ETV Bharat / entertainment

ಮಾಲಿವುಡ್​ಗೆ ಅನುಷ್ಕಾ ಶೆಟ್ಟಿ ಎಂಟ್ರಿ: ಪ್ಯಾನ್​​ ಇಂಡಿಯಾವಲ್ಲದೇ, ಕೊರಿಯನ್​ನಲ್ಲೂ ಸಿನಿಮಾ ಬಿಡುಗಡೆ

author img

By ETV Bharat Karnataka Team

Published : Mar 13, 2024, 2:15 PM IST

'ಕಥನಾರ್' ಸಿನಿಮಾ ಮೂಲಕ ಜನಪ್ರಿಯ ನಟಿ ಅನುಷ್ಕಾ ಶೆಟ್ಟಿ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

Anushka Shetty
ಅನುಷ್ಕಾ ಶೆಟ್ಟಿ

ಅನುಷ್ಕಾ ಶೆಟ್ಟಿ, ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟಿ. 2005ರಿಂದ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿನ ಪಾತ್ರಗಳಿಗೆ ಜೀವ ತುಂಬಿರುವ ಶೆಟ್ಟಿ ಮಲಯಾಳಂಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ರೋಜಿನ್ ಥಾಮಸ್ ಅವರ ಹಿಸ್ಟಾರಿಕಲ್ ಫ್ಯಾಂಟಸಿ ಡ್ರಾಮಾ 'ಕಥನಾರ್' (Kathanar - The Wild Sorcerer) ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಜಯಸೂರ್ಯ ಮತ್ತು ವಿನೀತ್ ಅವರೊಂದಿಗೆ ನಟಿಸಲಿದ್ದಾರೆ. ಅನುಷ್ಕಾ ಅವರನ್ನು ಚಿತ್ರತಂಡ ಸ್ವಾಗತಿಸಿದ್ದು, ನಿರ್ದೇಶಕರು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​​​ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಫೋಟೋಗಳನ್ನು ಹಂಚಿಕೊಂಡ ರೋಜಿನ್​​ ಥಾಮಸ್, "ನಮ್ಮ ಕಥನಾರ್​​ ಪಯಣದಲ್ಲಿ ಅಸಾಧಾರಣ ಪ್ರತಿಭೆ ಅನುಷ್ಕಾ ಶೆಟ್ಟಿ ಅವರೊಂದಿಗೆ ಕೆಲಸ ಮಾಡುತ್ತಿರುವುದು ಗೌರವಕರ ವಿಚಾರ'' ಎಂದು ಬರೆದುಕೊಂಡಿದ್ದಾರೆ. ಫೋಟೋಗಳಲ್ಲಿ, ಅನುಷ್ಕಾ ಚಿತ್ರತಂಡದಿಂದ ಹೂಗುಚ್ಛ ಹಾಗೂ ಭಗವಾನ್ ಶ್ರೀಕೃಷ್ಣನ ವಿಗ್ರಹವನ್ನು ಸ್ವೀಕರಿಸುತ್ತಿರುವುದನ್ನು ಕಾಣಬಹುದು. ಅನುಷ್ಕಾ ಕೂಡ ಈ ಫೋಟೋಗಳನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು, "ಕಥನಾರ್ ಜಗತ್ತಿಗೆ ಪ್ರವೇಶಿಸಿದೆ" ಎಂದು ಬರೆದುಕೊಂಡಿದ್ದಾರೆ.

'ಕಥನಾರ್' ಚಿತ್ರವನ್ನು ಆರ್ ರಮಾನಂದ್ ಅವರು ಬರೆದಿದ್ದಾರೆ. ಎರಡು ಭಾಗಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಈ ಚಿತ್ರವು 9ನೇ ಶತಮಾನದ ಕ್ರಿಶ್ಚಿಯನ್ ಪಾದ್ರಿ ಹಾಗೂ ಮ್ಯಾಜಿಕ್​ ಸಾಮರ್ಥ್ಯಗಳನ್ನು ಹೊಂದಿದ್ದ ಕಡಮತ್ತತ್ತು ಕಥನಾರ್ ಅವರನ್ನು ಚಿತ್ರಿಸಲಿದೆ. ಜಯಸೂರ್ಯ ಅವರು ಕಥನಾರ್ ಪಾತ್ರವನ್ನು ನಿರ್ವಹಿಸಿದರೆ, ಅನುಷ್ಕಾ ಕಲ್ಲಿಯಂಕಟ್ಟು ನೀಲಿ ಎಂಬ ಪ್ರೇತದ ಪಾತ್ರ ನಿರ್ವಹಿಸಲಿದ್ದಾರೆ. ಕಣ್ಮನ ಸೆಳೆಯುವ ರೂಪವತಿಯಾಗಿ ಅನುಷ್ಕಾ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಮೊದಲ ಭಾಗವು ಇಂಗ್ಲಿಷ್, ತಮಿಳು, ತೆಲುಗು, ಹಿಂದಿ, ಬೆಂಗಾಲಿ, ಕನ್ನಡ, ಚೈನೀಸ್, ಫ್ರೆಂಚ್, ಕೊರಿಯನ್, ಇಟಾಲಿಯನ್, ರಷ್ಯನ್, ಇಂಡೋನೇಷಿಯನ್ ಮತ್ತು ಜಪಾನೀಸ್ ಭಾಷೆಗಳಲ್ಲಿ ಡಬ್​ ಆಗಿ ಬಿಡುಗಡೆ ಆಗಲಿದೆ. ಅಲ್ಲದೇ ಇದೇ ವರ್ಷ ಚಿತ್ರ ತೆರೆಗಪ್ಪಳಿಸೋ ನಿರೀಕ್ಷೆ ಇದೆ.

ಇದನ್ನೂ ಓದಿ: ಪಂಜಾಬಿ ಸಂಪ್ರದಾಯದಂತೆ ಕೃತಿ-ಪುಲ್ಕಿತ್ ಮದುವೆ: ಇಂದು ಮೆಹಂದಿ ಶಾಸ್ತ್ರ, ಸಮಾರಂಭಗಳು ಶುರು

ಅನುಷ್ಕಾ ಶೆಟ್ಟಿ ಮೂಲತಃ ಮಂಗಳೂರಿನವರು. ತುಳು ಕುಟುಂಬಕ್ಕೆ ಸೇರಿದ್ದಾರೆ. ಆದ್ರೆ ಈವರೆಗೆ ಕನ್ನಡ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. 2005ರಲ್ಲಿ ಪುರಿ ಜಗನ್ನಾಥ್ ಅವರ ಸೂಪರ್ ಚಿತ್ರದೊಂದಿಗೆ ಸಿನಿಪಯಣ ಆರಂಭಿಸಿದರು. ವಿಕ್ರಮಾರ್ಕುಡು, ಅರುಂಧತಿ ಮತ್ತು ವೇದಂ, ಬಾಹುಬಲಿಯಂತಹ ಹಿಟ್​ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಕೊನೆಯದಾಗಿ, 2023ರಲ್ಲಿ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ 'ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ'ಯಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: 'ಬ್ಲಿಂಕ್' ಸಿನಿಮಾಗೆ ಶಿವರಾಜ್​​ಕುಮಾರ್​​ ಸಪೋರ್ಟ್; ಹೊಸ ತಂಡಗಳ ಬೆನ್ನು ತಟ್ಟಬೇಕೆಂದ ನಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.