ETV Bharat / entertainment

ಝೈದ್ ಖಾನ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ 'ಉಪಾಧ್ಯಕ್ಷ' ನಿರ್ದೇಶಕ ಅನಿಲ್ ಕುಮಾರ್ - Zaid Khan

ಅನಿಲ್ ಕುಮಾರ್ ಅವರು ಝೈದ್ ಖಾನ್ ನಟನೆಯ ಮುಂದಿನ ಸಿನಿಮಾ ನಿರ್ದೇಶಿಸಲಿದ್ದಾರೆ.

Anil Kumar will direct a Zaid Khan movie
ಝೈದ್ ಖಾನ್ ಸಿನಿಮಾ ನಿರ್ದೇಶಿಸಲಿದ್ದಾರೆ ಅನಿಲ್ ಕುಮಾರ್
author img

By ETV Bharat Karnataka Team

Published : Mar 12, 2024, 8:05 PM IST

ಕನ್ನಡ ಚಿತ್ರರಂಗದಲ್ಲಿ ಈ ವರ್ಷದ ಮೊದಲ ಹಿಟ್ ಚಿತ್ರ 'ಉಪಾಧ್ಯಕ್ಷ'. ಈ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಅವರ ಮುಂದಿನ ಚಿತ್ರದ ತಯಾರಿ ಬಿರುಸಿನಿಂದ ಸಾಗಿದೆ. 'ಬನಾರಸ್' ಚಿತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಝೈದ್ ಖಾನ್ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿ ಕೊಳ್ಳಲಿದ್ದಾರೆ.

ಕಿಚ್ಚ ಸುದೀಪ್ ಅಭಿನಯದ ಕೆಂಪೇಗೌಡ‌ ಚಿತ್ರಕ್ಕೆ ಸಂಭಾಷಣೆ ಬರೆಯುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಅನಿಲ್ ಕುಮಾರ್ ಸುಮಂತ್ - ರಾಧಿಕಾ ಪಂಡಿತ್ ಅಭಿನಯದ ದಿಲ್ ವಾಲಾ ಚಿತ್ರದ ಮೂಲಕ ನಿರ್ದೇಶಕರಾದರು. ಮಾಲಾಶ್ರೀ ಅವರು ನಾಯಕಿಯಾಗಿ ನಟಿಸಿರುವ ಶಕ್ತಿ ಹಾಗೂ ಶರಣ್ ನಟನೆಯ ರ‍್ಯಾಂಬೊ 2 ಚಿತ್ರದ ನಿರ್ದೇಶಕರು ಸಹ ಅನಿಲ್ ಕುಮಾರ್ ಅವರೇ.

ಇತ್ತೀಚೆಗೆ ತೆರೆಕಂಡ ಚಿಕ್ಕಣ್ಣ ಅಭಿನಯದ 'ಉಪಾಧ್ಯಕ್ಷ' ಸಹ ದೊಡ್ಡಮಟ್ಟದಲ್ಲಿ ಯಶಸ್ಸು ಕಂಡಿದೆ. ಉಪಾಧ್ಯಕ್ಷ ನಂತರ ಅನಿಲ್ ಕುಮಾರ್ ನಿರ್ದೇಶನದ ಮುಂದಿನ ಚಿತ್ರ ಯಾವುದು? ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಅನಿಲ್ ಕುಮಾರ್ ಹಾಗೂ ಝೈದ್ ಖಾನ್ ಕಾಂಬಿನೇಶನ್​​ನಲ್ಲಿ ನೂತನ ಚಿತ್ರವೊಂದು ಮೂಡಿ ಬರಲಿದೆ.

ಇದನ್ನೂ ಓದಿ: 'ಮೆಹಬೂಬಾ' ಟ್ರೇಲರ್ ಅನಾವರಣಗೊಳಿಸಿದ ರೈತರು: ಶುಕ್ರವಾರ ತೆರೆಗಪ್ಪಳಿಸಲಿದೆ ಸಿನಿಮಾ

ಬನಾರಸ್ ಚಿತ್ರದ ನಂತರ ಸಾಕಷ್ಟು ಕಥೆ ಕೇಳಿರುವ ಝೈದ್ ಖಾನ್ ಅವರು ಈ ಚಿತ್ರದ ಕಥೆಯನ್ನು ಒಪ್ಪಿಕೊಂಡಿದ್ದಾರೆ. ಕ್ಲಾಸ್ ಅಂಡ್​​ ಮಾಸ್ ಆಡಿಯನ್ಸ್ ಇಷ್ಟಪಡುವ ಕಥೆಯಿದು. ಹೆಸರಾಂತ ನಿರ್ಮಾಣ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ನುರಿತ ತಂತ್ರಜ್ಞರ ದೊಡ್ಡ ತಂಡವೇ ಈ ಚಿತ್ರದಲ್ಲಿರಲಿದೆ. ತಾಂತ್ರಿಕವರ್ಗ ಹಾಗೂ ತಾರಾಬಳಗ ಕುರಿತು ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡುವುದಾಗಿ ನಿರ್ದೇಶಕ ಅನಿಲ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ನಿರ್ದೇಶಕ ವಿನಾಯಕ ಜನ್ಮದಿನ: 'ಫುಲ್ ಮೀಲ್ಸ್' ಚಿತ್ರ ತಂಡದಿಂದ ಸ್ಪೆಷಲ್​ ಗಿಫ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.