ETV Bharat / education-and-career

ಕರಾಮುವಿ ಪ್ರವೇಶಕ್ಕೆ ನ.15 ಕಡೆ ದಿನಾಂಕ: ವಿವಿಯಿಂದ ಕೆಎಎಸ್‌ ಪರೀಕ್ಷೆಗೂ ಸಿಗಲಿದೆ ತರಬೇತಿ - KARNATAKA OPEN UNIVERSITY

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 2024-25ನೇ ಸಾಲಿನ ಪ್ರವೇಶಾತಿ ಕುರಿತಂತೆ ಕರಾಮುವಿ ಪ್ರಾದೇಶಿಕ ಕಚೇರಿಯ ನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದಾರೆ.

OPEN UNIVERSITY
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ETV Bharat)
author img

By ETV Bharat Karnataka Team

Published : Nov 13, 2024, 8:46 PM IST

ಬೆಂಗಳೂರು: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 2024-25ನೇ ಸಾಲಿನಲ್ಲಿ (ಜುಲೈ ಆವೃತ್ತಿ) ಪ್ರವೇಶಕ್ಕೆ ಲಭ್ಯವಿರುವ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸುಗಳ ಪ್ರವೇಶಕ್ಕೆ ನವೆಂಬರ್‌ 15 ಕೊನೆಯ ದಿನವಾಗಿದೆ ಎಂದು ಮಲ್ಲೇಶ್ವರಂನ ಕರಾಮುವಿ ಪ್ರಾದೇಶಿಕ ಕಚೇರಿ ನಿರ್ದೇಶಕಿ ಜೆ.ಶಶಿಕಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ, ಬಿಎಸ್‌ಡಬ್ಲ್ಯು ಸೇರಿದಂತೆ ವಿವಿಧ ಪದವಿ ಕೋರ್ಸುಗಳು ಮತ್ತು ಎಂಎ, ಎಂಕಾಂ, ಎಂಎಸ್ಸಿ, ಎಂಎಸ್‌ಡಬ್ಲ್ಯು, ಎಂಬಿಎ ಇನ್ನಿತರ ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ, ಸರ್ಟಿಫಿಕೆಟ್‌ ಕೋರ್ಸುಗಳಿಗೆ ಆಸಕ್ತ ಅಭ್ಯರ್ಥಿಗಳು ವಿವಿಯ ವೆಬ್‌ಸೈಟ್‌ www.ksoumysuru.ac.in ನಲ್ಲಿ ಆನ್‌ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು. ನಂತರ ಮಲ್ಲೇಶ್ವರಂನಲ್ಲಿರುವ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿಯಲ್ಲಿ ಶುಲ್ಕ ಪಾವತಿಸಬೇಕು ಎಂದು ಹೇಳಿದ್ದಾರೆ.

ಕರಾಮುವಿಯಿಂದ ಕೆಎಎಸ್‌ ಪರೀಕ್ಷೆಗೆ ತರಬೇತಿ: ಕರ್ನಾಟಕ ಲೋಕಸೇವಾ ಆಯೋಗವು ಬರುವ ಡಿಸೆಂಬರ್‌ 29ರಂದು ನಡೆಸಲಿರುವ ಕೆಎಎಸ್ ಪರೀಕ್ಷೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ತನ್ನ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ 30 ದಿನಗಳ ತರಬೇತಿ ನೀಡಲಾಗುವುದು ಎಂದು ಕರಾಮುವಿ ಪ್ರಾದೇಶಿಕ ಕಚೇರಿ ನಿರ್ದೇಶಕರು ತಿಳಿಸಿದ್ದಾರೆ.

ಮೈಸೂರಿನ ಕೇಂದ್ರ ಕಚೇರಿಯಲ್ಲಿ ತರಬೇತಿ ನಡೆಯಲಿದ್ದು, ಆಸಕ್ತರು ನವೆಂಬರ್‌ 16ರೊಳಗೆ ವಿವಿಯ ದೂರವಾಣಿ: 0821-2515944ಕ್ಕೆ ಕರೆ ಮಾಡಿ ಹೆಸರು ನೋಂದಾಯಿಸಬಹುದು ಎಂದು ನಗರದ ಜೆ.ಶಶಿಕಲಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ: ಪೌರ ಕಾರ್ಮಿಕ ಹುದ್ದೆಗೆ ಅರ್ಜಿ ಆಹ್ವಾನ: ಮಾಸಿಕ 27,000 ರೂ. ವೇತನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.