ನವದೆಹಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಇಂದು ಘೋಷಿಸಿತು. 'ಕೆಜಿಎಫ್ 2' ಅತ್ಯುತ್ತಮ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ಚಿತ್ರಕ್ಕೆ ಅತ್ಯುತ್ತಮ ಆ್ಯಕ್ಷನ್ ಡೈರೆಕ್ಷನ್ ಪ್ರಶಸ್ತಿಯೂ ಲಭಿಸಿದೆ.
Heartiest congratulations to all the winners of the National Awards.
— Yash (@TheNameIsYash) August 16, 2024
A special shoutout to our very own @shetty_rishab , @VKiragandur , Prashanth Neel and the entire @hombalefilms team for the well-deserved recognition for Kantara and KGF 2. Here's to many more heights.
This is…
ಯಶ್ ಸ್ಪೆಷಲ್ ಪೋಸ್ಟ್: ಎಲ್ಲಾ ರಾಷ್ಟ್ರ ಪ್ರಶಸ್ತಿ ವಿಜೇತರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಮ್ಮ ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು, ಪ್ರಶಾಂತ್ ನೀಲ್ ಮತ್ತು ಸಂಪೂರ್ಣ ಹೊಂಬಾಳೆ ಫಿಲ್ಮ್ಸ್ ತಂಡಕ್ಕೆ ಶುಭಾಶಯ. ಕಾಂತಾರ ಮತ್ತು ಕೆಜಿಎಫ್ 2ಗಿದು ಅರ್ಹ ಮನ್ನಣೆ. ಸ್ಯಾಂಡಲ್ವುಡ್ ಇನ್ನೂ ದಾಖಲೆ ಬರೆಯಲಿದೆ. ಇದೊಂದು ನಿಜಕ್ಕೂ ಕನ್ನಡ ಚಿತ್ರರಂಗ ರಾಷ್ಟ್ರಮಟ್ಟದಲ್ಲಿ ಮಿಂಚಿದ ಕ್ಷಣ ಎಂದು ಬರೆದುಕೊಂಡಿದ್ದಾರೆ.
📡LIVE NOW📡
— Ministry of Information and Broadcasting (@MIB_India) August 16, 2024
Announcement of 70th #NationalFilmAwards@AshwiniVaishnaw @Murugan_MoS @PIB_India https://t.co/kBbr3kNFR6
'ಕೆಜಿಎಫ್ 2' ಚಿತ್ರ 2022ರ ಏಪ್ರಿಲ್ 14ರಂದು ತೆರೆಕಂಡು ಬ್ಲಾಕ್ಬಸ್ಟರ್ ಆಗಿತ್ತು. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರ್ ನಿರ್ಮಾಣ ಮಾಡಿದ್ದರು. 100 ಕೋಟಿ ರೂ ಬಜೆಟ್ನ ಈ ಚಿತ್ರ ಸಾವಿರಾರು ಕೋಟಿ ರೂ ಸಂಗ್ರಹ ಮಾಡುವಲ್ಲಿ ಯಶ ಕಂಡಿತ್ತು. ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಶ್ರೀನಿಧಿ ಶೆಟ್ಟಿ ತೆರೆಹಂಚಿಕೊಂಡಿದ್ದರು. ಅಲ್ಲದೇ ಬಾಲಿವುಡ್ ಸೂಪರ್ ಸ್ಟಾರ್ಗಳಾದ ರವೀನಾ ಟಂಡನ್, ಸಮಜಯ್ ದತ್ ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಕನ್ನಡ ಚಿತ್ರರಂಗದ ವಿಜೇತರು: ಕಾಂತಾರ ಸಿನಿಮಾದ ನಟನೆಗೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಸೂಪರ್ ಹಿಟ್ ಕಾಂತಾರ ಚಿತ್ರ ಅತ್ಯುತ್ತಮ ಸಂಪೂರ್ಣ ಮನರಂಜನಾ ಸಿನಿಮಾವಾಗಿ ಹೊರಹೊಮ್ಮಿದೆ. ಕೆಜಿಎಫ್ 2 ಅತ್ಯುತ್ತಮ ಕನ್ನಡ ಸಿನಿಮಾವಾಗಿ ಹೊರಹೊಮ್ಮಿದ್ದಲ್ಲದೇ, ಅತ್ಯುತ್ತಮ ಆ್ಯಕ್ಷನ್ ಡೈರೆಕ್ಷನ್ ಅವಾರ್ಡ್ ಕೂಡಾ ಪಡೆದಿದೆ. ಇವಲ್ಲದೇ ಮಧ್ಯಂತರ ಸಿನಿಮಾಗೆ ಅತ್ಯುತ್ತಮ ಸಂಕಲನ ಮತ್ತು ಚೊಚ್ಚಲ ಚಿತ್ರದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ.
ಇದನ್ನೂ ಓದಿ: 'ಪ್ರಶಸ್ತಿ ಜವಾಬ್ದಾರಿ ಹೆಚ್ಚಿಸಿದೆ'; ಯಶ್, ವಿಕ್ರಮ್ ಕರೆಮಾಡಿ ವಿಶ್ ಮಾಡಿದ್ರು: ರಿಷಬ್ ಶೆಟ್ಟಿ - Rishab Shetty