ETV Bharat / entertainment

ಹಿಂದಿ ಬಿಗ್ ಬಾಸ್ ಒಟಿಟಿ 3 ನಡೆಸಿಕೊಡಲಿದ್ದಾರೆ ಅನಿಲ್​ ಕಪೂರ್: ಪುತ್ರಿ ಸೋನಂ ಪ್ರತಿಕ್ರಿಯಿಸಿದ್ದು ಹೀಗೆ - Bigg Boss OTT 3 - BIGG BOSS OTT 3

'ಬಿಗ್ ಬಾಸ್ ಒಟಿಟಿ 3'ರ ಪ್ರೋಮೋ ಅನಾವರಣಗೊಂಡಿದೆ.

Sonam Kapoor and Anil Kapoor
ಸೋನಂ ಕಪೂರ್​, ಅನಿಲ್​ ಕಪೂರ್ (ETV Bharat)
author img

By ETV Bharat Karnataka Team

Published : Jun 1, 2024, 8:40 AM IST

ಕಾಯುವಿಕೆ ಕೊನೆಗೊಂಡಿದೆ. ಶುಕ್ರವಾರ, ಜಿಯೋ ಸಿನಿಮಾ ಬಹುನಿರೀಕ್ಷಿತ 'ಬಿಗ್ ಬಾಸ್ ಒಟಿಟಿ 3'ರ ಮೊದಲ ಪ್ರೋಮೋ ಅನಾವರಣಗೊಳಿಸಿದೆ. ಜೊತೆಗೆ ಹೊಸ ಹೋಸ್ಟ್‌ನ ಸುಳಿವು ಕೂಡ ಕೊಟ್ಟಿದೆ. 'ಬಿಗ್ ಬಾಸ್ ಒಟಿಟಿ 3' ಅನ್ನು ಹಿರಿಯ ನಟ ಅನಿಲ್​​ ಕಪೂರ್​​​ ಹೋಸ್ಟ್ ಮಾಡಲಿದ್ದಾರೆ. ವಿಡಿಯೋದಲ್ಲಿ ಅವರ ಸಂಪೂರ್ಣ ಚಿತ್ರಣ ಕೊಡದಿದ್ದರೂ, ಅನಿಲ್​ ಕಪೂರ್​​ ಎಂಬುದು ಬಹುತೇಕ ಖಚಿತವಾಗಿದೆ.

ಜನಪ್ರಿಯ ರಿಯಾಲಿಟಿ ಶೋನ ಈ ಸೀಸನ್‌ನಿಂದ ಹೊರಗುಳಿಯಲು ಬಾಲಿವುಡ್​ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಿರ್ಧರಿಸಿದ್ದು, ಕರಣ್ ಜೋಹರ್, ಅನಿಲ್ ಕಪೂರ್ ಮತ್ತು ಸಂಜಯ್ ದತ್ ಅವರ ಹೆಸರುಗಳು ಕೇಳಿಬಂದಿದ್ದವು. ಅನಿಲ್ ಕಪೂರ್ ಹೆಸರು ಸಖತ್​ ಸದ್ದು ಮಾಡಿದ್ದು, ಊಹೆಯಂತೆ ಅವರೇ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಪ್ರೋಮೋದಲ್ಲಿ ಅವರನ್ನು ಸಂಪೂರ್ಣವಾಗಿ ತೋರಿಸಲಾಗದಿದ್ದರೂ, ಇದು ಅನಿಲ್​​ ಕಪೂರ್ ಎಂದು ವೀಕ್ಷಕರು ನಂಬಿದ್ದಾರೆ. ಅಲ್ಲದೇ ಪುತ್ರಿ ಸೋನಂ ಕಪೂರ್​ ಪ್ರತಿಕ್ರಿಯಿಸಿರುವ ಹಿನ್ನೆಲೆ ಇದು ಬಹುತೇಕ ಖಚಿತವಾಗಿದೆ.

Sonam Kapoor IG Story
ಸೋನಂ ಕಪೂರ್ ಇನ್​ಸ್ಟಾಗ್ರಾಮ್​ ಸ್ಟೋರಿ (Sonam Kapoor's IG Story)

ಹೌದು, ಅನಿಲ್ ಕಪೂರ್ ಪುತ್ರಿ ಸೋನಮ್ ಕಪೂರ್‌ ಈ ಆಕರ್ಷಕ ಪ್ರೋಮೋಗೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಪ್ರೋಮೋವನ್ನು ಮರುಹಂಚಿಕೊಂಡ ಫ್ಯಾಶನ್​ ಐಕಾನ್​​​​, ಹೃದಯಸ್ಪರ್ಶಿ ಮಾತುಗಳಿಂದ ತಮ್ಮ ತಂದೆಯ ಗುಣಗಾನ ಮಾಡಿದ್ದಾರೆ. "ಅವರು (ಬಿಗ್​ ಬಾಸ್​), ಅತ್ಯಂತ ಪ್ರತಿಭಾವಂತ, ಪರಿಶ್ರಮಿ ಮತ್ತು ಹ್ಯಾಂಡ್​ಸಮ್​​ ವ್ಯಕ್ತಿಯನ್ನು ತಮ್ಮ ತಂಡದಲ್ಲಿ ಹೊಂದಿದ್ದಾರೆ" ಎಂದು ಸೋನಂ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಒಟಿಟಿ ಸೀಸನ್ 3 ಟೀಸರ್​ ರಿಲೀಸ್​: ಕಾರ್ಯಕ್ರಮ ನಡೆಸಿಕೊಡಲಿದ್ದಾರಾ ಅನಿಲ್​ ಕಪೂರ್? - Bigg Boss OTT

25 ಸೆಕೆಂಡ್​ಗಳುಳ್ಳ ಪ್ರೋಮೋ ಹೊಸ ಸೀಸನ್‌ನ ಒಂದು ನೋಟ ಒದಗಿಸಿದೆ. ಪ್ರೋಮೋ ಹಿಂದಿನ ಸೀಸನ್‌ಗಳ ಕ್ಷಣಗಳನ್ನು ಹೊಂದಿದ್ದು, ಸಖತ್​ ಸ್ಟೈಲಿಶ್​ ಆಗಿ ರೆಡಿ ಆಗಿರುವಂತೆ ತೋರುವ ವ್ಯಕ್ತಿಯ ಎಂಟ್ರಿಯಾಗುತ್ತದೆ. ಸಂಪೂರ್ಣ ವಿಡಿಯೋದಲ್ಲಿ ವ್ಯಕ್ತಿಯ ಮುಖ ಅಸ್ಪಷ್ಟವಾಗಿ ಉಳಿದಿದೆ. ಆದ್ರೆ ಅವರ "ಕುರ್ಸಿ ಮಂಗಾ ರೇ..." ಡೈಲಾಗ್​​ ಪ್ರೇಕ್ಷಕರಿಗೆ ಕಿಕ್​ ಕೊಟ್ಟಿದೆ. "ಕುಚ್ ಕರ್ತೇ ಹೈ ನಾ ಝಕಾಸ್" ಎಂದು ಹೇಳುವ ಧ್ವನಿ ಕೇಳುತ್ತದೆ. ಅದಕ್ಕೆ ಅನಿಲ್ ಕಪೂರ್, "ಬಹುತ್ ಹೋಗಯಾ ರೇ ಝಕಾಸ್, ಕರ್ತೇ ಹೈ ನ ಕುಚ್ ಔರ್ ಖಾಸ್" ಎಂದು ತಮ್ಮ ಸಿಗ್ನೇಚರ್​ ಡೈಲಾಗ್​​ನೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಅರ್ಜುನ್​​ ಜೊತೆ ಬ್ರೇಕ್​​ಅಪ್ ವದಂತಿ: ಪ್ರೀತಿ, ಬೆಂಬಲದ ಬಗ್ಗೆ ಮಾತನಾಡಿದ ಮಲೈಕಾ ಅರೋರಾ - Malaika Arjun

ಬಿಗ್ ಬಾಸ್ ಒಟಿಟಿ 3 ಜೂನ್‌ನಲ್ಲಿ ಪ್ರೀಮಿಯರ್ ಆಗಲಿದೆ ಎಂದು ಪ್ರೋಮೋ ಬಹಿರಂಗಪಡಿಸಿದೆ. ಅದಾಗ್ಯೂ, ನಿಖರ ದಿನಾಂಕ ಇನ್ನಷ್ಟೇ ರಿವೀಲ್​ ಆಗಬೇಕಿದೆ. 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಹಿರಿಯ ನಟ ಅನಿಲ್ ಕಪೂರ್, ಈ ಹಿಂದೆ ಕಿರುತೆರೆಯಲ್ಲಿ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಇದೀಗ ಭಾರತದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋನ ಒಟಿಟಿ ಆವೃತ್ತಿಯಲ್ಲಿ ನಿರೂಪಕರಾಗಿ ಹಿಂತಿರುಗುವುದನ್ನು ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.