ETV Bharat / education-and-career

ಪಿಯುಸಿ ಪಾಸಾಗಿದ್ರೆ ಭಾರತೀಯ ಕೋಸ್ಟ್​ ಗಾರ್ಡ್​​ನಲ್ಲಿದೆ ಉದ್ಯೋಗ - Indian Coast Guard

author img

By ETV Bharat Karnataka Team

Published : Jun 13, 2024, 3:56 PM IST

ಪಿಯುಸಿ ಉತ್ತೀರ್ಣಗೊಂಡಿರುವ ಅಭ್ಯರ್ಥಿಗಳು ಭಾರತೀಯ ಕೋಸ್ಟ್​ ಗಾರ್ಡ್‌ನ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

navik and Yantrik job Recruitment by Indian Coast guard
ಸಾಂದರ್ಭಿಕ ಚಿತ್ರ (ETV Bharat)

ಬೆಂಗಳೂರು: ಭಾರತೀಯ ಕೋಸ್ಟ್​ ಗಾರ್ಡ್​ನಲ್ಲಿ ನಾವಿಕ​ ಮತ್ತು ಯಾಂತ್ರಿಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 320 ಹುದ್ದೆಗಳಿವೆ. ಆಯ್ಕೆ ಪ್ರಕ್ರಿಯೆ, ನೇಮಕಾತಿ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.

  • ನಾವಿಕ (ಜನರಲ್​ ಡ್ಯೂಟಿ)- 260
  • ಯಾಂತ್ರಿಕ- 60

ವಿದ್ಯಾರ್ಹತೆ: ಪಿಯುಸಿ ಉತ್ತೀರ್ಣರಾಗಿರಬೇಕು.

ವೇತನ: ನಾವಿಕ ಹುದ್ದೆಗೆ ಮಾಸಿಕ 21,700 ರೂ, ಯಾಂತ್ರಿಕ ಹುದ್ದೆಗೆ 29,200 ರೂ.

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 22 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 300 ರೂ ಅರ್ಜಿ ಶುಲ್ಕವಿದೆ.

ಆಯ್ಕೆ ಪ್ರಕ್ರಿಯೆ: ಕಂಪ್ಯೂಟರ್​ ಪರೀಕ್ಷೆ, ಅಸೆಸ್ಮೆಂಟ್​ ಮತ್ತು ಅಡಾಪ್ಟಿಬಿಲಿಪಿ ಪರೀಕ್ಷೆ​, ದೈಹಿಕ ಸಾಮರ್ಥ್ಯ ಪರೀಕ್ಷೆ, ದಾಖಲಾತಿ ಪರಿಶೀಲನೆ ಮೂಲಕ ಆಯ್ಕೆ. ಜೂನ್​ 13ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜುಲೈ 3 ಕಡೇಯ ದಿನ. ಈ ಕುರಿತು ಹೆಚ್ಚಿನ ಮಾಹಿತಿಗೆ indiancoastguard.gov.in ಭೇಟಿ ನೀಡಿ.

navik and Yantrik job Recruitment by Indian Coast guard
ಅಧಿಸೂಚನೆ (ಭಾರತೀಯ ಕೋಸ್ಟ್​ ಗಾರ್ಡ್)

ಬಿಎಸ್​ಎಫ್​ ನೇಮಕಾತಿ: ಗಡಿ ಭದ್ರತಾ ಪಡೆಯಲ್ಲಿರುವ 1526 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. 243 ಸಹಾಯಕ ಸಬ್​ ಇನ್ಸ್​​ಪೆಕ್ಟರ್​ (ಮಿನಿಸ್ಟ್ರಿಯಲ್​) ಮತ್ತು 1283 ಹೆಡ್​ ಕಾನ್ಸ್​ಟೇಬಲ್ (ಕ್ಲರ್ಕ್​)​ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. ಪಿಯುಸಿ ಉತ್ತೀರ್ಣರಾಗಿದ್ದು, ಟೈಪಿಂಗ್​ ಅನುಭವ ಹೊಂದಿದ್ದವರು ಅರ್ಜಿ ಹಾಕಬಹುದು.

ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಲಿಖಿತ ಪರೀಕ್ಷೆ, ದೇಹದಾರ್ಢ್ಯತೆ, ಕೌಶಲ್ಯ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ನಡೆಯಲಿದೆ. ಜೂನ್​ 9ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 8 ಕಡೇಯ ದಿನ. ಈ ಕುರಿತು ಹೆಚ್ಚಿನ ಮಾಹಿತಿಗೆ rectt.bsf.gov.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ; 304 ಹುದ್ದೆಗಳ ವಿವರ ಇಲ್ಲಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.