ETV Bharat / education-and-career

PUC ಆದವರಿಗೆ ನಿಮ್ಹಾನ್ಸ್​ನಲ್ಲಿದೆ ಉದ್ಯೋಗದ ಸುವರ್ಣಾವಕಾಶ: ವಾಕ್​ ಇನ್​ನಲ್ಲಿ ಭಾಗಿಯಾಗಿ - FIELD DATA COLLECTOR POST

ಈ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲ. ವಾಕ್​ ಇನ್ ಸಂದರ್ಶನದ ಮೂಲಕ ಹುದ್ದೆ​ ಆಯ್ಕೆ ನಡೆಸಲಾಗುವುದು.

field Data Collector post Recruitment by Nimhans
ಉದ್ಯೋಗ ಮಾಹಿತಿ (ಈಟಿವಿ ಭಾರತ್​)
author img

By ETV Bharat Karnataka Team

Published : Dec 6, 2024, 12:21 PM IST

ಬೆಂಗಳೂರು: ಬೆಂಗಳೂರಿನ ನಿಮ್ಹಾನ್ಸ್​ನಲ್ಲಿ ವೈದ್ಯಕೀಯ ಅಧ್ಯಯನದ ಸಹಾಯಕ್ಕಾಗಿ ಫೀಲ್ಡ್​ ಡೇಟಾ ಕಲೆಕ್ಟರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆರಂಭಿಕ ಆರು ತಿಂಗಳ ಹುದ್ದೆಗೆ ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳ ಸಾಮರ್ಥ್ಯದ ಮೇಲೆ ಹುದ್ದೆಯ ಅವಧಿಯನ್ನು ವಿಸ್ತರಿಸಲಾಗುವುದು. ಈ ಹುದ್ದೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆ ವಿವರ: ಫೀಲ್ಡ್​ ಡೇಟಾ ಕಲೆಕ್ಟರ್​ ಒಟ್ಟು ಹುದ್ದೆಗಳು 40

ವಿದ್ಯಾರ್ಹತೆ: ಪಿಯುಸಿ, ಐಟಿಐ ಅಥವಾ ಮನಶಾಸ್ತ್ರ, ಸಮಾಜ ಶಾಸ್ತ್ರ, ಸಮಾಜ ವಿಜ್ಞಾನ, ಗ್ರಾಮೀಣಾಭಿವೃದ್ಧಿಯಲ್ಲಿ ಪದವಿ ಪೂರ್ಣಗೊಂಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಹುದ್ದೆ ಜವಾಬ್ದಾರಿ: ಅಭ್ಯರ್ಥಿಗಳು ಅಂತರವ್ಯಕ್ತಿ ಕೌಶಲ್ಯ ಹೊಂದಿದ್ದು, ಸಮುದಾಯಾಧಾರಿತ ದತ್ತಾಂಶ ಸಂಗ್ರಹಿಸಬೇಕು. ಕನ್ನಡ ಚೆನ್ನಾಗಿ ಓದಲು, ಬರೆಯಲು ಬರಬೇಕು.

field Data Collector post Recruitment by Nimhans
ಅಧಿಸೂಚನೆ (ನಿಮ್ಹಾನ್ಸ್​​)

ವಯೋಮಿತಿ: ಗರಿಷ್ಠ 40 ವರ್ಷ ವಯೋಮಿತಿ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು.

ವೇತನ: ಮಾಸಿಕ 15,000 ರೂ ಗೌರವಧನ

ವಾಕ್​ ಇನ್​ ವಿವರ: ಈ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲ. ವಾಕ್​ ಇನ್ ಸಂದರ್ಶನದ ಮೂಲಕ ಹುದ್ದೆ​ ಆಯ್ಕೆ ನಡೆಸಲಾಗುವುದು. ಆಸಕ್ತ ಮತ್ತು ಅರ್ಹರು ತಮ್ಮ ಶೈಕ್ಷಣಿಕ ಪ್ರಮಾಣ ಪತ್ರದೊಂದಿಗೆ ಕೆಳಗಿನ ವಿಳಾಸಕ್ಕೆ ಹಾಜರಾಗಬೇಕು.

ಡಿಸೆಂಬರ್​ 13ರಂದು ಬೆಳಗ್ಗೆ 10ಕ್ಕೆ ವಾಕ್​ ಇನ್​ ಸಂದರ್ಶನ ನಡೆಯಲಿದೆ.

ಸಂದರ್ಶನ ವಿಳಾಸ: ಬೋರ್ಡ್​ ರೂಮ್​, 4ನೇ ಹಂತ, ಎನ್​ಬಿಆರ್​ಸಿ ಕಟ್ಟಡ, ಬಿಲ್ಡಿಂಗ್​, ಬೆಂಗಳೂರು- 560029

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು nimhans.ac.in ಭೇಟಿ ನೀಡಿ.

ಇದನ್ನೂ ಓದಿ: ವಿಧಾನ ಪರಿಷತ್ತಿನ ವಿವಿಧ ಹುದ್ದೆಗಳಿಗೆ ಕೆಇಎ ನೇಮಕಾತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.