ETV Bharat / entertainment

'ಬಿಸಿ ಬಿಸಿ -Ice cream' ಚಿತ್ರದ ಜವಾರಿ ಸಾಂಗ್ ಮೆಚ್ಚಿದ ರಾಕ್​ಸ್ಟಾರ್ ಅನಿರುದ್ಧ್ ರವಿಚಂದರ್ - ಸಿರಿ ರವಿಕುಮಾರ್

ಅರವಿಂದ್ ಐಯ್ಯರ್ & ಸಿರಿ ರವಿಕುಮಾರ್ ಜೋಡಿಯಾಗಿ ಅಭಿನಯಿಸಿರುವ ಬಿಸಿ ಬಿಸಿ Ice Cream ಸಿನಿಮಾದ ಹಾಡೊಂದು ರಿಲೀಸ್​ ಆಗಿ, ಸಿನಿಪ್ರಿಯರ ಗಮನ ಸೆಳೆದಿದೆ.

Rockstar Anirudh Ravichander
ರಾಕ್​ಸ್ಟಾರ್ ಅನಿರುದ್ಧ್ ರವಿಚಂದರ್
author img

By ETV Bharat Karnataka Team

Published : Jan 29, 2024, 2:45 PM IST

ಚಂದನವನದಲ್ಲಿ ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಬಿಸಿಬಿಸಿ-ice cream ಸಿನಿಮಾದ "ಹೆದರ್ಕೊಳ್ದೆ ಹೃದಯಾ ಕೊಟ್ಟೆ ಅದನ್ನಿಟ್ಕೊಂಡವ್ಳು ಉಜ್ಜಾಡ್ಬಿಟ್ಳು.." ಜವಾರಿ ಹಾಡು ಬಿಡುಗಡೆಯಾಗಿದೆ. ರಾಕ್​ ಸ್ಟಾರ್​ ಖ್ಯಾತಿಯ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಡನ್ನು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಬಿಡುಗಡೆ ಮಾಡಿ, ಹಾಡನ್ನು ಮೆಚ್ಚಿಕೊಂಡಿರುವುದಲ್ಲದೆ, ಇಡೀ ತಂಡಕ್ಕೆ ಆಲ್​ ದಿ ಬೆಸ್ಟ್​ ಹೇಳಿದ್ದಾರೆ.

"ಬಿಸಿ-ಬಿಸಿ Ice-Cream" ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿರುವ ಅರವಿಂದ್​ ಶಾಸ್ತ್ರಿ ಅವರೇ, ಜವಾರಿ ಶೈಲಿಯ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಪ್ರೀತಿಯ ಪರಿವಾಳ ಖ್ಯಾತಿಯ ರಮೇಶ್ ಕುರುಬಗಟ್ಟಿ ಹಾಗೂ ರಾಮ್ ಹಾಡಿಗೆ ಧ್ವನಿಯಾಗಿದ್ದಾರೆ. ನಕುಲ್ ಅಭ್ಯಂಕರ್ ಸಂಗೀತ ಸಂಯೋಜನೆ ಹಾಡಿಗಿದೆ. ಡಾರ್ಕ್ ಕಾಮಿಡಿ ರೋಮ್ಯಾನ್ಸ್ ಕಥಾಹಂದರ ಹೊಂದಿರುವ, ಈ ಚಿತ್ರದಲ್ಲಿ ಅರವಿಂದ್ ಐಯ್ಯರ್ & ಸಿರಿ ರವಿಕುಮಾರ್ ಜೋಡಿಯಾಗಿ ನಟಿಸುತ್ತಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವುದು ಗಮನ ಸೆಳೆದಿದೆ. ವಿಭಿನ್ನವಾದ ಸಿನಿಮಾ ಕೊಡಲು ಈ ತಂಡ ಸಿದ್ಧವಾಗಿದೆ.

  • " class="align-text-top noRightClick twitterSection" data="">

ಅರವಿಂದ್ ಶಾಸ್ತ್ರಿ ಸಣ್ಣ ಗ್ಯಾಪ್ ನಂತರ ಈಗ ಮತ್ತೆ ಕಂಬ್ಯಾಕ್ ಮಾಡ್ತಿದ್ದಾರೆ. 4 ವರ್ಷದ ನಂತರ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಅರವಿಂದ್ ಶಾಸ್ತ್ರಿ, ಒಂದೊಳ್ಳೆ ಫ್ರೆಶ್ ಕಂಟೆಂಟ್ ಮೂಲಕ ಪ್ರೇಕ್ಷಕ ಪ್ರಭುಗಳ ಎದುರು ಹಾಜರಾಗುತ್ತಿದ್ದಾರೆ. ಇನ್ನು ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ, ಎನೋಷ್ ಒಲಿವೇರಾ ಛಾಯಾಗ್ರಹಣ ಈ ಚಿತ್ರಕ್ಕೆ ಇದೆ. ಬೋಯಿಲ್ಡ್ ಬೀನ್ಸ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಕ್ಷರ ಭಾರಧ್ವಾಜ್ 'ಬಿಸಿ-ಬಿಸಿ Ice-Cream' ಸಿನಿಮಾಗೆ ಬಂಡವಾಳ ಹಾಕಿದ್ದಾರೆ.

"ಬಿಸಿ ಬಿಸಿ Ice Cream", ಅನಾರೋಗ್ಯದಲ್ಲಿರುವ ಕ್ಯಾಬ್ ಡ್ರೈವರ್‌ ಜೀವನದಲ್ಲಿ ನಿಗೂಢ ಮಹಿಳೆಯೊಬ್ಬಳು ಬಂದಾಗ, ಅವಳು ಅವನ ದುಃಖಗಳಿಗೆ ಔಷಧ ಮತ್ತು ಅನೇಕ ಸಾಹಸಗಳಿಗೆ ನಾಂದಿಯಾಗುತ್ತಾಳೆ ಎಂಬ ಕಥೆಯ ಎಳೆಯನ್ನು ಇಟ್ಟುಕೊಂಡು ಅರವಿಂದ್ ಶಾಸ್ತ್ರೀ ಸಿನಿಮಾ ಮಾಡಿದ್ದಾರೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಮಾರ್ಚ್‌ನಲ್ಲಿ ಸಿನಿಮಾವನ್ನು ತೆರೆಗೆ ತರಲು‌ ಚಿತ್ರತಂಡ ಸಜ್ಜಾಗಿದೆ.

ಇದನ್ನೂ ಓದಿ: ರಾಗಿಣಿ ದ್ವಿವೇದಿ‌ 'ಇ-ಮೇಲ್' ಚಿತ್ರದ ಟೀಸರ್‌ ಬಿಡುಗಡೆಗೊಳಿಸಿದ ಶಿವ ರಾಜ್‌ಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.