ETV Bharat / entertainment

ಅನಿರುದ್ಧ್ ಜತ್ಕರ್ ದನಿಯಲ್ಲಿ 'chef ಚಿದಂಬರ'ನ ಟೈಟಲ್​ ಟ್ರ್ಯಾಕ್​: ಫ್ಯಾನ್ಸ್ ಫಿದಾ - Chef Chidambara - CHEF CHIDAMBARA

'chef ಚಿದಂಬರ' ಚಿತ್ರದ ಟೈಟಲ್​ ಟ್ರ್ಯಾಕ್​ ಅನಾವರಣಗೊಂಡಿದೆ.

Aniruddha Jatkar
ಅನಿರುದ್ಧ್ ಜತ್ಕರ್ (ETV Bharat)
author img

By ETV Bharat Karnataka Team

Published : May 11, 2024, 7:59 PM IST

ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಅನಿರುದ್ಧ್ ಜತ್ಕರ್ ನಟನೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'chef ಚಿದಂಬರ'. ಎಂ. ಆನಂದ್ ರಾಜ್ ಆ್ಯಕ್ಷನ್​ ಕಟ್ ಹೇಳಿರುವ ಈ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ವರ್ಕ್ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಚಿತ್ರ ತೆರೆಗೆ ಬರಲಿದೆ.

Aniruddha Jatkar
ಅನಿರುದ್ಧ್ ಜತ್ಕರ್ (ETV Bharat)

ಫಸ್ಟ್ ಲುಕ್ ಪೋಸ್ಟರ್​ನಿಂದಲೇ ಈ ಚಿತ್ರ ಸಾಕಷ್ಟು ಸದ್ದು ಮಾಡಿ, ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿದೆ. ಇದೀಗ ಚಿತ್ರದ ಟೈಟಲ್ ಟ್ರ್ಯಾಕ್ ಎ2 ಮ್ಯೂಸಿಕ್ ಮೂಲಕ ಅನಾವರಣಗೊಂಡಿದೆ. ಇದು ಚಿತ್ರದ ಮೊದಲ ಗೀತೆಯೂ ಹೌದು. ಶ್ರೀಗಣೇಶ್ ಪರಶುರಾಮ್ ಬರೆದು, ರಿತ್ವಿಕ್ ಮುರಳಿಧರ್ ಸಂಗೀತ ನೀಡಿರುವ ಈ ಹಾಡನ್ನು ನಾಯಕ ನಟ ಅನಿರುದ್ಧ್ ಅವರೇ ಹಾಡಿದ್ದಾರೆ.

Aniruddha Jatkar
ಅನಿರುದ್ಧ್ ಜತ್ಕರ್ (ETV Bharat)

ಅನಿರುದ್ಧ್ ಜತ್ಕರ್ ಗಾಯನಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಹಾಡಿನ ಕೆಲ ಭಾಗ ರ್‍ಯಾಪ್ ಶೈಲಿಯಲ್ಲಿದ್ದು ಅದನ್ನು ರೋಹಿತ್ ಅವರು ಹಾಡಿದ್ದಾರೆ. ಮೊದಲ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

  • " class="align-text-top noRightClick twitterSection" data="">

ಇದನ್ನೂ ಓದಿ: ರಾಮ್​ ಚರಣ್​​, ಅಲ್ಲು ಅರ್ಜುನ್​​​ ಸುತ್ತುವರಿದ ಸಾವಿರಾರು ಅಭಿಮಾನಿಗಳು: ವಿಡಿಯೋ ನೋಡಿ - Ram Charan Allu Arjun

ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ನಿರ್ಮಿಸಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆ ಗಣೇಶ್ ಪರಶುರಾಮ್ ಬರೆದಿದ್ದಾರೆ. ಉದಯಲೀಲಾ ಛಾಯಾಗ್ರಹಣ ನಿರ್ವಹಿಸಿದ್ದರೆ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಜೇತ್ ಚಂದ್ರ ಸಂಕಲನ, ವಿಕ್ರಾಂತ್ ರೋಣ ಖ್ಯಾತಿಯ ಆಶಿಕ್ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಅನಿರುದ್ಧ್ ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ "ಲವ್ ಮಾಕ್ಟೇಲ್" ಖ್ಯಾತಿಯ ರೆಚೆಲ್ ಡೇವಿಡ್‌ ಅಭಿನಯಿಸಿದ್ದಾರೆ. ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್‌, ಶಿವಮಣಿ ಮುಂತಾದವರು ತಾರಾ ಬಳಗದಲ್ಲಿದ್ದಾರೆ.

ಇದನ್ನೂ ಓದಿ: 'ಯಾರಿಗೂ ಹೀಗಾಗಬಾರದು': ಸಲ್ಮಾನ್ ಮನೆ ಹೊರಗಿನ ಗುಂಡಿನ ದಾಳಿ ಬಗ್ಗೆ ಮಾಜಿ ಗೆಳತಿ ಸೋಮಿ ಅಲಿ ಪ್ರತಿಕ್ರಿಯೆ - Somy Ali on Salman

ETV Bharat Logo

Copyright © 2024 Ushodaya Enterprises Pvt. Ltd., All Rights Reserved.