ETV Bharat / entertainment

ಸುಶಾಂತ್​ ಸಿಂಗ್​ ರಜಪೂತ್​ ಅಪಾರ್ಟ್​ಮೆಂಟ್​ನಲ್ಲಿ ನಟ ಅದಾ ಶರ್ಮಾ ವಾಸ; ಈ ಬಗ್ಗೆ ನಟಿ ಹೇಳಿದ್ದೇನು ಗೊತ್ತಾ? - SUSHANT SINGH RAJPUT APARTMENT - SUSHANT SINGH RAJPUT APARTMENT

ಸುಶಾಂತ್​ ಸಿಂಗ್ ಮನೆಯಲ್ಲಿ ಪಾಸಿಟಿವ್​ ವೈಬ್ಸ್​ ಇದೆ. ಈ ಸ್ಥಳವು ನನಗೆ ಸಕಾರಾತ್ಮಕತೆ ನೀಡಿದೆ ಎಂದು ನಟಿ ತಿಳಿಸಿದ್ದಾರೆ.

adah-sharma-moves-into-sushant-singh-rajput-apartment-in-mumbai-actress-says-it-gives-me-positive-vibes
ಅದಾ ಶರ್ಮಾ, ಸುಶಾಂತ್​ ಸಿಂಗ್​ ((ಈಟಿವಿ ಭಾರತ್​))
author img

By ETV Bharat Karnataka Team

Published : Jun 3, 2024, 1:08 PM IST

Updated : Jun 3, 2024, 1:19 PM IST

ಮುಂಬೈ: ನಟ ಸುಶಾಂತ್​ ಸಿಂಗ್​ ರಜಪೂತ್​​ ಸಾವಿನ ಬಳಿಕ ಅವರ ಐಷಾರಾಮಿ ಅಪಾರ್ಟ್​ಮೆಂಟ್​ ಪಾಳು ಬಿದ್ದಿತ್ತು. ಈ ಅಪಾರ್ಟ್​ಮೆಂಟ್​ನಲ್ಲಿ 'ದಿ ಕೇರಳ ಸ್ಟೋರಿ' ಖ್ಯಾತಿಯ ನಟಿ ಅದಾ ಶರ್ಮಾ ವಾಸಿಸಲಿದ್ದಾರೆ ಎಂಬ ಊಹಾ ಪೋಹಾಗಳು ಕೆಲವು ದಿನದ ಹಿಂದೆ ಹಬ್ಬಿತು. ಇದೀಗ ಈ ಕುರಿತು ದೃಢೀಕರಣ ಸಿಕ್ಕಿದ್ದು, ನಟ ಸುಶಾಂತ್​ ಮೆಚ್ಚಿನ ಅಪಾರ್ಟ್​ಮೆಂಟ್​ನಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾರೆ.

ಮಾಧ್ಯಮಗಳ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ, ಕಳೆದ ನಾಲ್ಕು ತಿಂಗಳ ಹಿಂದೆಯೇ ಬಾಂದ್ರಾದಲ್ಲಿರುವ ಸುಶಾಂತ್​ ರಜಪೂತ್​ ಅವರ ಅಪಾರ್ಟ್​ಮೆಂಟ್​ಗೆ ಗೃಹ ಪ್ರವೇಶ ಮಾಡಿದ್ದು, ಅಲ್ಲಿಗೆ ಶಿಫ್ಟ್​​ ಆಗಿರುವುದಾಗಿ ತಿಳಿಸಿದ್ದಾರೆ. ನಾಲ್ಕು ತಿಂಗಳ ಹಿಂದೆಯೇ ಮನೆಗೆ ಪ್ರವೇಶಿಸಿದ್ದರೂ ಕೆಲವು ಪ್ರಾಜೆಕ್ಟ್​​ನಿಂದಾಗಿ ಅಲ್ಲಿ ಹೆಚ್ಚಿನ ಸಮಯ ಕಳೆಯಲಿಲ್ಲ. ಇದೀಗ ಕಳೆದ ಕೆಲವು ದಿನದಿಂದ ಆ ಮನೆಯಲ್ಲಿ ನೆಲೆ ಇದ್ದು, ಅಲ್ಲಿ ಸಕಾರಾತ್ಮಕ ವೈಬ್ಸ್​ಗಳಿವೆ ಎಂದು ತಿಳಿಸಿದ್ದಾರೆ.

ಅನೇಕ ಮಂದಿ ಈ ಮನೆಯನ್ನು ಕೊಳ್ಳಲು ಹೆದರಿದ್ದರು. ಆದರೆ, ನಾನು ಜನರು ಮಾತಿಗೆ ಕಿವಿಗೊಡದೇ ನನ್ನ ಮನಸಿನ ಮಾತು ಆಲಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಇದೇ ರೀತಿ ನನ್ನ ವೃತ್ತಿ ಜೀವನದ ಆರಂಭದ ಹಾರಾರ್​ ಸಿನಿಮಾದ ಬಗ್ಗೆ ಕೂಡ ಹೆದರಿಸಿದ್ದರು. ಆದರೆ, ನನ್ನ ನಗುವಿನ ಮೂಲಕ ಅವರಿಗೆ ಉತ್ತರಿಸಿದೆ ಎಂದಿದ್ದಾರೆ

ದೇವಾಸ್ಥಾನ ನಿರ್ಮಾಣ: ಸುಶಾಂತ್​ ಮನೆ ಪ್ರವೇಶಿಸಿರುವ ಅದಾ ಶರ್ಮಾ, ಮನೆಯಲ್ಲಿ ಕೆಲವು ಮಾರ್ಪಡು ಮಾಡಿದ್ದು, ಅದಕ್ಕಾಗಿ ಹಣ ಖರ್ಚು ಮಾಡಿದ್ದಾರೆ. ಮನೆಯ ಕೆಳ ಮಹಡಿಯಲ್ಲಿ ದೇವಾಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ. ಮೇಲಿನ ಮಹಡಿಯಲ್ಲಿ ಸಂಗೀತ, ನೃತ್ಯ ಕೊಠಡಿ ನಿರ್ಮಿಸಿದ್ದು, ರೂಫ್​​​ ಟಾಪ್​ನಲ್ಲಿ ಹಚ್ಚ ಹಸಿರಿನಿಂದ ಅಲಂಕಾರ ಮಾಡಿದ್ದಾರೆ.

ಮತ್ತೊಂದು ವಿಶೇಷ ಎಂದರೆ, ನಟಿ ಮನೆಗೆ ಕಡಿಮೆ ಪಿಠೋಪಕರಣವನ್ನು ಹೊಂದಿಸಿದ್ದಾರೆ. ದೇಸಿ ಸ್ಟೈಲ್​ಗೆ ಒತ್ತು ನೀಡಿರುವ ಆದಾ ಶರ್ಮಾ ನೆಲದ ಮೇಲೆ ಮಲಗಲಿದ್ದು, ನೆಲದ ಮೇಲೆಯೇ ಊಟವನ್ನು ಮಾಡಲಿದ್ದಾರೆ. 2023ರಲ್ಲಿ ಈ ಮನೆ ಕೊಳ್ಳುವ ಸಂಬಂಧ ಮಾತುಕತೆ ನಡೆಸಿದ್ದರು. ಮುಂಬೈ ಹೊರತಾಗಿ ನಟಿ ಕೇರಳದಲ್ಲೂ ಅವರು ಮನೆ ಹೊಂದಿದ್ದಾರೆ. ಎರಡು ಮನೆಯಲ್ಲೂ ಹಸಿರಿಗೆ ಹೆಚ್ಚು ಒತ್ತು ನೀಡಿದ್ದಾರೆ. 'ದಿ ಕೇರಳ ಸ್ಟೋರಿ' ನಟಿ ಇತ್ತೀಚಿಗೆ ನಕ್ಸಲ್​ ಕಥಾನಕ ಹೊಂದಿದ್ದ ಬಸ್ತಾರ​ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

2020ರಲ್ಲಿ ನಟ ಸುಶಾಂತ್​ ಸಿಂಗ್​ ತಮ್ಮ ಅಪಾರ್ಟ್​ಮೆಂಟ್​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

ಇದನ್ನೂ ಓದಿ: ನಟಿ ರವೀನಾ ಟಂಡನ್​ ವಿರುದ್ದ ಸುಳ್ಳು ದೂರು ದಾಖಲು: ಮುಂಬೈ ಪೊಲೀಸರ ಸ್ಪಷ್ಟನೆ

Last Updated : Jun 3, 2024, 1:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.