ಬೆಂಗಳೂರು: ಎಂಜಿನಿಯರಿಂಗ್ ಕೋರ್ಸ್ನ 2ನೇ ವರ್ಷ ಅಥವಾ 3ನೇ ಸೆಮಿಸ್ಟರ್ಗೆ ನೇರ ಪ್ರವೇಶ ನೀಡಲು ನಡೆಸಿದ ಡಿಸಿಇಟಿ-24 ಪರೀಕ್ಷೆಯ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಛಾಯ್ಸ್ (Choice) ಆಯ್ಕೆ ಮಾಡಿಕೊಳ್ಳಲು ಜುಲೈ 24ರ ಬೆಳಗ್ಗೆ 11 ಗಂಟೆವರೆಗೆ ಅವಕಾಶ ನೀಡಲಾಗಿದೆ. ಮೊದಲ ಸುತ್ತಿನ ಪ್ರವೇಶ ಪ್ರಕ್ರಿಯೆ ಜುಲೈ 26ಕ್ಕೆ ಕೊನೆಯಾಗಲಿದೆ. Choice-1 ಮತ್ತು 2 ಅನ್ನು ಆಯ್ಕೆ ಮಾಡಿಕೊಂಡವರು ಜುಲೈ 25ರ ಸಂಜೆ 4ಗಂಟೆ ಒಳಗೆ ಶುಲ್ಕ ಪಾವತಿಸಿ, ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೊದಲ ಸುತ್ತಿನಲ್ಲಿ ತಮಗೆ ಸಿಕ್ಕಿರುವ ಸೀಟು ಇಷ್ಟವಾದರೆ ಛಾಯ್ಸ್-1 ಅನ್ನು ಆಯ್ಕೆ ಮಾಡಿ, ಶುಲ್ಕ ಪಾವತಿಸಿ, ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಒಂದು ವೇಳೆ ಸಿಕ್ಕಿರುವ ಸೀಟು ತೃಪ್ತಿ ಇದ್ದ, ಇನ್ನೂ ಉತ್ತಮ ಸೀಟು ಬೇಕಾಗಿದೆ ಎನ್ನುವವರು ಚಾಯ್ಸ್-2 ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಅವರು ಕೂಡ ಶುಲ್ಕ ಪಾವತಿಸಬೇಕು ಎಂದು ಅವರು ವಿವರಿಸಿದ್ದಾರೆ.
ಇದನ್ನೂ ಓದಿ: ರೈಲ್ವೆ: 2,424 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ - Railway Recruitment
ಅಭ್ಯರ್ಥಿಯು ತನಗೆ ಮೊದಲ ಸುತ್ತಿನಲ್ಲಿ ದೊರಕಿರುವ ಸೀಟು ತೃಪ್ತಿಕರವಾಗದಿದ್ದರೆ, ಮುಂದಿನ ಸುತ್ತಿನಲ್ಲಿ ಭಾಗವಹಿಸಲು ಚಾಯ್ಸ್-3 ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಹಾಗೆಯೇ, ಸಿಕ್ಕಿರುವ ಸೀಟು ತೃಪ್ತಿಯಾಗಿಲ್ಲ, ಮುಂದಿನ ಸುತ್ತಿನಲ್ಲೂ ಸೀಟು ತೆಗೆದುಕೊಳ್ಳಲು ಆಸಕ್ತಿ ಇಲ್ಲದಿದ್ದರೆ, ಚಾಯ್ಸ್-4 ಅನ್ನು ಆಯ್ಕೆ ಮಾಡಿಕೊಂಡು ಇಡೀ ಪ್ರಕ್ರಿಯೆಯಿಂದ ಹೊರ ಹೋಗಬಹುದು. ಒಟ್ಟಿನಲ್ಲಿ ಆಯ್ಕೆ ಮಾಡುವಾಗ ಎಚ್ಚರದಿಂದ ಆಯ್ಕೆ ಮಾಡಿಕೊಳ್ಳಬೇಕು. ಎಲ್ಲವನ್ನೂ ವೆಬ್ಸೈಟ್ನಲ್ಲಿ ವಿವರವಾಗಿ ದಾಖಲಿಸಿದ್ದು, ಆ ಪ್ರಕಾರವೇ ಆಯ್ಕೆ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಬ್ಯಾಂಕ್ಗಳಲ್ಲಿ ಉದ್ಯೋಗ: 6,128 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗಡುವು ವಿಸ್ತರಣೆ - IBPS