ಹೈದರಾಬಾದ್: ಚಿತ್ರ ನಿರ್ಮಾಪಕ ಆನಂದ್ ಪಂಡಿತ್ ಮಗಳು ಐಶ್ವರ್ಯಾ ಮತ್ತು ಅಳಿಯ ಸಾಹೀಲ್ ಅವರಿಗಾಗಿ ಅದ್ದೂರಿ ಆರತಕ್ಷತೆ ಪಾರ್ಟಿ ಆಯೋಜಿಸಿದ್ದು, ಅನೇಕ ಬಿ ಟೌನ್ ನಟ-ನಟಿಯರು ಕಾರ್ಯಕ್ರಮಕ್ಕೆ ಹಾಜರಾಗಿ, ಜೋಡಿಗಳಿಗೆ ಶುಭಕೋರಿದ್ದಾರೆ. ಸಮಾರಂಭಕ್ಕೆ ಮುನ್ನ ರೆಡ್ ಕಾರ್ಪೆಟ್ನಲ್ಲಿ ನಟ ಶಾರುಖ್ ಖಾನ್ರಿಂದ ನಟಿ ತಾಪ್ಸಿ ಪನ್ನುವರೆಗೆ ತಮ್ಮ ಝಲಕ್ ಹರಿಸಿದ್ದಾರೆ.
ಇನ್ನು ಕಾರ್ಯಕ್ರಮಕ್ಕೆ ಕುಟುಂಬದ ಹೊರತಾಗಿ ಒಬ್ಬರೇ ಆಗಮಿಸಿದ್ದ ನಟ ಶಾರುಖ್ ಖಾನ್ ಕಪ್ಪು ಬಣ್ಣದ ಸೂಟ್ನಲ್ಲಿ ಕಂಗೊಳಿಸಿದರು. ಇದೇ ವೇಳೆ, ಅವರು ಫೋಟೋಗ್ರಾಫರ್ಗಳಿಗೂ ಶುಭ ಕೋರಿ ನಿರ್ಮಾಪಕರ ಜೊತೆಗೆ ಫೋಟೋಗೆ ಫೋಸ್ ನೀಡಿದರು. ಇನ್ನು ಇತ್ತೀಚಿಗಷ್ಟೇ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿ ಸುದ್ದಿಯಾಗಿದ್ದ ನಟಿ ತಾಪ್ಸಿ ಪನ್ನು ಕೂಡ ಕಾರ್ಯಕ್ರಮದಲ್ಲಿ ಹಾಜರಿದ್ದರು. ಕೆಂಪು ಬಣ್ಣದ ಸೀರೆಯಲ್ಲಿ, ಅದಕ್ಕೊಪ್ಪುವ ಕಿವಿಯೊಲೆ ತೊಟ್ಟು ಅಂದವಾಗಿ ಕಾಣಿಸಿಕೊಂಡರು.
ಇನ್ನು ನಟ ಇಮ್ರಾನ್ ಹಶ್ಮಿ ಕೂಡ ಕಪ್ಪು ಬಣ್ಣದ ಸೂಟ್ನಲ್ಲಿ ಕಾಣಿಸಿಕೊಂಡಿದ್ದು, ಅವರ ಜೊತೆ ಅವರ 'ಮರ್ಡರ್' ಚಿತ್ರದ ನಟಿ ಮಲ್ಲಿಕಾ ಶೆರಾವತ್ ಜೊತೆಯಾದರು. ಈ ಇಬ್ಬರು ಜೋಡಿ ಹಲವು ವರ್ಷಗಳ ಬಳಿಕ ಒಟ್ಟಿಗೆ ಫೋಟೋಗೆ ಫೋಸ್ ಕೊಟ್ಟಿದ್ದು, ವಿಶೇಷವಾಗಿತ್ತು. ನಟ ರಾಜ್ಕುಮಾರ್ ರಾವ್ ಕೂಡ ಹೆಂಡತಿ, ನಟಿ ಪತ್ರಲೇಖ ಪೌಲ್ ಜೊತೆಗೆ ಕಾರ್ಯಕ್ರಮಕ್ಕೆ ಆಗಮಿಸಿ, ಜೋಡಿಗೆ ಶುಭ ಕೋರಿದರು.
'ಡ್ರೀಮ್ ಗರ್ಲ್ 2' ಚಿತ್ರ ನಟ ಆಯುಷ್ಮಾನ್ ಖುರಾನಾ ಕೂಡ ಕಾರ್ಯಕ್ರಮದಲ್ಲಿ ತಮ್ಮ ಸ್ಟೈಲಿಶ್ ಲುಕ್ನಲ್ಲಿ ಕಂಡು ಬಂದರು. ನಟಿ ಭೂಮಿ ಪಡ್ನೆಕರ್ ಕಪ್ಪು ಬಣ್ಣದ ಸೀರೆಯಲ್ಲಿ ಮನಸೊರೆಗೊಂಡರು. ದಿ ಕೇರಳ ಸ್ಟೋರಿ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ನಟಿ ಆದ ಶರ್ಮಾ ಕೂಡ ಕಾರ್ಯಕ್ರಮಕ್ಕೆ ಆಗಮಿಸಿದರು. ಇವರು ಹೊರತಾಗಿ ಜೀತೇಂದ್ರ, ತನಿಷಾ ಮುಖರರ್ಜಿ, ಅಂಕಿತಾ ಲೋಕಂಡೆ, ಮನಿಶ್ ಪೌಲ್ ಸೇರಿದಂತೆ ಮತ್ತಷ್ಟು ಬಿ ಟೌನ್ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಗಮನ ಸೆಳೆದರು.
ಆನಂದ್ ಪಂಡಿತ್ ಬಾಲಿವುಡ್ ಚಿತ್ರ ನಿರ್ಮಾಪಕ, ವಿತರಕ ಮತ್ತು ರಿಯಲ್ ಎಸ್ಟೇಟ್ ಡೆವಲಪರ್ ಆಗಿದ್ದಾರೆ. ಆನಂದ್ ಪಂಡಿತ್ ಜೀ ಮೋಷನ್ ಪಿಕ್ಚರ್ ಎಂಬ ಫಿಲ್ಮ್ ಸ್ಟುಡಿಯೋವನ್ನು ಹೊಂದಿ್ದಾರೆ. 'ಸರ್ಕಾರ್ 2', 'ಮಿಸ್ಸಿಂಗ್', 'ಗ್ರೇಟ್ ಗ್ರಾಂಡ್ ಮಸ್ತಿ' ಸಿನಿಮಾದ ವಿತರಣಾ ಹಕ್ಕನ್ನು ಪಡೆದಿದ್ದಾರೆ. ಜೊತೆಗೆ 'ಥಾಂಕ್ ಗಾಡ್', 'ದಿ ಬಿಗ್ ಬುಲ್', 'ಚೆಹ್ರೆ' ಚಿತ್ರಕ್ಕೆ ಬಂಡವಾಳ ಕೂಡಾ ಹೂಡಿದ್ದಾರೆ.
ಇದನ್ನೂ ಓದಿ: ಬಣ್ಣದ ಲೋಕದಲ್ಲಿ ಬಗೆಬಗೆ ಕನಸು ಕಂಡ ಕರಾವಳಿ ಬೆಡಗಿಗೆ ನಿರಾಶೆ: ಎರಿಕಾ ಫರ್ನಾಂಡಿಸ್ ಹೇಳಿದ್ದೇನು ಗೊತ್ತೇ?