ETV Bharat / entertainment

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಮಿಲನಾ ನಾಗರಾಜ್: ಗಂಡು ಮಗುವಿನ ಆಗಮನದ ಖುಷಿಯಲ್ಲಿ ನಟಿ ಪ್ರಣಿತಾ ಸುಭಾಷ್ - Milana Nagaraj and Pranitha Baby - MILANA NAGARAJ AND PRANITHA BABY

ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ದಂಪತಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಮತ್ತೊಂದೆಡೆ ನಟಿ ಪ್ರಣಿತಾ ಸುಭಾಷ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ತಾರೆಯರಿಗೆ ಅಭಿಮಾನಿಗಳು ಅಭಿನಂದನೆ ಕೋರುತ್ತಿದ್ದಾರೆ.

Pranitha Subhash and Milana Nagaraj family
ಪ್ರಣಿತಾ ಸುಭಾಷ್ ಮತ್ತು ಮಿಲನಾ ನಾಗರಾಜ್ ಕುಟುಂಬ (ETV Bharat)
author img

By ETV Bharat Karnataka Team

Published : Sep 5, 2024, 1:21 PM IST

ಕನ್ನಡ ಚಿತ್ರರಂಗದ ಕ್ಯೂಟ್​ ಕಪಲ್​​​​ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಪೋಷಕರಾಗಿ ಭಡ್ತಿ ಪಡೆದಿದ್ದಾರೆ. ಮೊದಲ ಮಗುವಿನ ಆಗಮನದ ಖುಷಿಯಲ್ಲಿ ತಾರಾ ಕುಟುಂಬವಿದೆ. ಈ ವಿಚಾರವನ್ನು ಸ್ವತಃ ಜನಪ್ರಿಯ ನಟ ಡಾರ್ಲಿಂಗ್​​​ ಕೃಷ್ಣ ಹಂಚಿಕೊಂಡಿದ್ದಾರೆ.

ಮಿಲನಾರಿಗೆ ಹೆಣ್ಣು ಮಗು: ಲವ್​ ಮಾಕ್ಟೇಲ್​​​ ನಟಿ ನಾರ್ಮಲ್ ಡೆಲಿವರಿ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಗಳ ಆಗಮನದ ಖುಷಿಯನ್ನು ನಟ ಡಾರ್ಲಿಂಗ್​​​ ಕೃಷ್ಣ ಹಂಚಿಕೊಂಡಿದ್ದಾರೆ. ಮಗಳು ಹಾಗೂ ಪತ್ನಿ ಚೆನ್ನಾಗಿದ್ದಾರೆಂದು ತಿಳಿಸಿದ್ದಾರೆ.

Pranitha Subhash IG Post
ನಟಿ ಪ್ರಣಿತಾ ಸುಭಾಷ್ ಇನ್​​​ಸ್ಟಾಗ್ರಾಮ್​ ಪೋಸ್ಟ್ (s Pranitha Subhash, screen grab)

ಪ್ರಣಿತಾರಿಗೆ ಗಂಡು ಮಗು: ಇನ್ನು, ಕನ್ನಡ ಮಾತ್ರವಲ್ಲದೇ ಬಹುಭಾಷೆಗಳಲ್ಲಿ ಗುರುತಿಸಿಕೊಂಡಿರುವ ನಟಿ ಪ್ರಣಿತಾ ಸುಭಾಷ್ ಕೂಡಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಈ ಹಿಂದೆ ನಟಿಗೆ ಹೆಣ್ಣು ಮಗು ಆಗಿತ್ತು. ಇದೀಗ ಎರಡನೇ ಮಗುವನ್ನು ಬರಮಾಡಿಕೊಂಡಿರುವ ಖುಷಿ ನಟಿಗಿದೆ.

''ಹೆಮ್ಮೆಯ ಕ್ಷಣವಿದು, ಏಕೆಂದರೆ ನನಗೀಗ ಮಗಳಿದ್ದಾಳೆ'': ನಟ ಡಾರ್ಲಿಂಗ್​​ ಕೃಷ್ಣ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​​​ನಲ್ಲಿ ಪೋಸ್ಟ್​​ ಒಂದನ್ನು ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ದಂಪತಿ ಕ್ಯೂಟ್​ ಬೇಬಿ ಡ್ರೆಸ್​ ಹಿಡಿದಿರುವ ಫೋಟೋ ಹಂಚಿಕೊಂಡಿರುವ ನಟ, ''ಹೆಣ್ಣು ಮಗುವಿನ ಆಗಮನವಾಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಮಿಲನಾ, ಈ ಗರ್ಭಾವಸ್ಥೆಯ ಪಯಣದಲ್ಲಿ ನೀವು ಅನುಭವಿಸಿದ ನೋವು, ತ್ಯಾಗ ಮತ್ತು ನಿಮ್ಮ ಧೈರ್ಯ ಕಂಡು ನನಗೆ ಹೆಮ್ಮೆಯಾಗಿದೆ. ಈ ಅದ್ಭುತ ಪ್ರಯಾಣದಲ್ಲಿ ಸಾಗುವ ಎಲ್ಲಾ ತಾಯಂದಿರಿಗೆ ಒಂದು ದೊಡ್ಡ ನಮಸ್ಕಾರ. ಈ ಪ್ರಯಾಣದ ನಂತರ ಮಹಿಳೆಯರ ಮೇಲೆ ನಾನಿಟ್ಟಿದ್ದ ಗೌರವ ದ್ವಿಗುಣಗೊಂಡಿದೆ. ಹೌದು, ನಾನು ಲಕ್ಕಿ ಫಾದರ್​​​. ಹೆಮ್ಮೆಯ ಕ್ಷಣವಿದು. ಏಕೆಂದರೆ ನನಗೀಗ ಮಗಳಿದ್ದಾಳೆ'' ಎಂದು ಬರೆದುಕೊಂಡಿದ್ದಾರೆ.

ಮಿಲನಾ ಡಾರ್ಕ್​ ಬ್ಲ್ಯೂ ಬಾಡಿಕಾನ್​ ಡ್ರೆಸ್​​​​ನಲ್ಲಿ ಕಂಗೊಳಿಸಿದ್ದರೆ, ಕೃಷ್ಣ ವೈಟ್​ ಡ್ರೆಸ್​​​​ನಲ್ಲಿ ಸಖತ್​ ಸ್ಮಾರ್ಟ್​​ ಆಗಿ ಕಾಣಿಸಿಕೊಂಡಿದ್ದಾರೆ. ನಟಿಯ ಬೇಬಿ ಬಂಪ್​ ಸ್ಪಷ್ಟವಾಗಿ ತೋರುತ್ತಿದ್ದು, ತುಂಬು ಗರ್ಭಿಣಿಯಾಗಿದ್ದ ಸಂದರ್ಭ ಕ್ಲಿಕ್ಕಿಸಿಕೊಂಡಿರುವ ಫೋಟೋ ಇದಾಗಿದೆ.

ಇದನ್ನೂ ಓದಿ: ಸೆಪ್ಟೆಂಬರ್ 12ಕ್ಕೆ 'ARM' ರಿಲೀಸ್​: ಸೂಕ್ತವಾದ ಕಥೆ ಬಂದರೆ ಕನ್ನಡ ಸಿನಿಮಾದಲ್ಲಿ ನಟಿಸುವೆನೆಂದ ಮಾಲಿವುಡ್​ ಹೀರೋ - ARM pan India movie

ಇತ್ತೀಚೆಗಷ್ಟೇ ಮಿಲನಾ ನಾಗರಾಜ್ ಸೀಮಂತ ಶಾಸ್ತ್ರದ ಫೋಟೋ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಅದ್ಧೂರಿಯಾಗಿ ಕಾರ್ಯಕ್ರಮ ನಡೆದಿದ್ದು, ಸಾಂಪ್ರದಾಯಿಕ ನೋಟದಲ್ಲಿ ದಂಪತಿ ಕಾಣಿಸಿಕೊಂಡಿದ್ದರು. 2021ರ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಹಸೆಮಣೆ ಏರಿದ್ದ ಪ್ರೇಮಪಕ್ಷಿಗಳೀಗ ತಾಯಿ ತಂದೆ ಆಗಿರುವ ಖುಷಿಯಲ್ಲಿದ್ದು, ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.

ಇದನ್ನೂ ಓದಿ: ಸಿಎಂ ಭೇಟಿಯಾದ 'ಫೈರ್' ನಿಯೋಗ: ಸ್ಯಾಂಡಲ್​​ವುಡ್ ಲೈಂಗಿಕ ಕಿರುಕುಳ ಅಧ್ಯಯನಕ್ಕೆ ಸಮಿತಿ ರಚಿಸಲು ಮನವಿ - Sandalwood Sexual harassments

ಇನ್ನು ಪ್ರಣಿತಾ ಸುಭಾಷ್​ 2021ರ ಮೇನಲ್ಲಿ ಬೆಂಗಳೂರು ಮೂಲದ ಉದ್ಯಮಿ ನಿತಿನ್ ರಾಜ್​​​ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಿದರು. 2022ರ ಜೂನ್​ನಲ್ಲಿ ಮೊದಲ ಮಗಳನ್ನು ಬರಮಾಡಿಕೊಂಡರು. ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕಳೆದ ಬಾರಿ ಸಾಂಪ್ರದಾಯಿಕವಾಗಿ ಸೀಮಂತ ಶಾಸ್ತ್ರ ನೆರವೇರಿಸಿಕೊಂಡಿದ್ದ ನಟಿ ಈ ಬಾರಿ ಸಖತ್​ ಮಾಡರ್ನ್​​​ ಆಗಿ ಬೇಬಿ ಶವರ್ ಕಾರ್ಯಕ್ರಮ ನಡೆಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.