ETV Bharat / entertainment

ಅಡ್ವೆಂಚರಸ್ ಕಾಮಿಡಿ ಕಥೆಯ 'ಫಾರೆಸ್ಟ್' ಚಿತ್ರದಲ್ಲಿ 7 ಅಡಿ ಎತ್ತರದ ಕಾಶ್ಮೀರಿ ನಟ ಅಭಿನಯ - 7 Feet Tall Actor in Kannada Film - 7 FEET TALL ACTOR IN KANNADA FILM

ಬಾಲಿವುಡ್​​ನ ಸ್ತ್ರೀ 2 ಚಿತ್ರದಲ್ಲಿ ಸರ್ಕಟ ಎಂಬ ಮುಖ್ಯ ಖಳನಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸುನೀಲ್ ಕುಮಾರ್ ಅವರೀಗ ಕನ್ನಡದ 'ಫಾರೆಸ್ಟ್' ಸಿನಿಮಾಗೆ ಎಂಟ್ರಿಕೊಟ್ಟಿದ್ದಾರೆ.

Forest film team
'ಫಾರೆಸ್ಟ್' ಚಿತ್ರದಲ್ಲಿ 7 ಅಡಿ ಎತ್ತರದ ಕಾಶ್ಮೀರಿ ನಟ ಸುನೀಲ್ ಕುಮಾರ್ (ETV Bharat)
author img

By ETV Bharat Karnataka Team

Published : Aug 29, 2024, 7:53 PM IST

ಕನ್ನಡ ಚಿತ್ರರಂಗದಲ್ಲಿ ಅಡ್ವೆಂಚರಸ್ ಕಾಮಿಡಿ ಕಥೆಯನ್ನೊಳಗೊಂಡು ಬರುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಫಾರೆಸ್ಟ್'. ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು, ಚಿಕ್ಕಣ್ಣ ಅಭಿನಯದ ಫಾರೆಸ್ಟ್ ಚಿತ್ರ ಸ್ಯಾಂಡಲ್​​​ವುಡ್​​ನಲ್ಲಿ ಒಂದಿಷ್ಟು ವಿಚಾರಗಳಿಂದ ಸಖತ್​​ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ 7 ಅಡಿ ಎತ್ತರದ ವ್ಯಕ್ತಿಯೋರ್ವರು ಅಭಿನಯಿಸಿದ್ದಾರೆ. ಜಮ್ಮು - ಕಾಶ್ಮೀರದಲ್ಲಿ ಪೊಲೀಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಕಲಾವಿದನಾಗಿಯೂ ಗುರುತಿಸಿಕೊಂಡಿರುವ ಸುನೀಲ್ ಕುಮಾರ್ ಈ ಫಾರೆಸ್ಟ್ ಸಿನಿಮಾದಲ್ಲಿ ನಟಿಸಿದ್ದಾರೆ. 7.8 ಅಡಿ ಎತ್ತರವಿರುವ ಸುನೀಲ್ ಕುಮಾರ್ ಅವರನ್ನು ಅಲ್ಲಿನವರು 'ದಿ ಗ್ರೇಟ್ ಕಲಿ ಆಫ್ ಜಮ್ಮು' ಎಂದು ಕರೆಯುತ್ತಾರೆ.

Forest film
'ಫಾರೆಸ್ಟ್' ಚಿತ್ರತಂಡ (ETV Bharat)

ಬಾಲಿವುಡ್​​ನ ಸ್ತ್ರೀ 2 ಚಿತ್ರದಲ್ಲಿ ಸರ್ಕಟ ಎಂಬ ಮುಖ್ಯ ಖಳನಟನ ಪಾತ್ರದಲ್ಲಿ ಇವರು ಅಭಿನಯಿಸಿದ್ದಾರೆ. ಯಶ್ ಅಭಿನಯದ ಚಿತ್ರದಲ್ಲೂ ನಟಿಸೋ ಮಾತುಕತೆ ಕೂಡ ನಡೆಯುತ್ತಿದೆ ಎಂದು ಸಂದರ್ಶನವೊಂದರಲ್ಲಿ ಸುನೀಲ್ ಕುಮಾರ್ ಹೇಳಿಕೊಂಡಿದ್ದಾರೆ. ಪ್ರಸ್ತುತ ಫಾರೆಸ್ಟ್ ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ‌‌‌.‌

ಸಾಹಸ ನಿರ್ದೇಶಕ ರವಿವರ್ಮಾ ಅವರ ನಿರ್ದೇಶನದಲ್ಲಿ ಫಾರೆಸ್ಟ್​​ನಲ್ಲೇ ಸಾಹಸ ಸನ್ನಿವೇಶದ ಚಿತ್ರೀಕರಣ ನಡೆಯಿತು. ಏಳು ದಿನಗಳ ಕಾಲ ನಡೆದ ಶೂಟಿಂಗ್​ನಲ್ಲಿ ಸುನೀಲ್ ಕುಮಾರ್ ಭಾಗವಹಿಸಿದ್ದರು. ಅತಿ ಎತ್ತರವಿರುವ ಕಾರಣ ತೆರೆದ ಜೀಪ್​​ನಲ್ಲೇ ಇವರು ಪಯಣಿಸುತ್ತಿದ್ದರು. ವಿಮಾನದಲ್ಲಿ ಪಯಣಿಸುವಾಗಲೂ ಇವರಿಗೆ ಎರಡು ಟಿಕೇಟ್ ಬುಕ್ ಮಾಡಲಾಗುತ್ತಿತ್ತು ಎಂದು ನಿರ್ದೇಶಕ ಚಂದ್ರಮೋಹನ್ ತಿಳಿಸಿದ್ದಾರೆ.

Forest film
'ಫಾರೆಸ್ಟ್' ಚಿತ್ರತಂಡ (ETV Bharat)

ಇದನ್ನೂ ಓದಿ: ಕಿಚ್ಚ ಸುದೀಪ್​​ ಬರ್ತ್​​ಡೇಗೆ 3 ಬಿಗ್ ಅನೌನ್ಸ್​​​ಮೆಂಟ್ಸ್: ಏನವು? - Sudeep movies

ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಅವರು ಪ್ರಮುಖಪಾತ್ರದಲ್ಲಿ ಅಭಿನಯಿಸಿರುವ ಈ ಮಲ್ಟಿ ಸ್ಟಾರರ್ ಚಿತ್ರದ ಹೆಚ್ಚಿನ ಕಥೆ ಫಾರೆಸ್ಟ್​​ನಲ್ಲೇ ನಡೆದಿದೆ. ಇವರ ಜೊತೆ ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್ ಸೇರಿದಂತೆ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ: 'ಸಾಕ್ಷಿದಾರನಾಗಿ ಆರೋಪಿತರನ್ನು ಭೇಟಿ ಮಾಡಬಾರದೆಂದು ಗೊತ್ತಿರಲಿಲ್ಲ': ದರ್ಶನ್​ ಭೇಟಿ ಬಗ್ಗೆ ವಿಚಾರಣೆಗೊಳಗಾದ ಚಿಕ್ಕಣ್ಣ - Chikkanna Attends Investigation

ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಸಂಪಾಜೆ ಫಾರೆಸ್ಟ್ ಹಾಗೂ ಮಲೆ ಮಾದೇಶ್ವರ ಬೆಟ್ಟದ ಸುತ್ತಮುತ್ತ 80 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆದಿದೆ. ಎನ್.ಎಂ.ಕೆ. ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಎನ್.ಎಂ.ಕಾಂತರಾಜ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ಬಗ್ಗೆ ವಿಶೇಷ ಒಲವಿರುವ ನಿರ್ಮಾಪಕರು ಯಾವುದೇ ಕೊರತೆ ಬಾರದಂತೆ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಡಬಲ್ ಇಂಜಿನ್ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ಚಂದ್ರಮೋಹನ್ ಈ ಚಿತ್ರಕ್ಕೆ ಆ್ಯಕ್ಷನ್​​ ಕಟ್​ ಹೇಳಿದ್ದಾರೆ. ಚಂದ್ರಮೋಹನ್ ಹಾಗೂ ಸತ್ಯಶೌರ್ಯ ಸಾಗರ್ 'ಫಾರೆಸ್ಟ್' ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿದ್ದು, ಸತ್ಯಶೌರ್ಯ ಸಾಗರ್ ಸಂಭಾಷಣೆ ಬರೆದಿದ್ದಾರೆ. ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲು ಅಣಿಯಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.