದಂತೆ ಪ್ರಕರಣದಲ್ಲಿ ಸಚಿವರು ಸೇರಿದಂತೆ ಅನೇಕ ಉನ್ನತ ಅಧಿಕಾರಿಗಳು ಭಾಗಿಯಾಗಿರುವುದು ತಿಳಿದು ಬರುತ್ತದೆ. ಈ ಪ್ರಕರಣದ ಸತ್ಯಾಂಶವನ್ನು ಹೊರತೆಗೆಯುವಲ್ಲಿ ಪತ್ರಕರ್ತೆ ಎದುರಿಸುವ ಸವಾಲುಗಳನ್ನು ಸಿನಿಮಾ ತೆರೆದಿಡುತ್ತದೆ.

ಸಿನಿಮಾ ಕುರಿತು ಮಾತನಾಡಿರುವ ನಟಿ ಭೂಮಿ ಪಡ್ನೇಕರ್​, ಸೂಕ್ಷ್ಮ ಮತ್ತು ವಿವಾದಾತ್ಮಕ ಕಥಾ ವಿಷಯದ 'ಭಕ್ಷಕ್​​' ಸಿನಿಮಾದಲ್ಲಿ ಕಾರ್ಯ ನಿರ್ವಹಿಸುವುದು ಸವಾಲುದಾಯಕವಾಗಿತ್ತು. ಚಿತ್ರವೂ ಪ್ರತಿಯೊಬ್ಬರನ್ನು ಒಮ್ಮೆ ಕಲುಕುತ್ತದೆ ಎಂದಿದ್ದಾರೆ. 'ಧಮ್​ ಲಗಕೇ ಹೈಸಾ' ಬಳಿಕ ಈ ಚಿತ್ರದಲ್ಲಿ ನಟಿ ಭೂಮಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಹಿಂದೆಂದೂ ಕಂಡಿರದ ಪಾತ್ರದಲ್ಲಿ ಅವರು ಕಂಡಿದ್ದಾರೆ. ಚಿತ್ರದ ಟ್ರೈಲರ್​ ಅನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಟಿ ಹಂಚಿಕೊಂಡಿದ್ದಾರೆ.

ಈ ಚಿತ್ರವನ್ನು ಶಾರುಖ್​ ಖಾನ್​ ನಿರ್ಮಾಣ ಸಂಸ್ಥೆ ಆಗಿರುವ​ ರೆಡ್​ ಚಿಲ್ಲಿಸ್​ ಎಂಟರ್​ಟೈನಮೆಂಟ್​ ಬ್ಯಾನರ್​ನಲ್ಲಿ ನಿರ್ಮಾಣ ಮಾಡಲಾಗಿದೆ. ಗೌರಿ ಖಾನ್​ ಮತ್ತು ಗೌರವ್​​ ವರ್ಮಾ ಬಂಡವಾಳ ಹೂಡಿದ್ದಾರೆ. ಬಾಲಕಿಯರ ವಿರುದ್ಧ ನಡೆಯುವ ದೌರ್ಜನ್ಯದ ಕಥೆಯನ್ನು ಬಿಚ್ಚಿಡುವ ಪ್ರಯತ್ನ ಚಿತ್ರದಲ್ಲಿ ನಡೆಸಲಾಗಿದೆ. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವ ಚಿತ್ರ ಇದಾಗಿದೆ.

ಇದನ್ನೂ ಓದಿ: ಶಿಲ್ಪಾ ಶೆಟ್ಟಿಗೆ 'ಚಾಂಪಿಯನ್ಸ್ ಆಫ್ ಚೇಂಜ್' ಪ್ರಶಸ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.