ETV Bharat / entertainment

ಸೂಪರ್ ಹಿಟ್ 'ದೇವಿ' ಚಿತ್ರಕ್ಕೆ 25 ವರ್ಷ: ಶೂಟಿಂಗ್ ವೇಳೆ ಹಾವು ಕಡಿತ ನೆನೆದ ಪ್ರೇಮಾ - Actress Prema Devi Movie Shooting

Actress Prema Devi Movie Shooting : ತಾನು ನಟಿಸಿದ ಸೂಪರ್ ಹಿಟ್ ಸಿನಿಮಾವೊಂದರ ಶೂಟಿಂಗ್ ವೇಳೆ ಹಾವು ಕಚ್ಚಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ ಎಂದು ನಟಿ ಪ್ರೇಮಾ ಬಿಚ್ಚಿಟ್ಟಿದ್ದಾರೆ.

actress prema  snake bite  super hit devi movie  devi movie shooting days
ಆ ಸೆನ್ಸೇಷನಲ್ ಸಿನಿಮಾಗೆ 25 ವರ್ಷ
author img

By ETV Bharat Karnataka Team

Published : Mar 13, 2024, 8:15 AM IST

ಹೈದರಾಬಾದ್​: ಜನಪ್ರಿಯ ನಿರ್ದೇಶಕ ಕೋಡಿ ರಾಮಕೃಷ್ಣ ನಿರ್ದೇಶನದ ಸೋಶಿಯೋ ಫ್ಯಾಂಟಸಿ ಚಿತ್ರ 'ದೇವಿ'. ಆ ಸಮಯದಲ್ಲಿ ಈ ಚಿತ್ರವು ಬಾಕ್ಸ್ ಆಫೀಸ್​ನಲ್ಲಿ ಸಂಚಲನ ಮೂಡಿಸಿತ್ತು. ನಿನ್ನೆ ಮಂಗಳವಾರದಂದು ಚಿತ್ರವು ಬಿಡುಗಡೆಯಾಗಿ 25 ವರ್ಷಗಳು ತುಂಬಿವೆ. ಈ ಸಂದರ್ಭದಲ್ಲಿ ಸಿನಿಮಾ ನಾಯಕಿಯಾಗಿ ನಟಿಸಿದ್ದ ನಾಯಕಿ ಪ್ರೇಮ ಚಿತ್ರದ ಬಗ್ಗೆ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಶೂಟಿಂಗ್ ವೇಳೆ ನಡೆದ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.

''ಆ ಕಾಲದಲ್ಲಿ ಲೇಡಿ ಓರಿಯೆಂಟೆಡ್ ಚಿತ್ರಗಳು ಕಡಿಮೆ. ಆಗ ಬಂದ ಈ ದೇವಿ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಇಷ್ಟು ದೊಡ್ಡ ಯಶಸ್ಸಿಗೆ ಕೋಡಿ ರಾಮಕೃಷ್ಣ ಅವರೇ ಪ್ರಮುಖ ಕಾರಣ. ದೃಶ್ಯ ಬರುವವರೆಗೆ ಕನಿಷ್ಠ 50 ಟೇಕ್ ತೆಗೆದುಕೊಳ್ಳಲಾಗಿತ್ತು. ಪರ್ಫೆಕ್ಟ್ ಆಗಲು ನಾನು ಹಗಲು-ರಾತ್ರಿ ಚಿತ್ರಕ್ಕಾಗಿ ಕೆಲಸ ಮಾಡಿದ್ದೇನೆ. ಡೈಲಾಗ್ಸ್ ಕೂಡ ಚೆನ್ನಾಗಿ ಪ್ರಾಕ್ಟೀಸ್ ಮಾಡ್ತಿದ್ದೆವು. ಇಂತಹ ಹಾವಿನ ಚಿತ್ರಗಳನ್ನು ಯಾರು ನೋಡುತ್ತಾರೆ ಅಂತಾ ಆಗ ನಾವೆಲ್ಲಾ ಅಂದುಕೊಂಡಿದ್ದೆವು. ಆದರೆ, ಶೂಟಿಂಗ್ ಮುಗಿದ ನಂತರ ಅಚ್ಚರಿಯಾಯಿತು. ಶೂಟಿಂಗ್ ವೇಳೆ ಒಬ್ಬರಿಗೆ ನಿಜವಾಗಿ ಹಾವು ಕಚ್ಚಿತ್ತು. ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ಹಾಗಾಗಿ, ಎರಡು ದಿನ ಶೂಟಿಂಗ್ ನಿಲ್ಲಿಸಿದ್ದೆವು. ಕ್ಲೈಮ್ಯಾಕ್ಸ್​ಗೆ ಹಿಮದಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದೆವು'' ಎಂದು ಪ್ರೇಮಾ ಹೇಳಿದ್ದಾರೆ.

ತಮ್ಮ ಸಿನಿಮಾ ವೃತ್ತಿಜೀವನದ ಬಗ್ಗೆ ಮಾತನಾಡುತ್ತಾ, ''ನನ್ನ ಕನಸು ಗಗನಸಖಿ ಆಗಬೇಕು ಅಂತಾ. ಆದರೆ ನನ್ನ ತಾಯಿ ನಾನು ನಟಿಯಾಗಬೇಕೆಂದು ಬಯಸಿದ್ದರು. ಅದಕ್ಕಾಗಿ ನಾವಿಬ್ಬರೂ ಸಾಕಷ್ಟು ಬಾರಿ ಜಗಳವಾಡಿದ್ದೆವು. ಕೊನೆಗೆ ಅವರ ಕನಸನ್ನು ನನಸಾಗಿಸಲು 'ಸವ್ಯಸಾಚಿ' ಎಂಬ ಕನ್ನಡ ಚಿತ್ರದಲ್ಲಿ ನಟಿಸಿದೆ. ಆದರೆ ಅದು ನಿರಾಸೆ ಮೂಡಿಸಿತ್ತು. ಆದರೂ ನನಗೆ 'ಓಂ' ಚಿತ್ರದಲ್ಲಿ ಅವಕಾಶ ಸಿಕ್ಕಿತು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ನಾನು 'ಧರ್ಮಚಕ್ರ' ಚಿತ್ರದ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟೆ. 'ಜಗದೇಕ ವೀರುಡು ಅತಿಲೋಕ ಸುಂದರಿ', 'ಕ್ಷಣಂ ಕ್ಷಣಂ' ಸಿನಿಮಾ ಮಾಡಲು ಆಗಲಿಲ್ಲ ಎಂಬ ಬೇಸರ ಈಗಲೂ ಇದೆ'' ಎನ್ನುತ್ತಾರೆ ಪ್ರೇಮಾ.

ಓದಿ: ಝೈದ್ ಖಾನ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ 'ಉಪಾಧ್ಯಕ್ಷ' ನಿರ್ದೇಶಕ ಅನಿಲ್ ಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.