ETV Bharat / entertainment

'ಅಂಬರೀಶ್​ಗೆ ನಾನು ಕೊಟ್ಟಿದ್ದ ಹಾರ್ಟ್ ಪೆಂಡೆಂಟ್ ಬಹಳ ಇಷ್ಟವಾಗಿತ್ತು': ಸುಮಲತಾ - Pooja to Ambareesh Tomb

author img

By ETV Bharat Karnataka Team

Published : May 29, 2024, 4:28 PM IST

ದಿ. ನಟ ಅಂಬರೀಶ್ ಜನ್ಮದಿನದ ಹಿನ್ನೆಲೆ, ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿದರು.

Ambareesh
ಸುಮಲತಾ - ಅಂಬರೀಶ್ (ETV Bharat)
ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬಸ್ಥರು (ETV Bharat)

ಇಂದು ಕನ್ನಡ ಚಿತ್ರರಂಗದ ರೆಬಲ್ ಸ್ಟಾರ್ ಅಂಬರೀಶ್ ಜನ್ಮದಿನ. ಮಂಡ್ಯದ ಗಂಡು ಬದುಕಿದ್ದರೆ ಇಂದು ಸಾವಿರಾರು ಅಭಿಮಾನಿಗಳ ಜೊತೆ 72ನೇ ವರ್ಷದ ಬರ್ತ್ ಡೇ ಸೆಲೆಬ್ರೆಟ್ ಮಾಡಿಕೊಳ್ಳುತ್ತಿದ್ದರು‌. ಆದರೆ, ಅಂಬಿ ಆಗಲಿ ಆರು ವರ್ಷಗಳು ಕಳೆದಿವೆ. ಇಂದು ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ ಪತ್ನಿ ಸುಮಲತಾ ಅಂಬರೀಶ್, ಮಗ ಅಭಿಷೇಕ್ ಅಂಬರೀಶ್, ಸೊಸೆ ಅವಿವಾ ಬಿದ್ದಪ್ಪ ಹಾಗೂ ನಿರ್ಮಾಪಕ ರಾಕ್​​ಲೈನ್ ವೆಂಕಟೇಶ್ ಆಗಮಿಸಿ ಪೂಜೆ‌ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಲೀಲಾನಿಗೆ ಇಷ್ಟವಾಗುವ ತಿಂಡಿ ತಿನಿಸುಗಳನ್ನಿಟ್ಟಿದ್ದರು. ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು.

ambareesh
ಅಂಬರೀಶ್ - ಸುಮಲತಾ (ETV Bharat)

ಸುಮಲತಾ ಅಂಬರೀಶ್ ಮಾತನಾಡಿ, ಅಂಬಿ ನಮ್ಮ ಮನಸ್ಸಲ್ಲಷ್ಟೇ ಅಲ್ಲದೇ ಅಭಿಮಾನಿಗಳ ಮನಸ್ಸಲ್ಲೂ ಇದ್ದಾರೆ. ಅವರಿಲ್ಲದೇ ಆರು ವರ್ಷಗಳಾದರೂ ಅಭಿಮಾನಿಗಳು ಮಾತ್ರ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಅವರು ಮಾಡಿದ ಒಳ್ಳೆ ಕೆಲಸಗಳಿಂದ ಜನರ ಮನಸ್ಸಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಆ ಪ್ರೀತಿಯನ್ನು ನೋಡಿ ನಾವು ತೃಪ್ತಿ ಪಡುತ್ತಿದ್ದೇವೆ. ಈ ವರ್ಷದ ಹುಟ್ಟುಹಬ್ಬಕ್ಕೆ ಮಂಡ್ಯದಲ್ಲಿ ಕಾರ್ಯಕ್ರಮ ಮಾಡಿ ನಾಲ್ಕು ಜನರಿಗೆ ಸನ್ಮಾನ ಮಾಡಲಿದ್ದೇವೆ ಎಂದು ತಿಳಿಸಿದರು.

ಇನ್ನೂ ಹೆಚ್ಚಿನ ಸಾಮಾಜಿಕ ಕೆಲಸಗಳನ್ನು ಅವರ ಹೆಸರಲ್ಲಿ ಮಾಡಬೇಕು. ಅಂಬಿ ಅವರನ್ನು ಕಲಿಯುಗದ ಕರ್ಣ ಎಂದು ಜನ ಹೇಳ್ತಿದ್ರು. ಅದನ್ನು ನಾವು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕು. ಇನ್ನು, ಅಂಬಿಗೆ ನಾನು ಹಾರ್ಟ್ ಪೆಂಡೆಂಟ್ ಕೊಟ್ಟಿದ್ದೆ, ಅವರಿಗೆ ಅದು ತುಂಬಾ ಇಷ್ಟ ಆಗಿತ್ತು. ಅವರ ಜೊತೆ ಇಷ್ಟು ವರ್ಷ ಜೀವನ ನಡೆಸಿದ್ದೇ ನನಗೆ ದೊಡ್ಡ ಗಿಫ್ಟ್. ಅವರಿಂದ ನಾನು ಬಹಳ ಇನ್​​ಸ್ಪೈಯರ್ ಆಗಿದ್ದೇನೆ. ಅವರಲ್ಲಿರೋ ಗುಣಗಳನ್ನು ನೋಡಿ ನಾನು ಅವರನ್ನು ಇಷ್ಟಪಟ್ಟೆ. ಅವರ ಸ್ನೇಹಿತರು, ನಮ್ಮ ಆಪ್ತರೆಲ್ಲಾ ಸೇರಿದ ವೇಳೆ ನಾವು ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತೇವೆ. ಅವರ ಹುಟ್ಟುಹಬ್ಬದ ಸಂದರ್ಭ ಅವರಿಗೆ ಇಷ್ಟವಾದ ಅಡುಗೆ ಮಾಡಿ ತಂದು ಇಡುತ್ತೇವೆ ಎಂದು ತಿಳಿಸಿದರು.

ಇಂದು ನಮಗೆ ಒಳ್ಳೆ ದಿನ. ನಾನಿಂದು ಪೆನ್ ಡ್ರೈವ್ ಪ್ರಕರಣದ ಬಗ್ಗೆ ಮಾತನಾಡಲು ಹೋಗಲ್ಲ. ಇನ್ನೂ ಅಜ್ಜಿ ಆಗೋ ಗುಡ್ ನ್ಯೂಸ್ ಸಿಕ್ಕಾಗ ನಿಮ್ಮಲ್ಲಿ ತಿಳಿಸುತ್ತೇನೆ ಎಂದರು.

ಇದನ್ನೂ ಓದಿ: ಅಂಬರೀಶ್ ಜನ್ಮದಿನ: ರೆಬಲ್ ಸ್ಟಾರ್ ಕುರಿತ ಆಸಕ್ತಿಕರ ವಿಚಾರಗಳಿವು - Ambareesh Birthday

ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಮಾತನಾಡಿ, ಅಂಬರೀಶ್ ಅವರಿಗೆ 72 ವರ್ಷ ಆಗಿದೆ ಅನ್ನೋ ಸಂತೋಷ ಒಂದೆಡೆಯಾದರೆ, ನಮ್ಮೊಂದಿಗೆ ಅವರಿಲ್ಲ ಅನ್ನೋ ಬೇಸರ ಮತ್ತೊಂದೆಡೆ. ಅವರು ಇದ್ದಿದ್ರೆ ಅಭಿಮಾನಿಗಳ ಜೊತೆ ಬರ್ತ್​​ಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ರು. ‌ಹಲವು ವರ್ಷಗಳಿಂದ ನಾನು ಈ ಕುಟುಂಬದೊಟ್ಟಿಗಿದ್ದೇನೆ. ಸ್ನೇಹ, ವಿಶ್ವಾಸ, ಗೌರವ ಸಿಗುತ್ತೆಯೆಂದಾಗ ಅವರ ಜೊತೆಯಿರಲು ಇಷ್ಟಪಡುತ್ತೇನೆ. ಅಂಬರೀಶ್ ಅವರು ನಮ್ಮನ್ನು ತುಂಬಾನೇ ಪ್ರೀತಿಯಿಂದ ಕಾಣುತ್ತಿದ್ದರು. ಅವರು ಸೂಪರ್ ಸ್ಟಾರ್ ಆಗಿದ್ರೂ ಜೊತೆ ಇರೋರನ್ನು ಬಿಡುತ್ತಿರಲಿಲ್ಲ, ಅಂತಹ ದೊಡ್ಡತನ ಅವರದ್ದು ಎಂದು ಗುಣಗಾನ ಮಾಡಿದರು.

ಇದನ್ನೂ ಓದಿ: ಐಷಾರಾಮಿ ಕ್ರೂಸ್​ನಲ್ಲಿ ಅನಂತ್ ಅಂಬಾನಿ ಅದ್ಧೂರಿ ಪ್ರೀ ವೆಡ್ಡಿಂಗ್​​: ಸಂಭ್ರಮಕ್ಕೆ ಬಾಲಿವುಡ್​ ತಾರೆಗಳ ಮೆರುಗು - Anant Radhika Pre Wedding

ಅವರೋರ್ವ ಮಹಾನ್ ನಟ, ಹೃದಯವಂತ. ಸರ್ಕಾರ ಪ್ರತಿಷ್ಠಾನ ಕಟ್ಟಿಕೊಟ್ಟಿದೆ, ನಿತ್ಯ ಸಾವಿರಾರು ಜನರು ಬಂದು ಪೂಜೆ ಸಲ್ಲಿಸುತ್ತಾರೆ. ಒಳ್ಳೆಯ ಅಥವಾ ಕೆಟ್ಟ ಪರಿಸ್ಥಿತಿ, ಫ್ಯಾಮಿಲಿ ಬಳಿ ಹೇಳಿಕೊಳ್ಳಲಾಗದ ವಿಷಯವಿದ್ದಾಗ ನನಗವರ ನೆನಪಾಗುತ್ತದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.