ETV Bharat / entertainment

ಅದ್ಧೂರಿಯಾಗಿ ಸೆಟ್ಟೇರಿದ ಶಿವಣ್ಣನ 131ನೇ ಸಿನಿಮಾ: ಡೈರೆಕ್ಟರ್​ ಯಾರು ಗೊತ್ತಾ? - Shiva Rajkumar 131th movie - SHIVA RAJKUMAR 131TH MOVIE

"ಭೈರತಿ ರಣಗಲ್​"​ ಬೆನ್ನಲ್ಲೇ ಕರುನಾಡ ಚಕ್ರವರ್ತಿ ತಮ್ಮ 131ನೇ ಸಿನಿಮಾಗೆ ರೆಡಿಯಾಗಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರಕ್ಕೆ ಚಾಲನೆ ನೀಡಲಾಗಿದೆ.

SHIVA RAJKUMAR 131TH MOVIE
ಅದ್ಧೂರಿಯಾಗಿ ಸೆಟ್ಟೇರಿದ ಶಿವಣ್ಣನ 131ನೇ ಸಿನಿಮಾ (ETV Bharat)
author img

By ETV Bharat Karnataka Team

Published : Aug 18, 2024, 12:06 PM IST

ಹ್ಯಾಟ್ರಿಕ್​ ಹೀರೋ ಶಿವರಾಜ್​​​​ ಕುಮಾರ್​​​ ಅಭಿನಯದ ಬಹುನಿರೀಕ್ಷಿತ ಸಿನಿಮಾ "ಭೈರತಿ ರಣಗಲ್​"​ ಬಿಡುಗಡೆಗೆ ಸಜ್ಜಾಗಿದ್ದು, ಇದೀಗ ಕರುನಾಡ ಚಕ್ರವರ್ತಿಯ 131ನೇ ಸಿನಿಮಾಗೆ ಚಾಲನೆ ಸಿಕ್ಕಿದೆ. ವರಮಹಾಲಕ್ಷ್ಮಿ ಹಬ್ಬದ ಶುಭದಿನದಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ಸೆಟ್ಟೇರಿದೆ.

SHIVA RAJKUMAR 131TH MOVIE
ಅದ್ಧೂರಿಯಾಗಿ ಸೆಟ್ಟೇರಿದ ಶಿವಣ್ಣನ 131ನೇ ಸಿನಿಮಾ (ETV Bharat)

ಚಿತ್ರಕ್ಕೆ ಚಾಲನೆ ಸಿಕ್ಕಿದ್ದು, ನಿರ್ಮಾಪಕ ಎಸ್​ಎನ್​​ ರೆಡ್ಡಿ ಕ್ಲ್ಯಾಪ್​​ ಮಾಡಿದ್ದಾರೆ. ಈ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಮುಹೂರ್ತದ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಚಿತ್ರದ ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್, "ಎರಡು ವರ್ಷಗಳ ಹಿಂದೆ ಚಿತ್ರತಂಡ ಕಥೆ ಹೇಳಿದ್ದರು. ಯಾಕೆ ಇಷ್ಟು ಲೇಟ್ ಎಂದು ಕೇಳಬೇಡಿ. ಮೊದಲ ಬಾರಿಗೆ ಸ್ಕ್ರಿಪ್ಟ್​ ಕೇಳಿದಾಗ ತುಂಬಾ ಚೆನ್ನಾಗಿ ಇತ್ತು. ಆದರೆ ಅಲ್ಲಿ ಏನೋ ಬೇಕಾಗಿತ್ತು ಎಂದು ಹೇಳುತ್ತಿದ್ದೆ. ಆದರೆ ಇಂಟ್ರೆಸ್ಟಿಂಗ್​ ಇತ್ತು. ಈ ಚಿತ್ರದಲ್ಲಿ ಎಲ್ಲರಿಗೂ ಕೆಲಸವಿದೆ. ಡೈಲಾಗ್ ರೈಟರ್, ಕ್ಯಾಮೆರಾ ಮೆನ್​ಗೆ, ಮ್ಯೂಸಿಕ್​ ಡೈರೆಕ್ಟರ್​ಗೂ ತುಂಬಾ ತುಂಬಾ ಕೆಲಸವಿದೆ. ಒಂದು ಸಿನಿಮಾವೆಂದರೆ ಟೆಕ್ನಿಕಲ್​ ಅನ್ನುತ್ತಾರೆ, ಇಲ್ಲ ಆಕ್ಟರ್ಸ್​ ಸಿನಿಮಾ ಎಂದು ಕರೆಯುತ್ತಾರೆ. ಆದರೆ ಇದು ಎಲ್ಲರ ಸಿನಿಮಾ. ಅಭಿಮಾನಿಗಳು ಕುತೂಹಲದಿಂದ ಸಿನಿಮಾ ನೋಡಬೇಕು. ನಾನು ನವೀನ್​ ಜೊತೆ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದೇನೆ. ಚಿತ್ರದಲ್ಲಿ ಇನ್ನೊಂದು ಸರ್ಪ್ರೈಸ್​​​ ಕ್ಯಾರೆಕ್ಟರ್​​ ಇದೆ. ಇದು ಚಿತ್ರದ ಕಥೆಯ ಎಳೆ" ಎಂದರು.

ತಮಿಳು ನಿರ್ದೇಶಕ ಕಾರ್ತಿಕ್​ ಅದ್ವೈತ್​ ಮಾತನಾಡಿ, "ನನಗೆ ಕನ್ನಡ ಮಾತನಾಡಲು ಬರುವುದಿಲ್ಲ. ಚಿತ್ರ ಬಿಡುಗಡೆಯಾಗುವಷ್ಟರಲ್ಲಿ ಕನ್ನಡ ಮಾತನಾಡುತ್ತೇನೆ ಎಂದು ಆಣೆ ಮಾಡುತ್ತೇನೆ. ಶಿವಣ್ಣ ಕಥೆ, ಕ್ಯಾರೆಕ್ಟರ್​ ಮೇಲೆ ನಂಬಿಕೆ ಇಟ್ಟು ನನಗೆ ಸಿನಿಮಾ ನಿರ್ದೇಶನಕ್ಕೆ ಅವಕಾಶ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದ. ನನ್ನ ಇಬ್ಬರು ನಿರ್ಮಾಪಕರು ಚಿತ್ರದ ಮುಖ್ಯ ಪಿಲ್ಲರ್​" ಎಂದು ತಿಳಿಸಿದರು.

ಕಾರ್ತಿಕ್ ಅದ್ವೈತ್ ತಮಿಳು ಚಿತ್ರವೊಂದನ್ನು ನಿರ್ಮಿಸಿರುವ ಅವರೀಗ ಈ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ ಅಂಗಳಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಶಿವಣ್ಣನ 131ನೇ ಚಿತ್ರ ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಶಿವಣ್ಣ ಡಿಫ್ರೆಂಟ್​​ ಲುಕ್​ನಲ್ಲಿ, ವಿಭಿನ್ನ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ. ಘೋಸ್ಟ್ ಖ್ಯಾತಿಯ ವಿಎಂ ಪ್ರಸನ್ನ ಹಾಗೂ ಸೀತಾರಾಮಂ ಖ್ಯಾತಿಯ ಜಯಕೃಷ್ಣ ಬರಹಗಾರರಾಗಿ ಸಾಥ್ ಕೊಡುತ್ತಿದ್ದಾರೆ.

ವಿಕ್ರಂ, ವೇದ, ಆರ್​ಡಿ ಎಕ್ಸ್, ಖೈದಿ ಸಿನಿಮಾ ಖ್ಯಾತಿಯ ಸ್ಯಾಮ್ ಸಿ.ಎಸ್ ಸಂಗೀತ ಒದಗಿಸಲಿದ್ದಾರೆ. ಎ.ಜೆ ಶೆಟ್ಟಿ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ದೀಪು ಎಸ್​ ಕುಮಾರ್ ಅವರ ಸಂಕಲನ ಹಾಗೂ ರವಿ ಸಂತೆಹಕ್ಲು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿರಲಿದೆ. ಭುವನೇಶ್ವರಿ ಪ್ರೊಡಕ್ಷನ್​ನಡಿ ಎಸ್​ಎನ್​ ರೆಡ್ಡಿ ಹಾಗೂ ಸುಧೀರ್​ .ಪಿ. ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಸಹ ನಿರ್ಮಾಪಕರಾಗಿ ಸುಮನ್​ .ಬಿ., ರಮಣ ರೆಡ್ಡಿ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಚಿತ್ರತಂಡ ನಾಳೆಯಿಂದ ಶೂಟಿಂಗ್​ ಅಖಾಡಕ್ಕೆ‌ ಇಳಿಯಲಿದೆ.

ಇದನ್ನೂ ಓದಿ: ಮಂಸೋರೆ 'ದೂರ ತೀರ ಯಾನ'ಕ್ಕೆ ಜೊತೆಯಾದ ಯುವ ಪ್ರತಿಭೆ ವಿಜಯ್ ಕೃಷ್ಣ - Doora Teera Yana teaser

ETV Bharat Logo

Copyright © 2024 Ushodaya Enterprises Pvt. Ltd., All Rights Reserved.