ETV Bharat / entertainment

ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮಹಿಳೆಯ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ; ಬಾಲಕನ ಚಿಕಿತ್ಸೆ ವೆಚ್ಚ ಭರಿಸೋದಾಗಿ ಪುಷ್ಪಾ ಅಭಯ - ACTOR ALLU ARJUN

ಕಾಲ್ತುಳಿತದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ, ಬಾಲಕನ ಚಿಕಿತ್ಸೆ ವೆಚ್ಚ ಭರಿಸೋದಾಗಿ ಪುಷ್ಪಾ ಚಿತ್ರದ ನಾಯಕ ನಟ ಅಲ್ಲು ಅರ್ಜುನ್​ ಭರವಸೆ ನೀಡಿದ್ದಾರೆ.

Allu Arjun
ನಟ ಅಲ್ಲು ಅರ್ಜುನ್​ (IANS)
author img

By ETV Bharat Karnataka Team

Published : Dec 7, 2024, 10:26 AM IST

ಹೈದರಾಬಾದ್​: ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಪುಷ್ಪಾ- 2 ದ ರೂಲ್​ ಪ್ರೀಮಿಯರ್​ ಶೋ ವೇಳೆ ದುರಂತ ಸಂಭವಿಸಿತ್ತು. ಜನಸಂದಣಿಯಿಂದಾಗಿ ಮಹಿಳಾ ಅಭಿಮಾನಿ ರೇವತಿ (35) ಕಾಲ್ತುಳಿತದಲ್ಲಿ ಸಾವನ್ನಪ್ಪಿದರೆ, ಅವರ 13 ವರ್ಷ ವಯಸ್ಸಿನ ಮಗ ಶ್ರೀ ತೇಜ್​ ತೀವ್ರವಾಗಿ ಗಾಯಗೊಂಡಿದ್ದಾನೆ. ಆ ಬಾಲಕನಿಗೆ ಚಿಕಿತ್ಸೆ ಮುಂದುವರಿದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಚಿತ್ರದ ನಾಯಕ ಅಲ್ಲು ಅರ್ಜುನ್​ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮೃತ ಮಹಿಳೆಯ ಕುಟುಂಬಕ್ಕೆ 25 ಲಕ್ಷ ಪರಿಹಾರ ಒದಗಿಸುವುದಾಗಿ ಹೇಳಿದ್ದಾರೆ. ಅಲ್ಲದೆ, ಮಹಿಳೆಯ ಮಗನ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಪುಷ್ಪಾ ಹೀರೋ ಘೋಷಿಸಿದ್ದಾರೆ.

ಸಂತ್ರಸ್ತ ಕುಟುಂಬವನ್ನು ಭೇಟಿ ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡುವುದಾಗಿ ಅಲ್ಲು ಅರ್ಜುನ್​ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಈ ಕುರಿತು ಎಕ್ಸ್​ ಪೋಸ್ಟ್​ನಲ್ಲಿ ಬರೆದಿರುವ ನಟ ಅಲ್ಲು ಅರ್ಜುನ್​, ಸಂಭವಿಸಿರುವ ದುರ್ಘಟನೆ ಅತ್ಯಂತ ಹೃದಯವಿದ್ರಾವಕವಾದದ್ದು. ಘಟನೆ/ ಸಂದಿಗ್ಧ ಪರಿಸ್ಥಿತಿಯಲ್ಲಿ ಮೃತ ಮಹಿಳೆಯ ಕುಟುಂಬಕ್ಕೆ ಸಾಂತ್ವನ ಹೇಳಲು ಬಯಸುತ್ತೇನೆ. ಈ ನೋವಿನಲ್ಲಿ ಆ ಸಂತ್ರಸ್ತ ಕುಟುಂಬ ಏಕಾಂಗಿಯಲ್ಲ. ಅವರೊಂದಿಗೆ ನಾನಿದ್ದೇನೆ. ವೈಯಕ್ತಿಕವಾಗಿ ಆ ಕುಟುಂಬವನ್ನು ಭೇಟಿ ಮಾಡುತ್ತೇನೆ. ಈ ಸವಾಲಿನ ಸಂದರ್ಭದಲ್ಲಿ ಅವರಿಗೆ ಸಾಧ್ಯವಿರುವ ಎಲ್ಲಾ ನೆರವನ್ನು ನೀಡುತ್ತೇನೆ ಎಂದು ಬರೆದಿದ್ದಾರೆ.

ಡಿಸೆಂಬರ್​ 4 ರಂದು ಹೈದರಾಬಾದ್​ನ ಸಂಧ್ಯಾ ಥಿಯೇಟರ್​ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ತನ್ನ ಮಗನೊಂದಿಗೆ ಆಗಮಿಸಿದ್ದ ಮಹಿಳೆ ಸಾವನ್ನಪ್ಪಿದ್ದಳು. ಅವರ ಮಗ ತೀವ್ರವಾಗಿ ಗಾಯಗೊಂಡಿದ್ದು, ಐಸಿಯುನಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಈ ಘಟನೆ ಬಳಿಕ ನಟ ಅಲ್ಲು ಅರ್ಜುನ್​, ಅವರ ಭದ್ರತಾ ಸಿಬ್ಬಂದಿ ಮತ್ತು ಥಿಯೇಟರ್​ ಮಾಲೀಕರ ವಿರುದ್ಧ ಮೃತ ಮಹಿಳೆಯ ಪತಿ ನೀಡಿದ ದೂರು ಆಧರಿಸಿ ಚಿಕ್ಕಡಪಲ್ಲಿ ಪೊಲೀಸ್​ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಿಸಲಾಗಿದೆ ಎಂದು ಕೇಂದ್ರಿಯ ವಲಯದ ಉಪ ಪೊಲೀಸ್​ ಆಯುಕ್ತ ಆಕಾಂಶ್​ ಯಾದವ್​ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಅಬ್ಬಬ್ಬಾ, ಆರ್​ಆರ್​ಆರ್​ ದಾಖಲೆ ಪುಡಿಗಟ್ಟಿದ 'ಪುಷ್ಪ 2': ಮೊದಲ ದಿನವೇ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಸಿನಿಮಾವಿದು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.