ETV Bharat / entertainment

ನಾಳೆ 'ಪುಷ್ಪ 2' ಟೀಸರ್ ರಿಲೀಸ್: ಎಡಿಟಿಂಗ್ ರೂಂನಿಂದ ಫೋಟೋ ಹಂಚಿಕೊಂಡ ಅಲ್ಲು ಅರ್ಜುನ್ - Pushpa 2 - PUSHPA 2

ಎಡಿಟ್ ಸೂಟ್‌ನಿಂದ ಫೋಟೋ ಹಂಚಿಕೊಳ್ಳುವ ಮೂಲಕ ಅಲ್ಲು ಅರ್ಜುನ್ ''ಪುಷ್ಪ 2: ದಿ ರೂಲ್'' ಟೀಸರ್ ವೀಕ್ಷಿಸುವ ಕುತೂಹಲ ಹೆಚ್ಚಿಸಿದ್ದಾರೆ.

Pushpa 2: The Rule
ಪುಷ್ಪ 2: ದಿ ರೂಲ್
author img

By ETV Bharat Karnataka Team

Published : Apr 7, 2024, 6:05 PM IST

ಅಲ್ಲು ಅರ್ಜುನ್ ''ಪುಷ್ಪ 2: ದಿ ರೂಲ್'' ಮೂಲಕ ಮತ್ತೆ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಇದು 2021ರ ಬ್ಲಾಕ್​ಬಸ್ಟರ್​ ಹಿಟ್ 'ಪುಷ್ಪ 1: ದಿ ರೈಸ್‌'ನ ಸೀಕ್ವೆಲ್ ಆದ ಹಿನ್ನೆಲೆಯಲ್ಲಿ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಸೌತ್​ ಸೂಪರ್ ಸ್ಟಾರ್​ ಮುಖ್ಯಭೂಮಿಕೆಯ ಸಿನಿಮಾವನ್ನು ಸಾಕಷ್ಟು ಸಿನಿಪ್ರಿಯರು ಎದುರು ನೋಡುತ್ತಿದ್ದು, ನಾಳೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಗಲಿದೆ. ಏಪ್ರಿಲ್ 8 ಅಂದರೆ ನಾಳೆ ನಟನ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಟೀಸರ್​ ಅನಾವರಣಗೊಳಿಸುವುದಾಗಿ ಚಿತ್ರತಂಡ ಈಗಾಗಲೇ ತಿಳಿಸಿದೆ. ಟೀಸರ್ ಬಿಡುಗಡೆಗೂ ಮುನ್ನ ಎಡಿಟಿಂಗ್ ರೂಂನಿಂದ ಅಲ್ಲು ಅರ್ಜುನ್​​ ಫೋಟೋ ಹಂಚಿಕೊಂಡಿದ್ದು, ಚಿತ್ರದ ಸುತ್ತಲಿನ ಉತ್ಸಾಹ, ನಿರೀಕ್ಷೆ, ಕುತೂಹಲ ದುಪ್ಪಟ್ಟಾಗಿದೆ.

ಅಲ್ಲು ಅರ್ಜುನ್​​​​ ಇಂದು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​ ಸ್ಟೋರಿ ಸೆಕ್ಷನ್​​ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಎಡಿಟ್ ಸೂಟ್‌ನ ಚಿತ್ರವಿದು. ಫೋಟೋ ಹಂಚಿಕೊಂಡ ಪುಷ್ಪರಾಜ್​, 'ಆಲ್ ಸೆಟ್' ಎಂದು ಬರೆದುಕೊಂಡಿದ್ದಾರೆ. ಇದು ಟೀಸರ್ ನೋಡುವ ಪ್ರೇಕ್ಷಕರ ಕಾತರ ಹೆಚ್ಚಿಸಿದೆ.

ಇದಕ್ಕೂ ಮುನ್ನ ಚಿತ್ರ ತಯಾರಕರು ಚಿತ್ರದ ಪೋಸ್ಟರ್‌ ಹಂಚಿಕೊಂಡಿದ್ದರು. ಅಲ್ಲು ಅರ್ಜುನ್ ಅಥವಾ ಪುಷ್ಪ ರಾಜ್ ಶಂಕ ಊದುತ್ತಿರುವಂತೆ, ತ್ರಿಶೂಲ್​ ಹಿಡಿದಿರುವಂತೆ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿರುವ ಅಲ್ಲು ಅರ್ಜುನ್ ನೋಟ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಪೋಸ್ಟರ್ ಹಂಚಿಕೊಂಡ ನಾಯಕ ನಟ, ಏಪ್ರಿಲ್ 8ರಂದು ಪುಷ್ಪ 2 ದಿ ರೂಲ್ ಟೀಸರ್ ಬಿಡುಗಡೆ ಆಗಲಿದೆ ಎಂದು ಬರೆದುಕೊಂಡಿದ್ದರು. ಕಳೆದೊಂದು ವಾರದಲ್ಲಿ ಚಿತ್ರದಿಂದ ಮೂರು ಕುತೂಹಲಕಾರಿ ಪೋಸ್ಟರ್ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: 'ತುಳು ನಮ್ಮ ಮಾತೃಭಾಷೆ, ಒಂದೊಳ್ಳೆ ಸಿನಿಮಾ ಕಥೆಗೆ ಕಾಯುತ್ತಿದ್ದೇವೆ': ಕರಾವಳಿಯ ಅವಳಿ ಸಹೋದರಿಯರು - Sandalwood Shetty Sisters

2021ರ ಕೊನೆಗೆ ಬಂದ ತೆಲುಗು ಆ್ಯಕ್ಷನ್​ ಡ್ರಾಮಾ 'ಪುಷ್ಪ: ದಿ ರೈಸ್' ಅನ್ನು ಸುಕುಮಾರ್ ನಿರ್ದೇಶಿಸಿದ್ದರು. ಮುಂದುವರಿದ ಭಾಗಕ್ಕೂ ಅವರೇ ಆ್ಯಕ್ಷನ್​ ಕಟ್​​ ಹೇಳುತ್ತಿದ್ದು, ಕಲಾವಿದರೂ ಸಹ ತಮ್ಮ ಪಾತ್ರವನ್ನು ಮುಂದುವರಿಸಿದ್ದಾರೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜತೆ ಫಹಾದ್ ಫಾಸಿಲ್, ಜಗದೀಶ್ ಪ್ರತಾಪ್ ಬಂಡಾರಿ, ಸುನೀಲ್ ಮತ್ತು ರಾಜ್ ತಿರಂದಾಸು ಪ್ರಮುಖ ಭಾಗಗಳನ್ನು ನಿರ್ವಹಿಸಿದ್ದಾರೆ. ಚಿತ್ರದ ಮೊದಲ ಭಾಗದಲ್ಲಿನ ಅಮೋಘ ಅಭಿನಯಕ್ಕಾಗಿ ಕಳೆದ ವರ್ಷದ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

Pushpa 2: The Rule
ಪುಷ್ಪ 2: ದಿ ರೂಲ್

ಇದನ್ನೂ ಓದಿ: ಮೊದಲ ಬಾರಿ ಮಗಳ ಫೋಟೋ ಹಂಚಿಕೊಂಡ ರಾಮ್​​ ಚರಣ್​ ಪತ್ನಿ ಉಪಾಸನಾ - Ram Charan Family

ಪುಷ್ಪ 2ರಲ್ಲಿ ಸಮಂತಾ ರುತ್ ಪ್ರಭು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ವದಂತಿಗಳಿವೆ. ಸಂಜಯ್ ದತ್ ಕೂಡ ವಿಶೇಷ ಅತಿಥಿ ಪಾತ್ರವನ್ನು ನಿರ್ವಹಿಸಬಹುದು. ಆದಾಗ್ಯೂ, ಚಿತ್ರತಂಡದಿಂದ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ. ಚಿತ್ರ ಆಗಸ್ಟ್ 15ರಂದು ಬಿಡುಗಡೆ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.