ETV Bharat / entertainment

ನಟಿ ಭಾವನಾರಿಂದ ತರಾಸು ವಿರಚಿತ 'ಹಂಸಗೀತೆ'ಯ ನೃತ್ಯರೂಪಕ - ಭಾವನಾ ರಾಮಣ್ಣ

ತ.ರಾ.ಸು ವಿರಚಿತ ಹಂಸಗೀತೆಯನ್ನು ನಟಿ ಭಾವನ ರಾಮಣ್ಣ ನೃತ್ಯ ರೂಪಕವಾಗಿ ಹೊರತರುತ್ತಿದ್ದಾರೆ.

ನಟಿ ಭಾವನಾ ರಾಮಣ್ಣ
ನಟಿ ಭಾವನಾ ರಾಮಣ್ಣ
author img

By ETV Bharat Karnataka Team

Published : Jan 23, 2024, 8:57 AM IST

'ಚಂದ್ರಮುಖಿ ಪ್ರಾಣಸಖಿ' ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದು ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ನಟಿ ಭಾವನಾ ರಾಮಣ್ಣ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿದವರು. ಸದ್ಯ ಸಿನಿಮಾ ಜೊತೆಗೆ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾರೆ. ಭಾವನಾ ಅತ್ಯುತ್ತಮ ನೃತ್ಯಗಾರ್ತಿಯೂ ಹೌದು. ಕನ್ನಡದ ಜನಪ್ರಿಯ ಕಾದಂಬರಿಕಾರ ತ.ರಾ.ಸುಬ್ಬರಾಯರ ಹಂಸಗೀತೆ ಕಾದಂಬರಿಯನ್ನು ಜಿ.ವಿ.ಅಯ್ಯರ್ ಚಲನಚಿತ್ರವಾಗಿಸಿದ್ದರು. ಇದೀಗ ಇದೇ ಹಂಸಗೀತೆಯನ್ನು ಭಾವನಾ ನೃತ್ಯ ರೂಪಕವಾಗಿ ತರುತ್ತಿದ್ದಾರೆ. ಒಂದೂವರೆ ಗಂಟೆಗಳ ಕಾಲ ನಡೆಸಿಕೊಡುವ ಏಕವ್ಯಕ್ತಿ ಪ್ರದರ್ಶನದ ಈ ನೃತ್ಯ ಕಾವ್ಯದಲ್ಲಿ ಹಾಡು, ನೃತ್ಯ ಹಾಗೂ ಸಂಭಾಷಣೆಗಳೆಲ್ಲವೂ ಇರುತ್ತವೆ.

ತಾವು ಚಿತ್ರರಂಗಕ್ಕೆ ಬರಲು ಕಾರಣರಾದವರನ್ನು ನೆನೆದು ಭಾವುಕರಾಗಿ ಮಾತು ಆರಂಭಿಸಿದ ಭಾವನಾ, "ಈ ಹಿಂದೆ ತಮ್ಮ ಹೋಮ್ ಟೌನ್ ಬ್ಯಾನರ್​ನಲ್ಲಿ 'ನಿರುತ್ತರ' ಚಿತ್ರ ನಿರ್ಮಿಸಿದ್ದನ್ನು ನೆನಪಿಸಿಕೊಂಡರು. ಮುಂದೆಯೂ ಕೂಡ ಚಿತ್ರ ನಿರ್ಮಿಸುವ ಆಸೆ ಇದೆ. ಹೂವು ಫೌಂಡೇಶನ್ ಮೂಲಕ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದೇವೆ" ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಟಿ ಭಾವನಾ ರಾಮಣ್ಣ
ಪತ್ರಿಕಾಗೋಷ್ಠಿಯಲ್ಲಿ ನಟಿ ಭಾವನಾ ರಾಮಣ್ಣ

"ತ.ರಾ.ಸು ಅವರ ಹಂಸಗೀತೆಯ ಬಗ್ಗೆ ಇವತ್ತಿನ ಪೀಳಿಗೆಗೆ ತಿಳಿಸಿಕೊಡಬೇಕು. ಹಾಗಾಗಿ ಈ ಪ್ರಯತ್ನ ಮಾಡುತ್ತಿದ್ದೇನೆ. ಜನವರಿ 30ರ ಸಂಜೆ 6.30ಕ್ಕೆ ಚೌಡಯ್ಯ ಮೆಮೋರಿಯಲ್ ಹಾಲ್​ನಲ್ಲಿ ಕಾರ್ಯಕ್ರಮ ನಡೆಯಲಿದೆ. ವೀಣಾ ಮೂರ್ತಿ ನೃತ್ಯ ನಿರ್ದೇಶನದಲ್ಲಿ ನೃತ್ಯಕಾವ್ಯ ಮೂಡಿ ಬರಲಿದೆ. ಇದು ಮೊದಲ ಪ್ರಯತ್ನ. ಮುಂದೆ ಬೇರೆ ಬೇರೆ ಕಡೆಗಳಲ್ಲೂ ನೃತ್ಯ ಕಾವ್ಯ ಮಾಡುವ ಯೋಜನೆಯಿದೆ" ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್, ಹೆಚ್.ಸಿ.ಮಹದೇವಪ್ಪ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಡಾ.ಬರಗೂರು ರಾಮಚಂದ್ರಪ್ಪ, ನಟ ದರ್ಶನ್ ಹಾಗೂ ತಾರಾ ಅನುರಾಧ ಅವರನ್ನೂ ಆಹ್ವಾನಿಸಿರುವುದಾಗಿ ಭಾವನಾ ಮಾಹಿತಿ ನೀಡಿದರು.

ಸಹೋದರ ಅರವಿಂದ್ ರಾಮಣ್ಣ, ಸಹೋದರಿ ಶ್ಯಾಲಿನಿ ರಾಮಣ್ಣ ಹಾಗೂ ಬರಹಗಾರ ವಿಕ್ರಂ ಹತ್ವಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: 'ರವಿಕೆ ಪ್ರಸಂಗ' ಟ್ರೇಲರ್​ ಮೆಚ್ಚಿದ ಡಾಲಿ ಧನಂಜಯ್​: ಫೆ.16ಕ್ಕೆ ಸಿನಿಮಾ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.