ETV Bharat / education-and-career

ಅಂಬಾನಿ ಶಾಲೆ ಬಗ್ಗೆ ನಿಮಗೆಷ್ಟು ಗೊತ್ತು: ಈ ಸ್ಕೂಲ್​​​​ನಲ್ಲಿದ್ದಾರೆ ಅತಿರಥ ಮಹಾರಥರು: ಶುಲ್ಕ ಎಷ್ಟು, ಏನೆಲ್ಲಾ ಸವಲತ್ತುಗಳಿವೆ ಗೊತ್ತಾ? - AMBANI ELITE SCHOOL FEE - AMBANI ELITE SCHOOL FEE

ಮುಂಬೈನಲ್ಲಿರುವ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್. ಶಿಕ್ಷಣದ ಐಕಾನ್ ಆಗಿ ಹೊರಹೊಮ್ಮಿದೆ. ಅತ್ಯಂತ ಶ್ರೀಮಂತರು, ಸೆಲೆಬ್ರಿಟಿಗಳು ಮತ್ತು ವಿಐಪಿಗಳ ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದಾರೆ. ಅರ್ಜುನ್ ತೆಂಡೂಲ್ಕರ್, ಆಕಾಶ್ ಅಂಬಾನಿ ಮತ್ತು ಆರ್ಯನ್ ಖಾನ್ ಈ ಶಾಲೆಯಲ್ಲಿ ಓದಿದ ಕೋಟ್ಯಧಿಪತಿಗಳ ಮಕ್ಕಳಾಗಿದ್ದಾರೆ.

ambanis-elite-school-fee-how-much-do-star-kids-pay-for-dhirubhai-ambani-international-school
ಅಂಬಾನಿ ಶಾಲೆ ಬಗ್ಗೆ ನಿಮಗೆಷ್ಟು ಗೊತ್ತು: ಈ ಸ್ಕೂಲ್​​​​ನಲ್ಲಿದ್ದಾರೆ ಬಾಲಿವುಡ್ ಸ್ಟಾರ್ಸ್​​ ಮಕ್ಕಳು: ಶುಲ್ಕ ಎಷ್ಟು ಗೊತ್ತಾ? (ETV Bharat)
author img

By ETV Bharat Karnataka Team

Published : Jul 22, 2024, 9:57 PM IST

ಮುಂಬೈ, ಮಹಾರಾಷ್ಟ್ರ: ಮುಂಬೈನಲ್ಲಿ ಪ್ರತಿಷ್ಠಿತ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ (DAIS) ಇದೆ. ಇದನ್ನು 2003 ರಲ್ಲಿ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಸ್ಥಾಪಿಸಿದರು. ಅವರ ಮಗಳು ಇಶಾ ಅಂಬಾನಿ ಈ ಶಾಲೆಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಶಾಲೆಯಲ್ಲಿ ಅತ್ಯುನ್ನತ ಶೈಕ್ಷಣಿಕ ಗುಣಮಟ್ಟವನ್ನು ಸ್ಥಿರವಾಗಿ ಕಾಯ್ದುಕೊಂಡು ಬರಲಾಗುತ್ತಿದೆ. ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ. 21ನೇ ಶತಮಾನದ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಆದ್ದರಿಂದಲೇ ಈ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿಗಳಿಂದಲೇ ಭಾರಿ ಪ್ರಮಾಣದ ಶುಲ್ಕ ಇದೆ. ಆ ಬಗ್ಗೆ ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.

ಇಲ್ಲಿನ ಶುಲ್ಕಗಳ ವಿವರ ಇಂತಿದೆ: ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ, ಕಿಂಡರ್‌ಗಾರ್ಟನ್ ವಿದ್ಯಾರ್ಥಿಗೆ ವಾರ್ಷಿಕ ಶುಲ್ಕ 2024 ರ ಶೈಕ್ಷಣಿಕ ವರ್ಷದ ಪ್ರಕಾರ ಸುಮಾರು 1.40 ಲಕ್ಷ ರೂಪಾಯಿ.

ವಾರ್ಷಿಕ ಶುಲ್ಕಗಳು:

  • ಎಲ್ ಕೆಜಿಯಿಂದ 7ನೇ ತರಗತಿವರೆಗೆ - 1.70 ಲಕ್ಷ ರೂ
  • ತರಗತಿ 8 ರಿಂದ 10 ನೇ ತರಗತಿ - 5.90 ಲಕ್ಷ ರೂ.
  • ಇಂಟರ್ (11&12 ಗ್ರೇಡ್) - 9.65 ಲಕ್ಷ ರೂ.

ಪುಸ್ತಕಗಳು, ಲೇಖನ ಸಾಮಗ್ರಿಗಳು, ಸಮವಸ್ತ್ರ, ಸಾರಿಗೆ ಮತ್ತು ವಸತಿ ವೆಚ್ಚವನ್ನು ಸಹ ಈ ಶುಲ್ಕವು ಒಳಗೊಂಡಿರುತ್ತದೆ. ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಷನಲ್ ಸ್ಕೂಲ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಸಹ ನೀಡುತ್ತದೆ. ಇದು ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡುತ್ತಾ ಬರುತ್ತಿದೆ.

ನಗರದ ಯಾವ ಪ್ರದೇಶದಲ್ಲಿದೆ ಈ ಸ್ಕೂಲ್​: ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಷನಲ್ ಸ್ಕೂಲ್ ಮುಂಬೈನ ಬಾಂದ್ರಾ - ಕುರ್ಲಾ ಕಾಂಪ್ಲೆಕ್ಸ್ ಪ್ರದೇಶದಲ್ಲಿದೆ. ಶಾಲೆಯು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದ IGCSE, ICSE, IBDP ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತದೆ. ಇದು ಮಕ್ಕಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡಲು ಅವರ ಸಮಗ್ರ ಬೆಳವಣಿಗೆಯ ಮೇಲೆ ಕೇಂದ್ರೀಕರಿಸುತ್ತದೆ.
ಈ ಎಲ್ಲ ಸೌಲಭ್ಯಗಳೂ ಇಲ್ಲಿವೆ: ಶಾಲೆಯು ವಿಜ್ಞಾನ ಪ್ರಯೋಗಾಲಯಗಳು, ಕಂಪ್ಯೂಟರ್ ತರಗತಿಗಳು, ವಿಶಾಲವಾದ ಆಟದ ಮೈದಾನಗಳು ಮತ್ತು 40,000 ಪುಸ್ತಕಗಳ ಗ್ರಂಥಾಲಯ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ. ಶಾಲಾ ಆವರಣವು 1.30 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದೆ. ತರಗತಿ ಕೊಠಡಿಗಳು ಡಿಜಿಟಲ್ ಗಡಿಯಾರಗಳು, ಲಾಕರ್‌ಗಳು, ಡಿಸ್‌ಪ್ಲೇ ಬೋರ್ಡ್‌ಗಳು, ಬ್ರಾಡ್‌ಬ್ಯಾಂಡ್ ಇಂಟರ್ನೆಟ್, ಮಲ್ಟಿಮೀಡಿಯಾ ನೆರವು, ಹವಾನಿಯಂತ್ರಣ ಮತ್ತು ಉತ್ತಮ ಪೀಠೋಪಕರಣಗಳನ್ನು ಹೊಂದಿವೆ.

ಸೆಲೆಬ್ರಿಟಿಗಳೂ ಇಲ್ಲಿ ಶಿಕ್ಷಣ ಪಡೆದಿದ್ದಾರೆ; ಆಕಾಶ್ ಅಂಬಾನಿ, ಇಶಾನ್ ಧವನ್, ಶ್ಲೋಕಾ ಮೆಹ್ತಾ ಅಂಬಾನಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಶಾಲೆಯಲ್ಲಿ ಓದಿದ್ದಾರೆ. ಖುಷಿ ಕಪೂರ್, ಸಾರಾ ಅಲಿ ಖಾನ್, ಇಬ್ರಾಹಿಂ ಅಲಿ ಖಾನ್, ಸುಹಾನಾ ಖಾನ್, ಆರ್ಯನ್ ಖಾನ್, ಸಾರಾ ತೆಂಡೂಲ್ಕರ್, ಅರ್ಜುನ್ ತೆಂಡೂಲ್ಕರ್, ನೈಸಾ ದೇವಗನ್, ಅನನ್ಯಾ ಪಾಂಡೆ ಮುಂತಾದವರು ಇಲ್ಲಿ ಅಧ್ಯಯನ ಮಾಡಿದ್ದಾರೆ. ಶಾಲೆಯಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳಲ್ಲಿ ಶಾರುಖ್ ಖಾನ್ ಅವರಂತಹ ಯಶಸ್ವಿ ವ್ಯಕ್ತಿಗಳನ್ನು ಇಲ್ಲಿ ಮಾತನಾಡಲು ಆಹ್ವಾನಿಸಲಾಗುತ್ತದೆ.

ಇದನ್ನು ಓದಿ:ಬ್ಯಾಂಕ್​ಗಳಲ್ಲಿ ಉದ್ಯೋಗ​: 6,128 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗಡುವು ವಿಸ್ತರಣೆ - IBPS

ಡಿಸಿಇಟಿ-24: ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ - DCET Results

ETV Bharat Logo

Copyright © 2025 Ushodaya Enterprises Pvt. Ltd., All Rights Reserved.