ETV Bharat / entertainment

'ಮ್ಯಾಕ್ಸ್‌' ಆಟ ಶುರು: ಆ್ಯಕ್ಷನ್​​ ಅವತಾರದಲ್ಲಿ ಅಬ್ಬರಿಸಿದ ಅಭಿನಯ ಚಕ್ರವರ್ತಿ - Sudeep Max Teaser - SUDEEP MAX TEASER

ಅಭಿನಯ ಚಕ್ರವರ್ತಿ ಸುದೀಪ್​ ಮುಖ್ಯಭೂಮಿಕೆಯ 'ಮ್ಯಾಕ್ಸ್' ಟೀಸರ್ ಅನಾವರಣಗೊಂಡಿದೆ.

Sudeep 'Max' poster
ಸುದೀಪ್​​ 'ಮ್ಯಾಕ್ಸ್‌' ಪೋಸ್ಟರ್ (ETV Bharat)
author img

By ETV Bharat Karnataka Team

Published : Jul 16, 2024, 1:52 PM IST

Updated : Jul 16, 2024, 2:19 PM IST

ಕನ್ನಡ ಚಿತ್ರರಂಗ ಅಲ್ಲದೇ ಬಹುಭಾಷೆಗಳಲ್ಲಿ ದೊಡ್ಡ ಮಟ್ಟದ ಕ್ರೇಜ್​​​ ಕ್ರಿಯೇಟ್ ಮಾಡಿರೋ ಸಿನಿಮಾ ''ಮ್ಯಾಕ್ಸ್''. ಸ್ಯಾಂಡಲ್​ವುಡ್​ನ ಸ್ಟಾರ್ ಹೀರೋ ಕಿಚ್ಚ ಸುದೀಪ್​​​ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಅದಕ್ಕೆ ತಕ್ಕಂತೆ ಇಂದು ಟೀಸರ್​​ ಅನಾವರಣಗೊಂಡಿದ್ದು, ಸಿನಿಪ್ರಿಯರು ಹುಬ್ಬೇರಿಸಿದ್ದಾರೆ.

2022ರಲ್ಲಿ ಸೂಪರ್ ಹಿಟ್ ಸಿನಿಮಾಗಳ ಮೂಲಕ ಸದ್ದು ಮಾಡಿದ್ದ ಸ್ಯಾಂಡಲ್​ವುಡ್​​​ನಲ್ಲಿ ಬಿಗ್​​ ಬಜೆಟ್​​ ಸಿನಿಮಾಗಳ ಬಿಡುಗಡೆಗೆ ಸಾಕಷ್ಟು ಜನರು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಈ ನಡುವೆ ಶಿವಣ್ಣನ ಕೆಲ ಚಿತ್ರಗಳು, ದರ್ಶನ್​ ಅಭಿನಯದ ಕಾಟೇರ ಸಿನಿಮಾಗಳು ಬಂದು ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನಲೆ ತೇಲಿಸಿದ್ದಾರೆ. ಅದಾಗ್ಯೂ, ಸುದೀಪ್​​, ಯಶ್​​, ರಿಷಬ್​ ಶೆಟ್ಟಿ ಅವರ ಪ್ಯಾನ್​ ಇಂಡಿಯಾ ಸಿನಿಮಾಗಳಿಗಾಗಿ ಸಾಕಷ್ಟು ಕಾತರವಿದೆ.

ಆದ್ರೆ ಕನ್ನಡದ ಬಿಗ್​ ಬಜೆಟ್​​​ ಸಿನಿಮಾಗಳಲ್ಲಿ ಬ್ಯುಸಿಯಾಗಿರುವವರು ಮಾತ್ರ ತಮ್ಮ ಚಿತ್ರದಿಂದ ಹೆಚ್ಚೇನೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಪ್ರೇಕ್ಷಕರಿಗೆ ಅದ್ಭುತ ಸಿನಿಮೀಯ ಅನುಭವ ನೀಡಲು ಚಿತ್ರತಂಡಗಳು ಮುಂದಾಗಿರೋ ಹಿನ್ನೆಲೆ, ಬಹುನಿರೀಕ್ಷಿತ ಪ್ರೊಜೆಕ್ಟ್​ಗಳು ಕೊಂಚ ಸಮಯ ತೆಗೆದುಕೊಂಡಿದೆ. ಇದೀಗ ಅನಾವರಣಗೊಂಡಿರುವ 'ಮ್ಯಾಕ್ಸ್‌' ಟೀಸರ್​​ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಬ್ಲಾಕ್​​ಬಸ್ಟರ್ ಬರಲಿದೆ ಅನ್ನೋ ವಿಶ್ವಾಸವನ್ನು ಅಭಿಮಾನಿಗಳು ಮತ್ತು ಸಿನಿಪ್ರಿಯರು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಹೈದರಾಬಾದ್‌ ಡ್ರಗ್​​ ಕೇಸ್​: ನಟಿ ರಾಕುಲ್ ಪ್ರೀತ್ ಸಿಂಗ್ ಸಹೋದರ ಅಮನ್ ಸೇರಿ 10 ಮಂದಿ ಅರೆಸ್ಟ್! - Hyderabad Drug Case

ಬಹುನಿರೀಕ್ಷಿತ ಟೀಸರ್​ನಲ್ಲಿ ಮಾಸ್​​ ಅವತಾರದಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಸುದೀಪ್ ಅವರನ್ನು ಕಂಡು ಅಭಿಮಾನಿಗಳು ಸಿನಿಮಾ ಬಗ್ಗೆ ಉತ್ಸುಕರಾಗಿದ್ದಾರೆ. ಟೀಸರ್​​ನಲ್ಲಿನ ಆ್ಯಕ್ಷನ್ ದೃಶ್ಯಗಳು ಮೈಜುಂ ಎನಿಸುವಂತಿದ್ದು, ಮಾಸ್ ಅಭಿಮಾನಿಗಳ ಕಣ್ಮನ ಸೆಳೆದಿದೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಮೂಡಿಬರುತ್ತಿರುವ 'ಮ್ಯಾಕ್ಸ್' ಒಂದು ಮಾಸ್ ಚಿತ್ರವಾಗಿದ್ದು, ಟೀಸರ್​​ನಲ್ಲಿರುವ ಡೈಲಾಗ್ಸ್​​​​ ಬಲು ಆಕರ್ಷಕವಾಗಿದೆ. ಸುದೀಪ್​ ಸೀನ್ಸ್ ಈಗಾಗಲೇ ಭರ್ಜರಿ ಸದ್ದು ಮಾಡಿದ್ದು, ಸಿನಿಮಾ ಯಾವಾಗ ಬಿಡುಗಡೆ ಆಗಲಿದೆ ಅನ್ನೋ ಕುತೂಹಲವನ್ನು ಸಿನಿಪ್ರಿಯರು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಜನ್ಮ ದಿನಕ್ಕೂ ಮುನ್ನ ಅಭಿಮಾನಿಗಳೊಂದಿಗೆ ಸೂಪರ್​ ಸ್ಟಾರ್ ಸೂರ್ಯ ರಕ್ತದಾನ: ವಿಡಿಯೋ ಇಲ್ಲಿದೆ ನೋಡಿ - Suriya Donates Blood

ವಿಜಯ್ ಕಾರ್ತಿಕೇಯ ಆ್ಯಕ್ಷನ್​​ ಕಟ್​ ಹೇಳುತ್ತಿರುವ ಆ್ಯಕ್ಷನ್ ಥ್ರಿಲ್ಲರ್ 'ಮ್ಯಾಕ್ಸ್'ನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜೊತೆಗೆ ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಸೇರಿದಂತೆ ಮೊದಲಾದವರು ಬಣ್ಣ ಹಚ್ಚುತ್ತಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಕಲೈಪುಲಿ ಎಸ್ ತನು ಅವರು ವಿ‌ ಕ್ರಿಯೇಷನ್ಸ್ ಬ್ಯಾನರ್ ಹಾಗೂ ಕಿಚ್ಚ ಸುದೀಪ್ ತಮ್ಮ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಟೀಸರ್​ನಿಂದ ಧೂಳ್ ಎಬ್ಬಿಸುತ್ತಿರುವ 'ಮ್ಯಾಕ್ಸ್' ಅನ್ನು ಶೀಘ್ರದಲ್ಲೇ ಪ್ರೇಕ್ಷಕರೆದುರು ತರುವ ನಿಟ್ಟಿನಲ್ಲಿ ಚಿತ್ರತಂಡ ಕೆಲಸ ಮಾಡುತ್ತಿದೆ.

Last Updated : Jul 16, 2024, 2:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.