ETV Bharat / education-and-career

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ; 490 ಜೂನಿಯರ್​ ಎಕ್ಸಿಕ್ಯೂಟಿವ್ ಹುದ್ದೆ - ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ

ಜೂನಿಯರ್​ ಎಕ್ಸಿಕ್ಯೂಟಿವ್​​ನಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 490 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

junior excutive post recruitment by Airports Authority of India

author img

By ETV Bharat Karnataka Team

Published : Feb 20, 2024, 5:07 PM IST

ಬೆಂಗಳೂರು: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ (ಎಎಐ) 490 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ವಿವಿಧ ವಿಭಾಗದಲ್ಲಿ ಜೂನಿಯರ್​ ಎಕ್ಸಿಕ್ಯೂಟಿವ್​ (ಕಿರಿಯ ಕಾರ್ಯನಿರ್ವಾಹಕ ಅಧಿಕಾರಿ) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಭಾರತದಾದ್ಯಂತ ಈ ನೇಮಕಾತಿ ನಡೆಯಲಿದ್ದು, ಈ ಹುದ್ದೆ ಅರ್ಜಿ ಸಲ್ಲಿಕೆ, ವೇತನ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆ ವಿವರ: 490 ಜೂನಿಯರ್​ ಎಕ್ಸಿಕ್ಯೂಟಿವ್​ ಹುದ್ದೆ ಮತ್ತು ವಿದ್ಯಾರ್ಹತೆ ಮಾಹಿತಿ ಇಂತಿದೆ

ಹುದ್ದೆ ಹುದ್ದೆ ಸಂಖ್ಯೆವಿದ್ಯಾರ್ಹತೆ
ಜೂನಿಯರ್​ ಎಕ್ಸಿಕ್ಯೂಟಿವ್​ (ಆರ್ಕಿಟೆಕ್ಚರ್​​)3ಆರ್ಕಿಟೆಕ್ಚರ್​ನಲ್ಲಿ ಪದವಿ
ಜೂನಿಯರ್​​ ಎಕ್ಸಿಕ್ಯೂಟಿವ್​ (ಇಂಜಿನಿಯರಿಂಗ್- ಸಿವಿಲ್​​​) 90ಸಿವಿಲ್​ ಇಂಜಿನಿಯರಿಂಗ್​ನಲ್ಲಿ ಪದವಿ
ಜೂನಿಯರ್​​ ಎಕ್ಸಿಕ್ಯೂಟಿವ್​ (ಇಂಜಿನಿಯರಿಂಗ್​- ಎಲೆಕ್ಟ್ರಾನಿಕಲ್​ )106ಎಲೆಕ್ಟ್ರಿಕಲ್​ ಇಂಜಿನಿಯರಿಂಗ್​ ಪದವಿ
ಜೂನಿಯರ್​​ ಎಕ್ಸಿಕ್ಯೂಟಿವ್​ (ಎಲೆಕ್ಟ್ರಾನಿಕ್ಸ್​​) 278ಎಲೆಕ್ಟ್ರಾನಿಕ್ಸ್​​. ಟೆಲಿ ಕಮ್ಯೂನಿಕೇಷನ್​, ಎಲೆಕ್ಟ್ರಿಕಲ್​ ಇಂಜಿನಿಯರಿಂಗ್​​​ ಪದವಿ
ಜೂನಿಯರ್​​ ಎಕ್ಸಿಕ್ಯೂಟಿವ್​ (ಮಾಹಿತಿ ತಂತ್ರಜ್ಞಾನ) 13 ಕಂಪ್ಯೂಟರ್​ಸೈನ್ಸ್​, ಎಂಸಿಎ ಪದವಿ

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ ವಯೋಮಿತಿಯನ್ನು ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ, ವಿಶೇಷಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ. ಇತರೆ ಅಭ್ಯರ್ಥಿಗಳಿಗೆ 300 ರೂ. ಅರ್ಜಿ ಶುಲ್ಕ ಇರಲಿದೆ.

ವೇತನ: 40,000 -140000 ರೂ. ಮಾಸಿಕ ವೇತನ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳನ್ನು ಗೇಟ್​ ಅಂಕಪಟ್ಟಿ ಮತ್ತು ಅರ್ಜಿ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುವುದು.

ಈ ಹುದ್ದೆಗೆ ಏಪ್ರಿಲ್​​ 2ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಮೇ 1 ಆಗಿರಲಿದೆ.

ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು aai.aero ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಕೆಪಿಸಿಎಲ್​ನಲ್ಲಿ ಉದ್ಯೋಗ; ಕರ್ನಾಟಕ ವಿದ್ಯುತ್​ ನಿಗಮ ನಿಯಮಿತದಿಂದ ಸಹಾಯಕ ಕಾನೂನು ಅಧಿಕಾರಿಗಳ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು ಆರು ಹುದ್ದೆಗಳನ್ನು 2 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುವುದು. ವಕೀಲ ವೃತ್ತಿಯಲ್ಲಿ ಕನಿಷ್ಠ 5 ವರ್ಷದ ಹುದ್ದೆ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಈ ಹುದ್ದೆಗೆ ಮಾಸಿಕ 40 ಸಾವಿರ ರೂಪಾಯಿ ವೇತನ ನಿಗದಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಫೆಬ್ರವರಿ 19 ಆಗಿದ್ದು, ನಿಗಮದ ವೆಬ್​ಸೈಟ್​​ನಲ್ಲಿ ಲಭ್ಯವಾಗುವ ನಿಗದಿತ ಅರ್ಜಿ ಜೊತೆಗೆ ವಿದ್ಯಾರ್ಹತೆ ಸೇರಿದಂತೆ ಅಗತ್ಯ ದಾಖಲಾತಿಯನ್ನು kpclcontractapptappt@gmail.com ಈ ಮೇಲ್​ ವಿಳಾಸಕ್ಕೆ ಸಲ್ಲಿಸಬೇಕು. ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿಗೆ kpcl.karnataka.gov.in ಭೇಟಿ ನೀಡಿ.

ಇದನ್ನೂ ಓದಿ: ಇಸ್ರೋ ನೇಮಕಾತಿ; ಡ್ರೈವರ್​ ಡ್ರಾಫ್ಟ್​ಮಾನ್​ ಸೇರಿದಂತೆ 224 ಹುದ್ದೆಗಳಿಗೆ ಅರ್ಜಿ ಆಹ್ವಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.