ETV Bharat / education-and-career

ಬಿಇಎಲ್​ನಲ್ಲಿದೆ 10ನೇ ತರಗತಿ ಪಾಸ್​ ಆದವರಿಗೆ ಉದ್ಯೋಗಾವಕಾಶ: ಅರ್ಹರು ಅರ್ಜಿ ಹಾಕಿ! - BHARAT ELECTRONICS LIMITED

ಈ ಹುದ್ದೆಗೆ ಡಿಸೆಂಬರ್​ 27ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೇಯ ದಿನ ಡಿಸೆಂಬರ್​ 17 ಆಗಿದೆ.

Bharat Electronics Limited Recruitment notification for ITI holder
ಬಿಎಇಲ್ (ಸಾಂದರ್ಭಿಕ ಚಿತ್ರ)
author img

By ETV Bharat Karnataka Team

Published : Nov 30, 2024, 3:20 PM IST

ಬೆಂಗಳೂರು: ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​​ನಲ್ಲಿ ಬೆಂಗಳೂರು ಕಚೇರಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 84 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳ ಕುರಿತಾದ ಮಾಹಿತಿ ಇಲ್ಲಿದೆ.

ಹುದ್ದೆ ವಿವರ:

ಇಂಜಿನಿಯರಿಂಗ್​ ಅಸಿಸ್ಟೆಂಟ್​ (ಟ್ರೈನಿ) - 47

ಟೆಕ್ನಿಶಿಯನ್​ ಸಿ - 37

ವಿದ್ಯಾರ್ಹತೆ: ಇಂಜಿನಿಯರಿಂಗ್​ ಅಸಿಸ್ಟಂಟ್​ ಹುದ್ದೆಗೆ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ಸ್​, ಮೆಕಾನಿಕಲ್​, ಕಂಪ್ಯೂಟರ್​ ಸೈನ್ಸ್​​, ಎಲೆಕ್ಟ್ರಿಕಲ್​ನಲ್ಲಿ ಮೂರು ವರ್ಷದ ಡಿಪ್ಲೊಮಾ ಪದವಿ ಹೊಂದಿರಬೇಕು.

ಟೆಕ್ನಿಶಿಯನ್​ ಸಿ ಹುದ್ದೆಗೆ ಅಭ್ಯರ್ಥಿಗಳು ಎಸ್​ಎಸ್​ಎಲ್​ಸಿ, ಐಟಿಐ ಜೊತೆಗೆ ಒಂದು ವರ್ಷದ ಅಪ್ರೆಂಟಿಸ್​ಶಿಪ್​ ಅಥವಾ ಎಸ್​ಎಸ್​ಎಲ್​ಸಿ ಜೊತೆಗೆ ಮೂರು ವರ್ಷದ ಅಪ್ರೆಂಟಿಸ್​ಶಿಪ್​ ಪ್ರಮಾಣ ಪತ್ರ ಪದವಿ ಹೊಂದಿರಬೇಕು.

Bharat Electronics Limited Recruitment notification for ITI holder
ಅಧಿಸೂಚನೆ (ಬಿಇಎಲ್​)

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 28 ವರ್ಷ ವಯೋಮಿತಿ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪ,ಜಾ ಮತ್ತು ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಕಲ ಚೇತನ ಅಭ್ಯರ್ಥಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಪ.ಜಾ, ಪ.ಪಂ., ವಿಕಲಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ಮಾಡಲಾಗಿದೆ. ಸಾಮಾನ್ಯ, ಒಬಿಸಿ, ವಿಕಲಚೇತನ ಅಭ್ಯರ್ಥಿಗಳಿಗೆ 295 ರೂ ಅರ್ಜಿ ಶುಲ್ಕ ಪಾವತಿಸಬೇಕಾಗಿದೆ.

ಈ ಹುದ್ದೆಗೆ ಕಂಪ್ಯೂಟರ್​ ಆಧಾರಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಬಹುದಾಗಿದೆ. ಈ ಹುದ್ದೆಗೆ ಡಿಸೆಂಬರ್​ 27ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೇಯ ದಿನ ಡಿಸೆಂಬರ್​ 17 ಆಗಿದೆ.

ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಸೂಚನೆಗೆ ಅಭ್ಯರ್ಥಿಗಳು bel-india.in ಭೇಟಿ ನೀಡಿ.

ಇದನ್ನೂ ಓದಿ: ಉಡುಪಿಯಲ್ಲಿದೆ ಉದ್ಯೋಗಾವಕಾಶ: ಎಂಎಸ್​ಡಬ್ಲ್ಯೂ ಪದವೀಧರರಿಗೆ ಸುವರ್ಣಾವಕಾಶ..ಅರ್ಹರು ಅಪ್ಲೈ ಮಾಡಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.