ETV Bharat / education-and-career

1940 ಗ್ರಾಮೀಣ ಡಾಕ್​ ಸೇವಕ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎರಡೇ ದಿನ ಬಾಕಿ - Karnataka Postal Circle Recruitment

ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​​ 5 ಆಗಿದೆ. ಅರ್ಜಿ ತಪ್ಪು ಸರಿಪಡಿಸುವಿಕೆಗೆ ಆಗಸ್ಟ್​ 6 ರಿಂದ 8ರ ವರೆಗೆ ಕಾಲ ಅವಕಾಶ ನೀಡಲಾಗಿದೆ.

Karnataka Postal Circle Recruitment for Gramin Dak Sevak job
ಇಂಡಿಯಾ ಪೋಸ್ಟ್​ (ಸಂಗ್ರಹ ಚಿತ್ರ)
author img

By ETV Bharat Karnataka Team

Published : Aug 3, 2024, 5:41 PM IST

Updated : Aug 3, 2024, 5:49 PM IST

ಬೆಂಗಳೂರು: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಒಟ್ಟು 1940 ಗ್ರಾಮೀಣ ಡಾಕ್​ ಸೇವಕ್​ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಆಗಸ್ಟ್​ 5 ಕಡೇಯ ದಿನವಾಗಿದೆ. ಎಸ್​ಎಸ್​ಎಲ್​ಸಿ ಉತ್ತೀರ್ಣರು ಈ ಹುದ್ದೆಗೆ ಅರ್ಜರಾಗಿದ್ದಾರೆ. ಬ್ರಾಂಚ್​ ಪೋಸ್ಟ್​ ಮಾಸ್ಟರ್​ (ಬಿಪಿಎಂ) ಅಸಿಸ್ಟೆಂಟ್​ ಬ್ರಾಂಚ್​ ಪೋಸ್ಟ್​ ಮಾಸ್ಟರ್​​ (ಎಬಿಪಿಎಂ) ಹುದ್ದೆಗಳ ನೇಮಕಾತಿ ನಡೆಯಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..

ಒಟ್ಟು ಹುದ್ದೆ: ಕರ್ನಾಟಕದ ಬಿಪಿಎಂ ಮತ್ತು ಎಬಿಪಿಎಂನ ಹುದ್ದೆ ನೇಮಕಾತಿ ಕುರಿತ ಜಿಲ್ಲಾವಾರು ಮಾಹಿತಿ

  • ಬಾಗಲಕೋಟೆ - 23
  • ಬಳ್ಳಾರಿ - 50
  • ಬೆಂಗಳೂರು ಜಿಪಿಒ - 4
  • ಬೆಳಗಾವಿ - 33
  • ಬೆಂಗಳೂರು ಪೂರ್ವ - 83
  • ಬೆಂಗಳೂರು ದಕ್ಷಿಣ - 62
  • ಬೆಂಗಳೂರು ಪಶ್ಚಿಮ - 39
  • ಬೀದರ್​​ - 59
  • ಚನ್ನಪಟ್ಟಣ - 87
  • ಚಿಕ್ಕಮಗಳೂರು - 60
  • ಚಿಕ್ಕೋಡಿ - 19
  • ಚಿತ್ರದುರ್ಗ - 27
  • ದಾವಣಗೆರೆ - 40
  • ಧಾರವಾಡ - 22
  • ಗದಗ - 18
  • ಗೋಕಾಕ್​ - 7
  • ಹಾಸನ - 78
  • ಹಾವೇರಿ - 44
  • ಕಲಬುರಗಿ - 83
  • ಕಾರವಾರ - 43
  • ಕೊಡಗು - 76
  • ಕೋಲಾರ - 106
  • ಕೊಪ್ಪಳ -36
  • ಮಂಡ್ಯ - 65
  • ಮಂಗಳೂರು - 62
  • ಮೈಸೂರು - 42
  • ನಂಜನಗೂಡು - 66
  • ಪುತ್ತೂರು - 89
  • ರಾಯಚೂರು - 63
  • ಆರ್​ಎಂಎಸ್​ ಹೆಚ್​ಬಿ - 3
  • ಆರ್​ಎಂಎಸ್​ ಕ್ಯೂ - 9
  • ಶಿವಮೊಗ್ಗ - 89
  • ಶಿರಸಿ - 66
  • ತುಮಕೂರು - 107
  • ಉಡುಪಿ - 90
  • ವಿಜಯಪುರ - 40
  • ಯಾದಗಿರಿ - 50

ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ 40 ವರ್ಷಗಳಾಗಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲ ಚೇತನ, ತೃತೀಯ ಲಿಂಗಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಇತರ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

https://etvbharatimages.akamaized.net/etvbharat/prod-images/03-08-2024/grameen-dak-sevak-1_0308newsroom_1722682195_264.jpg
ಅಧಿಸೂಚನೆ (ಇಂಡಿಯನ್​ ಪೋಸ್ಟ್​)

ವೇತನ: ಗ್ರಾಮೀಣ ಡಾಕ್​ ಸೇವಕ್​ ಬ್ರಾಂಚ್​ ಪೋಸ್ಟ್​ ಮಾಸ್ಟರ್​ (ಬಿಪಿಎಂ) ಹುದ್ದೆಗೆ 12,000 - 29,380ರೂ. ವರೆಗೆ ಗ್ರಾಮೀಣ ಡಾಕ್​ ಸೇವಕ್​ ಅಸಿಸ್ಟೆಂಟ್​ ಬ್ರಾಂಚ್​ ಪೋಸ್ಟ್​ ಮಾಸ್ಟರ್​​ (ಎಬಿಪಿಎಂ) ಹುದ್ದೆಗೆ 10000 - 24470ರೂ. ವರೆಗೆ ವೇತನ ನಿಗದಿಪಡಿಸಲಾಗಿದೆ.

ಆಯ್ಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಮೆರಿಟ್​ ಪಟ್ಟಿ, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಈ ಹುದ್ದೆಗೆ ಜುಲೈ 15ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​​ 5 ಆಗಿದೆ. ಅರ್ಜಿಯಲ್ಲಿ ಏನಾದರೂ ತಿದ್ದುಪಡಿ ಇದ್ದಲ್ಲಿ ಸರಿಪಡಿಸುವಿಕೆಗೆ ಆಗಸ್ಟ್​ 6 ರಿಂದ 8ರ ವರೆಗೆ ಅವಕಾಶ ನೀಡಲಾಗಿದೆ.

ಈ ಹುದ್ದೆ ಕುರಿತು ಸಂಪೂರ್ಣ ವಿವರಣೆ, ಅರ್ಜಿ ಸಲ್ಲಿಕೆ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯ ಅಧಿಕೃತ ಜಾಲತಾಣವಾದ karnatakapost.gov.inಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: ಮಂಗಳೂರು ವಿವಿ: ಅರೆಕಾಲಿಕ, ಪೂರ್ಣಕಾಲಿಕ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

Last Updated : Aug 3, 2024, 5:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.