ETV Bharat / entertainment

'ನೀವಿಲ್ಲದೇ ಅಭಿಮಾನಕ್ಕೆ ಬೆಲೆಯಿಲ್ಲ': ಖ್ಯಾತ ನಿರೂಪಕಿ ಅನುಶ್ರೀ ಭಾವುಕ ಪೋಸ್ಟ್​ - ANCHOR ANUSHREE

ಪಾಪ್ಯುಲರ್​ ಆ್ಯಂಕರ್​​ ಅನುಶ್ರೀ ಇನ್​ಸ್ಟಾಗ್ರಾಮ್​ನಲ್ಲಿ ಪುನೀತ್​ ರಾಜ್​ಕುಮಾರ್​ ಬಗ್ಗೆ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

puneeth rajkumar
ಪುನೀತ್​ ರಾಜ್​ಕುಮಾರ್​ (ETV Bharat)
author img

By ETV Bharat Entertainment Team

Published : Oct 29, 2024, 5:56 PM IST

ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ ಪುನೀತ್​ ರಾಜ್​ಕುಮಾರ್​ ಇಹಲೋಕ ತ್ಯಜಿಸಿ ಇಂದಿಗೆ ಮೂರು ವರ್ಷ. 2021ರ ಅಕ್ಟೋಬರ್​​ 29ರಂದು ಹಠಾತ್​ ಹೃದಯಾಘಾತದಿಂದ ಕೊನೆಯುಸಿರೆಳೆದ ಅಪ್ಪು ಅವರನ್ನು ನೆನೆದು ಇಂದಿಗೂ ಅದೆಷ್ಟೋ ಮಂದಿ ಕಣ್ಣೀರಿಡುತ್ತಿದ್ದಾರೆ. ಅವರ ಮೂರನೇ ವರ್ಷದ ಪುಣ್ಯಸ್ಮರಣೆ ನಡೆಯುತ್ತಿದ್ದು, ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಟಿ ಅನುಶ್ರೀ ಭಾವುಕ ಪೋಸ್ಟ್​​ ಒಂದನ್ನು ಹಂಚಿಕೊಂಡಿದ್ದಾರೆ.

ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಪಾಪ್ಯುಲರ್​ ಹೋಸ್ಟ್​ ಅನುಶ್ರೀ ಪೋಸ್ಟ್​ ಒಂದನ್ನು ಶೇರ್​ ಮಾಡಿದ್ದಾರೆ.. ''ನಮ್ಮ ಕಂಗಳ ಬಿಸಿಯ ಹನಿಗಳು ನೂರು ಬಾರಿ ಕೂಗಿದೆ.. ನಿಮ್ಮ ನಗುವ ಮೊಗವ ನೋಡಲು ಕೋಟಿ ಕಂಗಳು ಕಾಯುತ್ತಿದೆ!!! ಮಿಸ್​ ಯೂ ಸರ್​​​. ನೀವಿಲ್ಲದೇ ಅಭಿಮಾನ ಇಲ್ಲ, ನೀವಿಲ್ಲದೇ ಅಭಿಮಾನಕ್ಕೆ ಬೆಲೆ ಇಲ್ಲ.. ನೀವಿಲ್ಲದ ಬದುಕಿಗೆ ಕಳೆ ಇಲ್ಲ'' ಎಂದು ಬರೆದುಕೊಂಡಿದ್ದಾರೆ. ಜೊತೆಗೆ, ಲವ್​ ಯೂ ಅಪ್ಪು ಸರ್​​ ಫಾರೆವರ್​​ ಆ್ಯಂಡ್​​ ಎವರ್​​, ವಿ ಮಿಸ್​ ಯೂ ಎಂಬ ಕ್ಯಾಪ್ಷನ್​ ಕೊಟ್ಟಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಹೊಂದಿರುವ ನಿರೂಪಕಿ ಅನುಶ್ರೀ ಅವರು ರಾಜ್​ ಕುಟುಂಬದ ವಿಶೇಷವಾಗಿ ಅಪ್ಪು ಅವರ ಅಪ್ಪಟ ಅಭಿಮಾನಿ. ಬದುಕಿದ್ದ ಸಂದರ್ಭ ಅವರೊಂದಿಗೆ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಬಗ್ಗೆ ಸಾಕಷ್ಟು ಗುಣಗಾನ ಮಾಡಿದ್ದಾರೆ. ಅವರ ಅಗಲಿಕೆ ಇಂದಿಗೂ ಅನುಶ್ರೀ ಅವರನ್ನು ಕಾಡುತ್ತಿದೆ. ನಿಧನದ ನಂತರವೂ ಅನೇಕ ಕಾರ್ಯಕ್ರಮಗಳಲ್ಲಿ ಪುನೀತ್​ ಅವರನ್ನು ಸ್ಮರಿಸಿ ಕಣ್ಣೀರಾಗಿದ್ದಾರೆ. ಇದೀಗ ಅವರ ಭಾವನಾತ್ಮಕ ಪೋಸ್ಟ್​ ಕಂಡ ಅಭಿಮಾನಿಗಳು ಸಹ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಪುನೀತ್​​​ ಸಮಾಧಿಗೆ ರಾಜ್​ ಕುಟುಂಬದಿಂದ ಪೂಜೆ ಸಲ್ಲಿಕೆ: 'ಪರಮಾತ್ಮ'ನಿಗೆ ನಮನ

ಜುಲೈ ತಿಂಗಳಲ್ಲಿ ಕಿರುತೆರೆ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು ಪ್ರೀಮಿಯರ್​​ ಲೀಗ್​ ಶೋನ ಸಣ್ಣ ಪ್ರೋಮೋ ಒಂದನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದ ಅನುಶ್ರೀ, ''ಇಂತದ್ದೊಂದು ದಿನ ಅಭಿಮಾನಿಗಳ ಜೀವನದಲ್ಲಿ ಒಮ್ಮೆ ಬರಬಾರದೇ ??? ನಮ್ಮ ಅಪ್ಪು ಅಪ್ಪುಗೆ ನಮಗೆ ಸಿಗಬಾರದೇ !!! ಇದು ವಾಸ್ತವ ಅಲ್ಲ. ಆದರೆ ಈ ಮಿಥ್ಯ ಯಾಕಾಗಬಾರದು ಸತ್ಯ !!!! ಇನ್ನು ಕಣ್ಣಿಗೆ ಕಟ್ಟಿದ ಹಾಗಿದೆ ಈ ಸಂಚಿಕೆ.. ಕೊಂಚ ಕಾಲ ಆದರೂ ಸರಿ ನಮಗೆ ಇಂತ ಒಂದು ಕ್ಷಣ ಕೊಟ್ಟ ವಾಹಿನಿ ಹಾಗೂ ಕಾಮಿಡಿ ಕಿಲಾಡಿಗಳು ತಂಡ ನಿಮಗೆ ಕೋಟಿ ಧನ್ಯವಾದ..'' ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: ಇದನ್ನೂ ಓದಿ: 'ಅಪ್ಪು ಸವಿನೆನಪಿನಲ್ಲಿ 3 ವರ್ಷಗಳು': ಅಶ್ವಿನಿ ಪುನೀತ್​​ ರಾಜ್​ಕುಮಾರ್​​​

ತಂಡವೊಂದು ನಟನೆಯಲ್ಲಿ ಕಾಲಚಕ್ರ ಹಿಂದಕ್ಕೆ ಹೋಗಿ ಪುನೀತ್​​ ರಾಜ್​ಕುಮಾರ್​ ಅವರಂತೆ ಕಾಣುವ ವ್ಯಕ್ತಿಯ ಎಂಟ್ರಿಯಾಗುತ್ತದೆ. ಅವರನ್ನೇ ಹೋಲುವ ಒಂದು ದೃಶ್ಯ ನೋಡುಗರಿಗೆ ಸಿಕ್ಕಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.