ETV Bharat / entertainment

18 ವರ್ಷಗಳ ನಂತರ ತೆಲುಗು ಪರದೆ ಮೇಲೆ ಈ ನಟಿಯ ಮಿಂಚು! - ACTRESS SHOBANA KALKI - ACTRESS SHOBANA KALKI

ಪ್ಯಾನ್​ ಇಂಡಿಯಾ ಸ್ಟಾರ್​ ಡಾರ್ಲಿಂಗ್​ ಪ್ರಭಾಸ್​ ಅವರ ಬಹುನಿರೀಕ್ಷಿತ "ಕಲ್ಕಿ 2898 ಎಡಿ" ಸಿನಿಮಾದ ಟ್ರೇಲರ್​ ಬಿಡುಗಡೆಗೆ ಸಜ್ಜಾಗಿದೆ. ಅದಕ್ಕೂ ಮೊದಲು ಅಭಿಮಾನಿಗಳಲ್ಲಿ ಸಿನಿಮಾದ ಕುತೂಹಲವನ್ನು ಕೆರಳಿಸಲು ಚಿತ್ರತಂಡ ಪೋಸ್ಟರ್​ ಒಂದನ್ನು ಬಿಡುಗಡೆ ಮಾಡಿದೆ.

actress-shobana-will-make-reentry-movie-prabhas-kalki-2898
18 ವರ್ಷಗಳ ನಂತರ ತೆಲುಗು ಪರದೆ ಮೇಲೆ ಈ ನಟಿಯ ಮಿಂಚು (ETV Bharat)
author img

By ETV Bharat Karnataka Team

Published : Jun 10, 2024, 7:20 AM IST

ಕಲ್ಕಿ 2898 AD ಒಂದು ವೈಜ್ಞಾನಿಕ ಮತ್ತು ಭವಿಷ್ಯದ ಚಿತ್ರ. ಪ್ರಭಾಸ್ ನಾಯಕ ನಟನಾಗಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಈಗಾಗಲೇ ಈ ಚಿತ್ರದಲ್ಲಿ ನಟಿಸಿದ್ದಾರೆ. ನಾನಿ, ದುಲ್ಕರ್ ಸಲ್ಮಾನ್, ವಿಜಯ್ ದೇವರಕೊಂಡ ಮತ್ತು ಮೃಣಾಲ್ ಠಾಕೂರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆದರೆ ಈಗ ಶೋಭನಾ ಹೆಸರೂ ಈ ಪಟ್ಟಿಗೆ ಸೇರಿಕೊಂಡಿದೆ. ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2006ರಲ್ಲಿ ಗೇಮ್ ನಂತರ ಶೋಭನಾ ತೆಲುಗಿನಲ್ಲಿ ಮತ್ತೆ ಕಾಣಿಸಿಕೊಂಡಿರಲಿಲ್ಲ. ಇದೇ ನಿಜವಾದರೆ ಹದಿನೆಂಟು ವರ್ಷಗಳ ನಂತರ ಸೋಭನಾ ನಟಿಸುತ್ತಿರುವ ತೆಲುಗು ಚಿತ್ರ ಇದಾಗಿದೆ. ಇದೇ ವೇಳೆ ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರ ಇದೇ ತಿಂಗಳ 27 ರಂದು ಬಿಡುಗಡೆಯಾಗಲಿದೆ. ಇದೇ ತಿಂಗಳ 7ರಂದು ಮುಂಬೈನಲ್ಲಿ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಬಹುದು ಎನ್ನಲಾಗುತ್ತಿದೆ.

ಪ್ಯಾನ್​ ಇಂಡಿಯಾ ಸ್ಟಾರ್​ ಡಾರ್ಲಿಂಗ್​ ಪ್ರಭಾಸ್​ ಅವರ ಬಹುನಿರೀಕ್ಷಿತ "ಕಲ್ಕಿ 2898 ಎಡಿ" ಸಿನಿಮಾದ ಟ್ರೇಲರ್​ ಬಿಡುಗಡೆಗೆ ಸಜ್ಜಾಗಿದೆ. ಅದಕ್ಕೂ ಮೊದಲು ಅಭಿಮಾನಿಗಳಲ್ಲಿ ಸಿನಿಮಾದ ಕುತೂಹಲವನ್ನು ಕೆರಳಿಸಲು ಚಿತ್ರತಂಡ ಪೋಸ್ಟರ್​ ಒಂದನ್ನು ಬಿಡುಗಡೆ ಮಾಡಿದೆ.

ಪೋಸ್ಟರ್​ನಲ್ಲಿ ನಟಿ ದೀಪಿಕಾ ಪಡುಕೋಣೆ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹಿಂದೆ ಕೋಟೆ, ಜನರನ್ನು ಕಾಣಬಹುದು. ಯಾವುದೇ ಕುತೂಹಲಕಾರಿ ಸನ್ನಿವೇಶದಲ್ಲಿ ದೀಪಿಕಾ ಅವರು ಅಚ್ಚರಿಯ ರೀತಿಯಲ್ಲಿ ನೋಟ ಬೀರಿದ್ದಾರೆ. ಈ ಲುಕ್ ನಟಿ ದೀಪಿಕಾರ ಪಾತ್ರ ಎಷ್ಟು ಮಹತ್ವದ್ದು ಎಂಬುದನ್ನು ಪ್ರತಿಬಿಂಬಿಸುತ್ತದೆ. ಟ್ರೇಲರ್​ ಲಾಂಚ್​ಗೂ ಮುನ್ನ ಚಿತ್ರ ನಿರ್ಮಾಪಕರು ದೀಪಿಕಾರ ಪೋಸ್ಟರ್​ ಬಿಡುಗಗೆ ಮಾಡಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ದುಪ್ಪಟ್ಟು ಮಾಡಿದೆ.

ಇದನ್ನು ಓದಿ:ಕಲ್ಕಿ ಸಿನಿಮಾದ ಟ್ರೈಲರ್​ಗೂ ಮುನ್ನ ಪೋಸ್ಟರ್​ ಬಿಡುಗಡೆ; ಸ್ಟನ್ನಿಂಗ್​ ಲುಕ್​ನಲ್ಲಿ ದೀಪಿಕಾ ಪಡುಕೋಣೆ - Kalki Stunning Poster

ETV Bharat Logo

Copyright © 2024 Ushodaya Enterprises Pvt. Ltd., All Rights Reserved.