ETV Bharat / entertainment

ರಾಜಮೌಳಿ ಸಿನಿಮಾ: 8 ವಿಭಿನ್ನ ನೋಟದಲ್ಲಿ ಮಹೇಶ್​ ಬಾಬು; ವಿದೇಶದಲ್ಲಿ ನಡೆಯಲಿದೆ ಚಿತ್ರೀಕರಣ?! - Mahesh Babu Rajamouli movie

ರಾಜಮೌಳಿ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಮಹೇಶ್​ ಬಾಬು 8 ವಿಭಿನ್ನ ನೋಟದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

SSMB29
ಎಸ್​ಎಸ್​ಎಂಬಿ29
author img

By ETV Bharat Karnataka Team

Published : Mar 5, 2024, 5:15 PM IST

ಗುಂಟೂರ್ ಖಾರಂ ಯಶಸ್ಸಿನ ಅಲೆಯಲ್ಲಿರುವ ಸೌತ್​ ಸೂಪರ್​ ಸ್ಟಾರ್ ಮಹೇಶ್​ ಬಾಬು ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ ''SSMB29''. ತಾತ್ಕಾಲಿಕ ಶೀರ್ಷಿಕೆಯುಳ್ಳ ಈ ಚಿತ್ರಕ್ಕೆ ಭಾರತೀಯ ಚಿತ್ರರಂಗದ ದಿಗ್ಗಜ ನಿರ್ದೇಶಕ ಎಸ್​​.ಎಸ್​ ರಾಜಮೌಳಿ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ಸಿನಿಮಾ ಸೆಟ್ಟೇರೋ ಮುನ್ನವೇ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಗುಂಟೂರ್ ಖಾರಂ ವಿಮರ್ಶಕರು-ಪ್ರೇಕ್ಷಕರಿಂದ ಬಹುತೇಕ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದ್ದಲ್ಲದೇ, ಬಾಕ್ಸ್​​ ಆಫೀಸ್​ ವಿಚಾರದಲ್ಲೂ ಯಶ ಕಂಡಿತು. ಈ ಹಿನ್ನೆಲೆ ನಟನ ಮುಂದಿನ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಎಸ್​ಎಸ್​ಎಂಬಿ 29 ಒಂದು ಸಾಹಸ ಸಿನಿಮಾವಾಗಿದ್ದು, ಪ್ರೀ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗಿದೆ. ಇತ್ತೀಚಿನ ಮಾಹಿತಿ ಪ್ರಕಾರ, ಚಿತ್ರತಂಡ ಜರ್ಮನಿಯ ಬ್ಲ್ಯಾಕ್ ಫಾರೆಸ್ಟ್‌ನಲ್ಲಿ ಲೊಕೇಶನ್ ನೋಡುವ ಬಗ್ಗೆಯೂ ಯೋಜಿಸಿದೆಯಂತೆ.

ಎಸ್​ಎಸ್​ಎಂಬಿ29 ಸುತ್ತಲಿರುವ ಮಾಹಿತಿ ಪ್ರಕಾರ, ಹೆಸರಾಂತ ನಟ ಮಹೇಶ್ ಬಾಬು ಎಂಟು ವಿಭಿನ್ನ ನೋಟದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜಮೌಳಿ ಅವರೇ ನಟನ ನೋಟವನ್ನು ಅಂತಿಮಗೊಳಿಸಿದ್ದಾರೆ. ಪ್ರೊಡಕ್ಷನ್ ಟೀಮ್ ಈ ಪ್ರಾಜೆಕ್ಟ್ ಬಗ್ಗೆ ಮೌನ ಮುಂದುವರಿಸಿದ್ದು, ಅಭಿಮಾನಿಗಳ ಕುತೂಹಲ ಮಾತ್ರ ದಿನೇ ದಿನೇ ಹೆಚ್ಚುತ್ತಿದೆ. ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿ, ಪ್ರತಿಷ್ಟಿತ ಪ್ರಶಸ್ತಿ 'ಆಸ್ಕರ್​' ಮುಡಿಗೇರಿಸಿಕೊಂಡ ಆರ್​ಆರ್​ಆರ್​ ನಂತರ ರಾಜಮೌಳಿ ಕೈಗೆತ್ತಿಕೊಂಡಿರುವ ದಿ ಮೋಸ್ಟ್ ಎಕ್ಸ್​ಪೆಕ್ಟೆಡ್ ಚಿತ್ರವಿದು.

ಆರ್‌ಆರ್‌ಆರ್‌ನ ಆಸ್ಕರ್​ ವಿಜೇತ ಹಾಡಿನ ಹಿಂದಿರುವ ಎಂಎಂ ಕೀರವಾಣಿ ಅವರೇ ಈ ಚಿತ್ರಕ್ಕೂ ಸಂಗೀತ ಸಂಯೋಜಿಸಲಿದ್ದಾರೆ. ದುರ್ಗಾ ಆರ್ಟ್ಸ್ ಅಡಿ ಕೆಎಲ್ ನಾರಾಯಣ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಅದ್ಭುತ ಸಿನಿಮೀಯ ಅನುಭವ ನೀಡುವತ್ತ ಚಿತ್ರತಂಡ ಕಾರ್ಯನಿರತವಾಗಿದೆ. ಅದಾಗ್ಯೂ, ಎಸ್​ಎಸ್​ಎಂಬಿ29 ನಿರ್ಮಾಣ ಎರಡ್ಮೂರು ವರ್ಷ ಸಮಯ ತೆಗೆದುಕೊಳ್ಳೋ ಹಿನ್ನೆಲೆ ಅಭಿಮಾನಿಗಳು, ಸಿನಿಪ್ರಿಯರು ತಾಳ್ಮೆ ವಹಿಸೋದು ಅತ್ಯಗತ್ಯ.

ಇದನ್ನೂ ಓದಿ: ಕಮಲ್ ಹಾಸನ್​​ರ 'ಥಗ್ ಲೈಫ್‌'ನಿಂದ ಹೊರಬಂದ ದುಲ್ಕರ್ ಸಲ್ಮಾನ್!

ಹಲವು ಊಹಾಪೋಹಗಳ ನಡುವೆ, ರಾಜಮೌಳಿ ಅವರ ತಂದೆ, ಚಿತ್ರಕಥೆಗಾರ ವಿಜಯೇಂದ್ರ ಪ್ರಸಾದ್ ಅವರು ಅಮೆಜಾನ್ ಕಾಡಿನ ಹಿನ್ನೆಲೆಯಲ್ಲಿ ಈ ಚಿತ್ರ ಮೂಡಿಬರುವ ಬಗ್ಗೆ ಸುಳಿವು ನೀಡಿದ್ದಾರೆ. ಚಿತ್ರದಲ್ಲಿ ವಿದೇಶಿ ಕಲಾವಿದರೂ ಸೇರಿದಂತೆ ಖ್ಯಾತ ನಟರು ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳಿವೆ. ಚಿತ್ರದ ಬಜೆಟ್ಟೇ ಬರೋಬ್ಬರಿ 1000 ಕೋಟಿ ರೂ. ಇರಲಿದೆ ಎಂಬ ವದಂತಿಗಳಿವೆ. ಹಾಗಾದ್ರೆ ಊಹಿಸಿ ಈ ಸಿನಿಮಾ ಯಾವ ಮಟ್ಟಿಗೆ ಮೂಡಿಬರಬಹುದು ಎಂದು. ಒಟ್ಟಾರೆ ಸಿನಿಮಾಗೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿ ಕೊಡುವಂತೆ ಪ್ರೇಕ್ಷಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಬಿಡುಗಡೆಗೂ ಮುನ್ನ ಕೋಟಿ ಕೋಟಿ ವ್ಯವಹಾರ: 'ಯುವ' ಈವೆಂಟ್​​ನ ವಿಡಿಯೋ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.