ETV Bharat / education-and-career

ಉದ್ಯೋಗ ಮಾರ್ಗಸೂಚಿ: ಕೆಲಸ ಹುಡುಕುವ ಅಭ್ಯರ್ಥಿಗಳು ವ್ಯಕ್ತಿಗತವಾಗಿ ರೂಢಿಸಿಕೊಳ್ಳಬೇಕಾದ ಕೌಶಲ್ಯಗಳಿವು - SKILLS FOR JOB SEEKERS - SKILLS FOR JOB SEEKERS

ಈ ರೀತಿಯ ಕೌಶಲ್ಯಗಳು ಕೇವಲ ಸಂಸ್ಥೆಗಳಿಗೆ ಮಾತ್ರವಲ್ಲ, ಅಭ್ಯರ್ಥಿಗಳ ವೈಯಕ್ತಿಕ ಬೆಳವಣಿಗೆಗೆ ಕೂಡ ಪ್ರಯೋಜನಕಾರಿ ಆಗುತ್ತವೆ.

to-get-a-good-job-in-today-candidate-needs-inharitant-skill
ಉದ್ಯೋಗ ಮಾರ್ಗಸೂಚಿ (ಸಂಗ್ರಹ ಚಿತ್ರ)
author img

By ETV Bharat Karnataka Team

Published : Jun 17, 2024, 5:35 PM IST

ಹೈದರಾಬಾದ್​: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯಮದಲ್ಲಿ ಅಗತ್ಯತೆಗಳು ಬದಲಾಗುತ್ತಿರುತ್ತವೆ. ಅದರಂತೆ ಉದ್ಯೋಗ ಪಡೆಯಲು ಕೇವಲ ಶೈಕ್ಷಣಿಕ ಅರ್ಹತೆಯೊಂದೇ ಸಾಕಾಗುವುದಿಲ್ಲ. ಅದಕ್ಕೆ ಅನುಸಾರವಾದ ಇತರೆ ಕೌಶಲ್ಯಗಳು ಕೂಡ ಅಭ್ಯರ್ಥಿ ಮೈಗೂಡಿಸಿಕೊಳ್ಳಬೇಕಾಗುತ್ತದೆ. ಈ ಕೌಶಲ್ಯಗಳು ಕಲಿಕೆಯ ಬದಲಾಗಿ ವ್ಯಕ್ತಿಗತವಾಗಿ ರೂಢಿಸಿಕೊಳ್ಳಿವುದು ಅವಶ್ಯ. ಇಂತಹ ವಿಶೇಷ ಕೌಶಲ್ಯಗಳನ್ನು ಸಂದರ್ಶಕರು ಕೂಡ ಗಮನಿಸಿ, ಪ್ರಶ್ನಿಸುತ್ತಾರೆ. ಈ ರೀತಿಯ ಕೌಶಲ್ಯಗಳು ಕೇವಲ ಸಂಸ್ಥೆಗಳಿಗೆ ಮಾತ್ರವಲ್ಲ, ಅಭ್ಯರ್ಥಿಗಳ ವೈಯಕ್ತಿಕ ಬೆಳವಣಿಗೆಗೆ ಕೂಡ ಪ್ರಯೋಜನಕಾರಿ ಆಗುತ್ತವೆ.

ಹೊಸ ವಿಷಯಗಳ ಕಲಿಕೆ: ಉನ್ನತ ಶಿಕ್ಷಣದ ಪಡೆದವರು ನಂತರ ಉದ್ಯೋಗದ ಹುಡುಕಾಟಕ್ಕೆ ಮುಂದಾಗುವುದು ಸಹಜ. ಈ ವೇಳೆ ಸರಿಯಾದ ಕೌಶಲ್ಯಗಳು ನಿಮಗಿಲ್ಲದೆ ಹೋದಲ್ಲಿ ವರ್ಷಾನುಗಟ್ಟಲೇ ಕೆಲಸವನ್ನು ಪಡೆಯಲು ಹರಸಾಹಸ ಪಡಬೇಕಾಗುತ್ತದೆ. ಬದಲಾಗುತ್ತಿರುವ ತಂತ್ರಜ್ಞಾನಗಳನ್ನು ಅಪ್ಪಿಕೊಂಡಲ್ಲಿ ಮಾತ್ರ ಕ್ಷೇತ್ರದಲ್ಲಿ ಉಳಿಯಲು ಸಾಧ್ಯ. ಬದಲಾಗುತ್ತಿರುವ ತಂತ್ರಜ್ಞಾನವನ್ನು ನಿರಂತರವಾಗಿ ಕಲಿಯುವ ವಿದ್ಯಾರ್ಥಿ ಆಗಿರಬೇಕು. ಹೊಸ ವಿಷಯಗಳನ್ನು ಕಲಿಕೆ ಸಾಗಿದಂತೆ, ಅದರ ಕುರಿತು ಮಾಹಿತಿ ಪಡೆದಾಗ ಉದ್ಯೋಗದಲ್ಲಿ ಅವಕಾಶಗಳನ್ನು ಕಾಣಬಹುದಾಗಿದೆ.

ಕುತೂಹಲ ಹೊಂದಿರಿ: ಜಗತ್ತಿನಲ್ಲಿ ಉದ್ಯೋಗ ಸಂಬಂಧ ಆಗುತ್ತಿರುವ ಹೊಸ ಹೊಸ ಟ್ರೆಂಡ್​ಗಳ ಕುರಿತು ಕಲಿಯುವ ಆಸಕ್ತಿಯನ್ನು ಹೊಂದಿರಬೇಕು. ಹೊಸ ಚಿಂತನೆ ಕೌಶಲ್ಯ ಮತ್ತು ಅವಿಷ್ಕಾರಗಳು ನಿಮಗೆ ಉದ್ಯೋಗದ ಅವಕಾಶವನ್ನು ನೀಡುತ್ತವೆ. ಕೆಲವು ಮಾನವ ಸಂಪನ್ಮೂಲಗಳಿಗೆ ಬೇಡಿಕೆ ಇದ್ದು, ಈ ನಿಟ್ಟಿನಲ್ಲಿ ಹೊಸ ಹೊಸ ವಿಚಾರಗಳು ಗೊತ್ತಿರಬೇಕಾಗುತ್ತದೆ.

ಬೆಳವಣಿಗೆ ಅಭಿಲಾಷೆ ಹೊಂದಿ: ಉದ್ಯೋಗ ಸಿಕ್ಕಿದಾಕ್ಷಣ ಕೇವಲ ನಿಮ್ಮ ವೃತ್ತಿಯಲ್ಲಿ ಮಾತ್ರ ಅಭಿವೃದ್ಧಿ ಹೊಂದುವ ಆಸೆ ಇಟ್ಟುಕೊಳ್ಳಬೇಡಿ. ಸಾಧ್ಯವಾದಲ್ಲಿ ಉದ್ಯಮದಲ್ಲೇ ಅಭಿವೃದ್ಧಿ ಹೊಂದಿ. ಅಂತಹ ಗುರಿ ಸಾಧನೆಗೆ ಬೇಕಾದ ಮಿತಿ ರೂಪಿಸಿ. ಜೊತೆಗೆ ಜೀವನದಲ್ಲಿ ಕೂಡ ತಾಳ್ಮೆ, ಸ್ಪರ್ಧಾತ್ಮಕತೆ, ಪರಿಶ್ರಮದ ಅಭಿಲಾಷೆಯ ಬೆಳವಣಿಗೆ ಹೊಂದಿರಿ. ಇದು ಕೂಡ ಹೊಸ ಅವಕಾಶವನ್ನು ನೀಡುತ್ತದೆ.

ನಾಯಕತ್ವದ ಗುಣ: ಜೀವನದಲ್ಲಿ ಪ್ರತಿಯೊಬ್ಬರು ಯಶಸ್ವಿಯಾಗಬೇಕೆಂದು ಬಯಸುತ್ತಾರೆ. ಆದರೆ, ಕೆಲವವರು ಮಾತ್ರ ಈ ಕನಸನ್ನು ನನಸು ಮಾಡಲು ಸಾಧ್ಯ. ಬೇರೆಯವರ ಅಭಿಪ್ರಾಯದ ಬಗ್ಗೆ ತಿರಸ್ಕಾರ, ಸಿಟ್ಟು ಇರಬಾರದು. ಎಲ್ಲರನ್ನು ಸಮವಾಗಿ ಕಾಣುವ ಮೂಲಕ ತಂಡವನ್ನು ಮುನ್ನಡೆಸುವ ಗುರಿಯನ್ನು ಹೊಂದಿರಬೇಕು. ಇದರಿಂದಾಗಿ ಮಾತ್ರವೇ ತಂಡದ ನಾಯಕರಾಗಿ ಬೆಳೆಯಲು ಸಾಧ್ಯ.

ವಿಭಿನ್ನ ರೀತಿ ಆಲೋಚಿಸಿ: ಯಾವುದೇ ವಿಷಯವಿರಲಿ, ಅದನ್ನು ಟೀಕಾತ್ಮಕವಾಗಿ ಚಿಂತಿಸಿ. ಯಾವುದೇ ಸಮಸ್ಯೆಯನ್ನು ಪರಿಹರಿಸುವಲ್ಲಿ ನಿಮ್ಮದೇ ಆದ ವಿಭಿನ್ನ ದೃಷ್ಟಿಕೋನವನ್ನು ಹೊಂದಿರಿ. ಸಾಮಾನ್ಯರ ರೀತಿಯಲ್ಲದೇ, ಬೇರೆಯ ಉತ್ತಮ ರೀತಿಯ ಆಲೋಚನೆ ನಿಮ್ಮನ್ನು ಎಲ್ಲರ ಮುಂದೆ ಹೈಲೈಟ್​ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ದ್ಯೋಗ ಮಾರ್ಗಸೂಚಿ: ವೃತ್ತಿಯಲ್ಲಿ ಬೆಳವಣಿಗೆ ಸಾಧಿಸಲು ಈ ಕೌಶಲ್ಯಗಳು ಅತ್ಯವಶ್ಯಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.