ಬೆಂಗಳೂರು: ಇಂಡಿಯನ್ ಬ್ಯಾಂಕ್ನಲ್ಲಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳು: ದೇಶಾದ್ಯಂತ 1,500 ಹುದ್ದೆಗಳ ನೇಮಕಾತಿ ನಡೆಯಲಿದ್ದು, ಕರ್ನಾಟಕಕ್ಕೆ 47 ಹುದ್ದೆಗಳನ್ನು ಮೀಸಲಿರಿಸಲಾಗಿದೆ.
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು.
ವೇತನ: ಮೆಟ್ರೊ/ನಗರ ಬ್ರ್ಯಾಂಚ್ಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 15 ಸಾವಿರ ರೂ ಹಾಗು ಗ್ರಾಮೀಣ ಮತ್ತು ಅರೆ ಗ್ರಾಮೀಣ ಬ್ರ್ಯಾಂಚ್ಗೆ ಆಯ್ಕೆಯಾದವರಿಗೆ 12 ಸಾವಿರ ರೂ ವೇತನ.
ವಯೋಮಿತಿ: ಕನಿಷ್ಠ ವಯೋಮಿತಿ 20 ವರ್ಷ ಮತ್ತು ಗರಿಷ್ಠ ವಯೋಮಿತಿ 28 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ವಿಶೇಷ ಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಅರ್ಜಿ ಸಲ್ಲಿಕೆ: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪ.ಜಾ, ಪ.ಪಂ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ಇದೆ. ಸಾಮಾನ್ಯ, ಒಬಿಸಿ, ಇಡಬ್ಲ್ಯೂಸಿ ಅಭ್ಯರ್ಥಿಗಳು 500 ರೂ ಅರ್ಜಿ ಶುಲ್ಕ ಪಾವತಿಸಬೇಕು.
ಅಭ್ಯರ್ಥಿಗಳನ್ನು ಆನ್ಲೈನ್ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ. ಜುಲೈ 10ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಜುಲೈ 31 ಕಡೇಯ ದಿನ. ಈ ಕುರಿತ ಹೆಚ್ಚಿನ ಮಾಹಿತಿಗೆ indianbank.in ಭೇಟಿ ನೀಡಿ.
ಬೆಂಗಳೂರು ಬಿಇಎಲ್ನಲ್ಲಿ ಅಪ್ರೆಂಟಿಸ್ ಹುದ್ದೆ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನಲ್ಲಿ ಖಾಲಿ ಇರುವ ಪದವೀಧರ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಆಸಕ್ತ ಬಿಕಾಂ ಮತ್ತು ಬಿಬಿಎ ಪದವೀಧರರು ನೇರ ಸಂದರ್ಶನದಲ್ಲಿ ಭಾಗಿಯಾಗಬಹುದು.
ಅರ್ಜಿ ಸಲ್ಲಿಕೆಗೆ ಗರಿಷ್ಠ ವಯೋಮಿತಿ 25 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 12,500 ರೂ ವೇತನವಿದೆ.
ಈ ಹುದ್ದೆಗೆ ಜುಲೈ 16ರಂದು ನೇರ ಸಂದರ್ಶನ ನಡೆಯಲಿದೆ. ಸೆಂಟರ್ ಫಾರ್ ಲರ್ನಿಂಗ್ ಆ್ಯಂಡ್ ಡೆವಲಪ್ಮೆಂಟ್ (ಸಿಎಲ್ಡಿ), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಜಾಲಹಳ್ಳಿ ಪೋಸ್ಟ್, ಬೆಂಗಳೂರು -560013 ಇಲ್ಲಿ ನೇರ ಸಂದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿಗೆ bel-india.in ಇಲ್ಲಿಗೆ ಭೇಟಿ ನೀಡಿ.
ಇದನ್ನೂ ಓದಿ: 8,326 ಪೋಸ್ಟ್ಗಳ ಭರ್ತಿಗೆ ಎಸ್ಎಸ್ಸಿ ಬೃಹತ್ ಅಧಿಸೂಚನೆ; ಜಸ್ಟ್ SSLC ಪಾಸ್ ಮಾಡಿ - ಅರ್ಜಿ ಸಲ್ಲಿಸಿ