ETV Bharat / entertainment

ನಟನೆ ಜೊತೆಗೆ ನಿರ್ದೇಶನಕ್ಕಿಳಿದ ಚಂದನ್ ಕುಮಾರ್: 'ಫ್ಲರ್ಟ್' ಸ್ಟೋರಿ ಹೇಳಲಿದ್ದಾರೆ ಪ್ರೇಮಬರಹ ಹೀರೋ - Chandan Kumar - CHANDAN KUMAR

ಕಿರುತೆರೆ ಹಾಗೂ ಬಿಗ್ ಸ್ಕ್ರೀನ್​​ನಲ್ಲಿ ತಮ್ಮದೇ ಆದ ವಿಭಿನ್ನ ಚಾರ್ಮ್​​ನಿಂದ ಗುರುತಿಸಿಕೊಂಡಿರುವ ಚಂದನ್ ಕುಮಾರ್ ಅವರೀಗ ಡೈರೆಕ್ಟರ್​​ ಕ್ಯಾಪ್​​ ತೊಟ್ಟಿದ್ದಾರೆ.

Chandan Kumar
ನಟನೆ ಜೊತೆಗೆ ನಿರ್ದೇಶನಕ್ಕಿಳಿದ ಚಂದನ್ ಕುಮಾರ್ (ETV Bharat)
author img

By ETV Bharat Karnataka Team

Published : Sep 12, 2024, 5:52 PM IST

ನಟನೆ ಜೊತೆಗೆ ನಿರ್ದೇಶನ ಮಾಡೋದು ಕನ್ನಡ ಚಿತ್ರರಂಗದಲ್ಲಿ ಹೊಸ ವಿಷಯವೇನಲ್ಲ. ಇತ್ತೀಚಿನ ವರ್ಷಗಳಲ್ಲಿ ದುನಿಯಾ ವಿಜಯ್, ಡಾರ್ಲಿಂಗ್ ಕೃಷ್ಣ, ಸೂರಜ್ ಗೌಡ ಸೇರಿದಂತೆ ಸಾಕಷ್ಟು ನಟರು, ನಿರ್ದೇಶನ ಮಾಡುವ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಇದೀಗ ಕಿರುತೆರೆ ಹಾಗೂ ಬಿಗ್ ಸ್ಕ್ರೀನ್​​ನಲ್ಲಿ ತಮ್ಮದೇ ಆದ ವಿಭಿನ್ನ ಚಾರ್ಮ್​​ನಿಂದ ಗುರುತಿಸಿಕೊಂಡಿರುವ ಚಂದನ್ ಕುಮಾರ್ ಅವರೀಗ ಡೈರೆಕ್ಟರ್​​​ ಕ್ಯಾಪ್​​ ತೊಟ್ಟಿದ್ದಾರೆ.

ಚಂದನ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ಒಂದು ದಶಕ ಪೂರೈಸಿದ್ದಾರೆ. 2014ರಲ್ಲಿ ತೆರೆಕಂಡ ಪರಿಣಯ ಸಿನಿಮಾ ಮೂಲಕ ಹೀರೋ ಆದ ಚಂದನ್ ಕುಮಾರ್, ಎರಡೊಂದ್ಲಾ ಮೂರು, ಲವ್ ಯೂ ಆಲಿಯಾ, ಪ್ರೇಮ ಬರಹ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯದ ಅನುಭವ ಹೊಂದಿದ್ದಾರೆ. ಇದೀಗ 'ಫ್ಲರ್ಟ್' ಶೀರ್ಷಿಕೆಯ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಡೈರೆಕ್ಟರ್ ಆಗುತ್ತಿದ್ದಾರೆ.

ಬುಧವಾರದಂದು ಚಂದನ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಅವರು ನಿರ್ದೇಶನ ಮಾಡುತ್ತಿರುವ ಫ್ಲರ್ಟ್ ಚಿತ್ರದ ಒಂದು ಮೇಕಿಂಗ್ ವಿಡಿಯೋ ರಿವೀಲ್ ಆಗಿದೆ. ಚಂದನ್ ಅಭಿನಯಿಸುತ್ತಿರುವ 10ನೇ ಸಿನಿಮಾ ಇದು. ಅದಕ್ಕೆ ಚಂದನ್ ತಮ್ಮ ಚಿತ್ರಕ್ಕೆ ತಾವೇ ನಿರ್ದೇಶನ ಮಾಡಿಕೊಳ್ಳುವುದರ ಜೊತೆಗೆ ಎವರೆಸ್ಟ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾದ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ.

ಇದನ್ನೂ ಓದಿ: ಸಾತ್ವಿಕ, ಮನ್ವಿತ್​​​ ಅಭಿನಯದ 'ಸಂಜು' ಸಿನಿಮಾಗೆ ಪ್ರಜ್ವಲ್ ದೇವರಾಜ್ ಸಾಥ್: ಟ್ರೇಲರ್​ ರಿಲೀಸ್​​​ - Sanju Trailer

ಚಂದನ್ ಕುಮಾರ್ ಈಗಾಗಲೇ ಫ್ಲರ್ಟ್ ಸಿನಿಮಾದ ಶೂಟಿಂಗ್ ಅನ್ನು ಸದ್ದಿಲ್ಲದೇ ಶುರು ಮಾಡಿದ್ದಾರೆ. ಶ್ರುತಿ, ಅವಿನಾಶ್, ಸಾಧು ಕೋಕಿಲ, ಗಿರಿ ಶಿವಣ್ಣ ಸೇರಿದಂತೆ ಮೊದಲಾದ ಅನುಭವಿ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಮೇಕಿಂಗ್ ವಿಡಿಯೋ ನೋಡುತ್ತಿದ್ರೆ ಅದ್ಧೂರಿಯಾಗಿ ಈ ಸಿನಿಮಾವನ್ನ ಚಿತ್ರೀಕರಣ ಮಾಡಲಾಗುತ್ತಿದೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ನೀಡುತ್ತಿದ್ದು, ಹಿರಿಯ ಕ್ಯಾಮರಾ ಮ್ಯಾನ್ ವೇಣು ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.

ಇದನ್ನೂ ಓದಿ: ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಧನ್ಯಾ ರಾಮ್​​ಕುಮಾರ್​​ ಜೊತೆ ಪೃಥ್ವಿ ಅಂಬಾರ್ ರೊಮ್ಯಾನ್ಸ್ - CHOWKIDAR SHOOTING

ಫ್ಲರ್ಟ್ ಚಿತ್ರದ ಮೂಲಕ ನಿರ್ದೇಶಕರಾಗುತ್ತಿರುವ ಚಂದನ್ ಕುಮಾರ್ ಅವರು ಲವ್ ಸ್ಟೋರಿ ಜೊತೆ ಫ್ಯಾಮಿಲಿ ಕಥೆಯನ್ನು ಹೇಳಲು ಹೊರಟಿದ್ದಾರೆ. ಹಾಗಾದ್ರೆ ಚಂದನ್ ಕುಮಾರ್ ಅಭಿನಯದ ಜೊತೆಗೆ ನಿರ್ದೇಶನ ಹೇಗಿರುತ್ತದೆ ಅನ್ನೋದು ಚಿತ್ರ ತೆರೆಗೆ ಬಂದ ಮೇಲೆ ಗೊತ್ತಾಗಲಿದೆ. ಸದ್ಯ ಚಿತ್ರೀಕರಣ ಚುರುಕಿನಿಂದ ಸಾಗಿದ್ದು, ಚಂದನ್ ಕುಮಾರ್ ನಿರ್ದೇಶನದ ಚೊಚ್ಚಲ ಚಿತ್ರ ವೀಕ್ಷಣೆಗೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.