ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 11ರ ಆಟ ಶುರುವಾಗಿದೆ. ಸ್ಪರ್ಧಿಗಳು ಈಗಾಗಲೇ ಮನೆಯೊಳಗೆ ಬಲಗಾಲಿಟ್ಟಿದ್ದಾರೆ. ವಿವಿಧ ರಂಗಗಳಲ್ಲಿ ಗುರುತಿಸಿಕೊಂಡಿರುವವರನ್ನು ಸುದೀಪ್, ಬಿಗ್ ಬಾಸ್ ತಂಡ ಮತ್ತು ಕನ್ನಡಿಗರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಅಸಲಿ ಆಟ ಇಂದಿನಿಂದ ಪ್ರಸಾರ ಕಾಣಲಿದೆ. ಈ ಮಧ್ಯೆ, ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ನಟಿ ಗೌತಮಿ ಕಣ್ಣೀರಿಟ್ಟಿದ್ದಾರೆ.
''ಗೌತಮಿಯ ಹೊಸ ಅಧ್ಯಾಯ ಶುರು. ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ'' ಎಂಬ ಕ್ಯಾಪ್ಷನ್ನೊಂದಿಗೆ ಕಲರ್ಸ್ ಕನ್ನಡ ಸೋಷಿಯಲ್ ಮೀಡಿಯಾದಲ್ಲಿ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದೆ. ವಿಡಿಯೋ ಸಂಪೂರ್ಣ ಸಂಚಿಕೆ ವೀಕ್ಷಿಸುವ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
'ಸತ್ಯ'ಳ ಅಸಲಿ ನೋಟ: 'ಸತ್ಯ' ಧಾರವಾಹಿ ಮೂಲಕ ಗೌತಮಿ ಈಗಾಗಲೇ ಕರುನಾಡಿನಾದ್ಯಂತ ಜನಪ್ರಿಯರಾಗಿದ್ದಾರೆ. ಬಾಯ್ ಕಟ್ ಲುಕ್ನಲ್ಲೇ ನಟಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮಕ್ಕೂ ಕೂಡಾ ನಟಿ ಈ ಲುಕ್ನಲ್ಲೇ ಎಂಟ್ರಿ ಕೊಟ್ಟಿದ್ದಾರೆ. ತಾರೆಯ ಈ ನೋಟ ಸಖತ್ ಫೇಮಸ್ ಕೂಡಾ ಆಗಿದೆ. ಬಿಗ್ ಬಾಸ್ ಮನೆಯೊಳಗೆ ಮೊದಲ ದಿನವೇ ಈ ಬಗ್ಗೆ ಮಾತುಕತೆ ಬಂದಿದೆ. ಫೈನಲಿ, ನಟಿ ತಮ್ಮ ವಿಗ್ ತೆಗೆದು ಮನೆಮಂದಿ ಮತ್ತು ಪ್ರೇಕ್ಷಕರೆದುರು ತಮ್ಮ ಅಸಲಿ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ.
''ಜನರು ನನ್ನನ್ನು ಇದೇ ರೀತಿ ನೋಡಿ, ಪ್ರೀತ್ಸಿ, ಇಲ್ಲಿವರೆಗೂ ಕರೆತಂದಿದ್ದಾರೆ. ನಿಮಗೆ ಕಾಣೋ ಅಂಥ ನಾನು ನಾನಾಗಿ ಬದಲಾಗುತ್ತೇನೆ ಅಂತಾ ಅನಿಸುತ್ತದೆ. ಗೌತಮಿಯ ಹೊಸ ಅಧ್ಯಾಯ ಈಗ ಶುರುವಾಗ್ತಿದೆ'' - ನಟಿ ಗೌತಮಿ.
ಕನ್ನಡಿಯೆದುರು ಕುಳಿತ ನಟಿ ಗೌತಮಿ, ಈ ಡೈಲಾಗ್ಸ್ ಹೇಳೋ ಮೂಲಕ ತಮ್ಮ ವಿಗ್ ತೆಗೆದಿದ್ದಾರೆ. ಒಂದು ಸಣ್ಣ ಲುಕ್ ವೀಕ್ಷಕರಿಗೆ ಲಭಿಸಿದೆ. ನಟಿಯ ಸಂಪೂರ್ಣ ನೋಟಕ್ಕಾಗಿ ಇಂದಿನ ಸಂಚಿಕೆ ನೋಡಬೇಕಾಗಿದೆ.
ಹೆಲ್ ಹೆವೆನ್ ಕಾನ್ಸೆಪ್ಟ್: ಈ ಬಾರಿಯ ಕನ್ನಡದ ಬಿಗ್ ಬಾಸ್ 'ಸ್ವರ್ಗ ಮತ್ತು ನರಕ' ಎಂಬ ಹೊಸ ಕಾನ್ಸೆಪ್ಟ್ ಮೂಲಕ ಆಗಮಿಸಿದೆ. ಹೆಲ್ ಹೆವೆನ್ ಪರಿಕಲ್ಪನೆಯಲ್ಲಿ ಬಿಗ್ ಬಾಸ್ ಆರಂಭವಾಗಿದ್ದು, ಒಂದಿಷ್ಟು ಜನರು ಸ್ವರ್ಗ ನಿವಾಸಿಗಳಾಗಿದ್ದರೆ, ಮತ್ತೊಂದಿಷ್ಟು ಜನರು ನರಕ ನಿವಾಸಿಗಳಾಗಿದ್ದಾರೆ.
ಇದನ್ನೂ ಓದಿ: 'ಅವಾರ್ಡ್ ಕೊಡುತ್ತೇವೆಂದು ಕರೆಸಿ, ಕೊಡಲಿಲ್ಲ': ಐಫಾ ಬಗ್ಗೆ ನಿರ್ದೇಶಕ ಹೇಮಂತ್ ಅಸಮಾಧಾನ - Hemanth Rao IIFA Experience
- ಸ್ವರ್ಗ ನಿವಾಸಿಗಳು: ಭವ್ಯಾ, ಯಮುನಾ, ಧನರಾಜ್, ಗೌತಮಿ, ಧರ್ಮ, ಜಗದೀಶ್, ತ್ರಿವಿಕ್ರಮ್, ಹಂಸಾ, ಐಶ್ವರ್ಯಾ, ಮಂಜು.
- ನರಕ ನಿವಾಸಿಗಳು: ಅನುಷಾ, ಶಿಶಿರ್, ಮಾನಸಾ, ಗೋಲ್ಡ್ ಸುರೇಶ,, ಚೈತ್ರಾ, ಮೋಕ್ಷಿತಾ, ರಂಜಿತ್.
'ಸತ್ಯ' ಧಾರವಾಹಿ ಖ್ಯಾತಿಯ ಗೌತಮಿ ಅವರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪ್ರೇಕ್ಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಫ್ರೀ ಹೇರ್ಸ್ಟೈಲ್ನಲ್ಲಿ ಗೌತಮಿ ಚೆನ್ನಾಗಿ ಕಾಣಿಸುತ್ತಿದ್ದಾರೆ ಎಂಬರ್ಥದಲ್ಲಿ ಹಲವರು ಕಾಮೆಂಟ್ ಮಾಡಿದ್ದಾರೆ. ಈ ಬಾರಿ ಹೆಣ್ಣು ಮಕ್ಕಳು ಗೆಲ್ಲಬೇಕೆಂದು ನೆಟ್ಟಿಗರೋರ್ವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.