ಮಂಗಳೂರು: ಇದೀಗ ಎಷ್ಟು ಉನ್ನತ ವಿದ್ಯಾಭ್ಯಾಸ ಮಾಡಿದರೂ ಉದ್ಯೋಗ ಸಿಗುವ ಗ್ಯಾರಂಟಿ ಇಲ್ಲ. ಆದರೆ ಎಸ್ಎಸ್ಎಲ್ಸಿ ಆದವರಿಗೆ ಉದ್ಯೋಗ ಗ್ಯಾರಂಟಿ ಸಿಗುವ ಡಿಪ್ಲೋಮಾ ಕೋರ್ಸ್ಗಳು ಇವೆ. ಮಂಗಳೂರಿನಲ್ಲಿ ಮೂರು ವರ್ಷ ಅವಧಿಯ ಡಿಪ್ಲೋಮಾ ಕೋರ್ಸ್‌ಗಳ ಪ್ರವೇಶಕ್ಕೆ ಎಸ್ಎಸ್ಎಲ್ಸಿ ಆದವರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಸೆ.10 ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.
ಮಂಗಳೂರಿನ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಜಿ.ಟಿ.ಟಿ.ಸಿ. ಸರ್ಕಾರಿ ಡಿಪ್ಲೋಮಾ ಕಾಲೇಜಿನಲ್ಲಿ ಬಹುಬೇಡಿಕೆಯ ಕಂಪ್ಯೂಟರ್ ಸೈನ್ಸ್ಗೆ ಸಂಬಂಧಿಸಿದ ಡಿಪ್ಲೋಮಾ ಕೋರ್ಸ್ ಆದ ಆರ್ಟಿಫಿಶಿಯಲ್ ಇಂಟಲಿಜನ್ಸ್ ಆಂಡ್ ಮಷಿನ್ ಲರ್ನಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್‌ಗೆ ಸಂಬಂಧಿಸಿದ ಡಿಪ್ಲೋಮಾ ಇನ್ ಟೂಲ್ ಆಂಡ್ ಡೈ ಮೇಕಿಂಗ್ ಹಾಗೂ ಡಿಪ್ಲೋಮಾ ಇನ್ ಪ್ರಿಸಿಷನ್ ಮಾನ್ಯುಫ್ಯಾಕ್ಟರಿಂಗ್ ಕೋರ್ಸಿಗೆ ಪ್ರವೇಶಾತಿ ನಡೆಯುತ್ತಿದೆ.
ಈ ಎಲ್ಲಾ ಕೋರ್ಸ್‌ಗಳಿಗೆ SSLC ಪಾಸ್ ಅಥವಾ PUC ಪಾಸ್/ಫೇಲ್ ಆದ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. PUC (Science) ಹಾಗೂ ITI (Mechanical) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ನೇರವಾಗಿ ದ್ವಿತೀಯ ವರ್ಷದ ಡಿಪ್ಲೋಮಾ ಕೋರ್ಸ್‌ಗಳ ಪ್ರವೇಶಾತಿಗೆ ಅರ್ಹರಾಗಿರುತ್ತಾರೆ. ಈ ಸಂಸ್ಥೆಯು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, 30% ಥಿಯರಿ ಮತ್ತು 70% ಪ್ರಾಕ್ಟಿಕಲ್ ತರಬೇತಿ ನೀಡುವ 100% ಉದ್ಯೋಗಾಧಾರಿತ ಕೋರ್ಸ್‌ಗಳಾಗಿರುತ್ತವೆ.
ಈ ಕೋರ್ಸ್‌ಗಳನ್ನು ಅಧ್ಯಯನ ಮಾಡುವಾಗ 3 ವರ್ಷದ ಡಿಪ್ಲೋಮಾ ತರಬೇತಿ ನಂತರ ಕಡ್ಡಾಯ ಒಂದು ವರ್ಷದ ಇಂಟರ್ನ್‌ಶಿಪ್ ತರಬೇತಿ ನೀಡಲಾಗುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ.15,000-20,000 ಶಿಷ್ಯವೇತನ ಸಹ ನೀಡಲಾಗುತ್ತದೆ. ಅಲ್ಲದೆ ಸ್ಕಾಲರ್ ಶಿಪ್ ಪ್ರಯೋಜನವು ಸಿಗಲಿದೆ. ಹಾಗೆಯೇ SSLC ಪಾಸ್/ಫೇಲ್ ಆದ ವಿದ್ಯಾರ್ಥಿಗಳಿಗೂ 1 ವರ್ಷದ 100% ಉದ್ಯೋಗಾಧಾರಿತ ಕೋರ್ಸ್ ಆದ ಟೂಲ್ ರೂಮ್ ಮಷಿನಿಸ್ಟ್‌ಗೆ ಪ್ರವೇಶಾತಿ ನಡೆಯುತ್ತಿದೆ. ಮೂರು ವರ್ಷ ಅವಧಿಯ ಡಿಪ್ಲೋಮಾ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 10ರ ವರೆಗೆ ಅವಕಾಶ ಇದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂರ್ಪಕಿಸಿ: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ನಂ. 7ಇ, ಕೈಗಾರಿಕಾ ವಲಯ, ಬೈಕಂಪಾಡಿ, -575011 : 8073208137, 9008263660, 0824-2408003.
ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಅವರು, ನಮ್ಮಲ್ಲಿ ಈಗ ಮೂರು ಕೋರ್ಸ್‌ಗಳಿಗೆ ಆಹ್ವಾನಿಸಲಾಗಿದೆ. ಈ ಮೂರು ಕೋರ್ಸ್ಗಳು ಶೇಕಡ 100ರಷ್ಟು ಉದ್ಯೋಗಾಧರಿತ ಕೋರ್ಸ್ಗಳಾಗಿವೆ. ಈಗ ಆಹ್ವಾನಿಸಲಾಗಿರುವ ಕೋರ್ಸ್ಗಳು ಸದ್ಯ ಟ್ರೆಂಡ್ ಇರುವ ಕೋರ್ಸ್ಗಳಾಗಿವೆ. ಈ ಕೋರ್ಸ್ ವಿದ್ಯಾಭ್ಯಾಸ ಮಾಡಿದವರಿಗೆ ಉದ್ಯೋಗ ಸಿಗುವುದು ಗ್ಯಾರಂಟಿ. ನಮ್ಮಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಬರುವುದಿಲ್ಲ. ಅವರಿಗೆ ಉದ್ಯೋಗ ಖಂಡಿತ ಸಿಗುತ್ತದೆ ಎನ್ನುತ್ತಾರೆ.
ಓದಿ: ಎಂಎಸ್ಸಿ ಪದವೀಧರರಿಗೆ ಬೆಂಗಳೂರಿನ ರೇಷ್ಮೆ ಮಂಡಳಿಯಲ್ಲಿದೆ ಉದ್ಯೋಗಾವಕಾಶ - JOBS IN CENTRAL SILK BOARD