ETV Bharat / entertainment

ಅನು ಸಿರಿಮನೆ ಖ್ಯಾತಿಯ ಮೇಘಾ ಶೆಟ್ಟಿ ಅಕ್ಕನ ಮದುವೆ: ವಿಡಿಯೋ ಹಂಚಿಕೊಂಡ 'ಜೊತೆ ಜೊತೆಯಲಿ' ನಟಿ - Megha Shetty

author img

By ETV Bharat Karnataka Team

Published : Jul 27, 2024, 3:00 PM IST

'ಜೊತೆ ಜೊತೆಯಲಿ' ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಅವರ ಅಕ್ಕ ನಿಶಾ ಶೆಟ್ಟಿ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಮದುವೆ ಆಗಿದ್ದಾರೆ.

actress Megha Shetty
ನಟಿ ಮೇಘಾ ಶೆಟ್ಟಿ (ETV Bharat)

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾದ 'ಜೊತೆ ಜೊತೆಯಲಿ' ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಮನೆಯಲ್ಲಿ ಮದುವೆ ಸಂಭ್ರಮ. ಸೋಷಿಯಲ್​ ಮೀಡಿಯಾದಲ್ಲಿ ಮದುವೆ ಕಾರ್ಯಕ್ರಮಗಳ ಫೋಟೋ ವಿಡಿಯೋಗಳು ವೈರಲ್​​ ಆಗಿವೆ. ಇದೀಗ ಸ್ವತಃ ನಟಿ ಮೇಘಾ ಶೆಟ್ಟಿ ಅವರೇ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಸಖತ್​ ಸದ್ದು ಮಾಡುತ್ತಿದೆ.

ಮೇಘಾ ಶೆಟ್ಟಿ ಅವರ ಅಕ್ಕ ನಿಶಾ ಶೆಟ್ಟಿ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಮದುವೆ ಆಗಿದ್ದಾರೆ. ಅನು ಸಿರಿಮನೆ ಪಾತ್ರದ ಮೂಲಕವೇ ಮನೆ ಮಾತಾಗಿದ್ದ ಮೇಘಾ ಶೆಟ್ಟಿ ವಿಡಿಯೋ ಒಂದನ್ನು ಶೇರ್ ಮಾಡಿ, ಹ್ಯಾಪಿ ಮ್ಯಾರಿಡ್​ ಲೈಫ್​ ಮೈ ಲವ್ಸ್​​ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬರ್ತ್​​ಡೇಗೆ ಶುಭಕೋರಿದವರಿಗೆ ಧನ್ಯವಾದ ಅರ್ಪಿಸಿದ ಅಮೃತಾ ಅಯ್ಯಂಗಾರ್: ಮುಂದಿನ ಚಿತ್ರಗಳ ಘೋಷಣೆಗೆ ಫ್ಯಾನ್ಸ್​ ನಿರೀಕ್ಷೆ - Amrutha Iyengar

2019ರ ಸೆಪ್ಟೆಂಬರ್​ 9ರಂದು ಪ್ರಸಾರ ಪ್ರಾರಂಭಿಸಿದ 'ಜೊತೆ ಜೊತೆಯಲಿ' ಧಾರಾವಾಹಿ 2023ರ ಮೇ 19ರಂದು ಮುಕ್ತಾಯಗೊಂಡಿತು. ಕನ್ನಡ ಚಿತ್ರರಂಗದ ಖ್ಯಾತ ನಟ ಅನಿರುದ್ಧ್ ಜತ್ಕರ್​​​ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ನಾಯಕಿಯಾಗಿ ಮೇಘಾ ಶೆಟ್ಟಿ ಮಿಂಚು ಹರಿಸಿದ್ದರು. ತಮ್ಮ ಪಾತ್ರ 'ಅನು ಸಿರಿಮನೆ' ಹೆಸರಿನಲ್ಲೇ ಜನಪ್ರಿಯರಾದರು. ಸೀರಿಯಲ್​​ ಕಂಟೆಂಟ್, ಕಲಾವಿದರ ನಟನೆ ಜನಮನ ಗೆಲ್ಲುವಲ್ಲಿ ಯಶ ಕಂಡಿತು. ಕಿರುತೆರೆಯಲ್ಲೇ ಸಾಕಷ್ಟು ಜನಪ್ರಿಯರಾದ ಮೇಘಾ ಹಿರಿತೆರೆಯಲ್ಲೂ ಕಾಣಿಸಿಕೊಂಡಿದ್ದಾರೆ. ಅತಿ ಮಡಿಮೆ ಅವಧಿಯಲ್ಲಿ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ತ್ರಿಬ್ಬಲ್​ ರೈಡಿಂಗ್​, ದಿಲ್​ಪಸಂದ್​​, ಕೈವ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಗೋಲ್ಡನ್ ಸ್ಟಾರ್ ಗಣೇಶ್ 'ದ್ವಾಪರ' ಸಾಂಗ್​​ ಟ್ರೆಂಡಿಂಗ್​​​ನಲ್ಲಿ: ಸಿನಿಮಾ ನೋಡುವ ಕಾತರ ಹೆಚ್ಚಳ - Dwapara Song

ETV Bharat Logo

Copyright © 2024 Ushodaya Enterprises Pvt. Ltd., All Rights Reserved.