ETV Bharat / education-and-career

ನೌಕಾ ಸೇನೆಯಲ್ಲಿ ನೇಮಕಾತಿ; ಪಿಯುಸಿ ಆಗಿದ್ರೆ, ಅಗ್ನಿವೀರ್​ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ - Agniveer Recruitment - AGNIVEER RECRUITMENT

ಈ ಅಗ್ನಿಪಥ್​ ಯೋಜನೆ ಮೂಲಕ ಭಾರತೀಯ ನೌಕಪಡೆಯಲ್ಲಿ ಅಗ್ನಿ ವೀರ್​​ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.

Agniveer Recruitment by Indian Navy here is the details for how to apply
Agniveer Recruitment by Indian Navy here is the details for how to apply (File photo)
author img

By ETV Bharat Karnataka Team

Published : May 9, 2024, 3:14 PM IST

ಬೆಂಗಳೂರು: ಸೇನೆ ಸೇರಿ ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಕೆ ಮಾಡಲು ಪ್ರತಿಯೊಬ್ಬ ನಾಗರಿಕರಿಗೆ ಅವಕಾಶ ನೀಡುವ ಉದ್ದೇಶದಿಂದ ಅಗ್ನಿಪಥ್​ ಎಂಬ ವಿಶೇಷ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಅಗ್ನಿಪಥ್​ ಯೋಜನೆ ಮೂಲಕ ಭಾರತೀಯ ನೌಕಪಡೆಯಲ್ಲಿ ಅಗ್ನಿ ವೀರ್​​ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಆಯ್ಕೆಯಾಗುವ ಮೂಲಕ ಅಭ್ಯರ್ಥಿಗಳು ನೌಕಪಡೆಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆ, ವೇತನ, ಆಯ್ಕೆ ಪ್ರಕ್ರಿಯೆ ಕುರಿತ ಸಂಪೂರ್ಣ ಡಿಟೇಲ್ಸ್ ಈ ಕೆಳ ಕಂಡಂತಿದೆ

ಅಗ್ನಿವೀರ್​ ಹುದ್ದೆ ಅಧಿಸೂಚನೆ
ಅಗ್ನಿವೀರ್​ ಹುದ್ದೆ ಅಧಿಸೂಚನೆ (ಭಾರತೀಯ ಸೇನಾ ಜಾಲತಾಣ)

ಹುದ್ದೆಗಳ ವಿವರ: ಅವಿವಾಹಿತ ಯುವಕ/ಯುವತಿಯರು ಅಗ್ನಿವೀರ್​​ ಹುದ್ದೆಯ ನೇಮಕಾತಿಯಲ್ಲಿ ಪಾಲ್ಗೊಳ್ಳಬಹುದು. ಎಷ್ಟು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂಬ ನಿರ್ದಿಷ್ಟ ಸಂಖ್ಯೆಯನ್ನು ಅಧಿಸೂಚನೆಯಲ್ಲಿ ತಿಳಿಸಿಲ್ಲ.

ವಿದ್ಯಾರ್ಹತೆ: ಪಿಯುಸಿ (ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್​​)ವಿಷಯಗಳಲ್ಲಿ ಅಧ್ಯಯನ ನಡೆಸಿರಬೇಕು. ಅಥವಾ ಮೂರು ವರ್ಷಗಳ ಡಿಪ್ಲೊಮಾ ಪದವಿ ಪಡೆದಿರಬೇಕು. ಪಿಯುಸಿ ಫಲಿತಾಂಶ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ವಯೋಮಿತಿ: ಅಭ್ಯರ್ಥಿಗಳು 2003 ನವೆಂಬರ್​ 1 ಮತ್ತು 30 ಏಪ್ರಿಲ್​ 2007ರ ನಡುವಿನಲ್ಲಿ ಜನಿಸಿರಬೇಕು.

ವೇತನ: ಈ ಹುದ್ದೆಗಳಿಗೆ ಮೊದಲ ವರ್ಷ 30,000, ಎರಡನೇ ವರ್ಷದಲ್ಲಿ 33,000, ಮೂರನೇ ವರ್ಷದಲ್ಲಿ 36,500 ನಾಲ್ಕನೇ ವರ್ಷ 40,000 ರೂ. ವೇತನವಿದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಎಲ್ಲ ವರ್ಗದ ಅಭ್ಯರ್ಥಿಗಳು 550 ರೂ ಅರ್ಜಿ ಶುಲ್ಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ: ಲಿಖಿತ, ದೈಹಿಕ ಸಾಮರ್ಥ್ಯ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ.

ಮೇ 13ರಿಂದ ಈ ಹುದ್ದೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮೇ 27 ಅಂತಿಮ ದಿನವೆಂದು ನಿಗದಿಪಡಿಸಲಾಗಿತ್ತು. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ ಹೇಗಿರಬೇಕು, ಎಷ್ಟು ಎತ್ತರ, ತೂಕ ಇರಬೇಕು ಸೇರಿದಂತೆ ಇನ್ನಿತರ ಮಾಹಿತಿಗಳು ಮತ್ತು ವಿವರಗಳನ್ನು ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ಸರಿಯಾಗಿ ಪರಿಶೀಲಿಸಿ, ಅರ್ಜಿ ಸಲ್ಲಿಸಲು ಮುಂದಾಗತಕ್ಕದ್ದು.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ joinindianvavy.gov.in ಅಥವಾ agniveernavy.cdac.in ಈ ಜಾಲತಾಣಕ್ಕೆ ಭೇಟಿ ನೀಡಿ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನವೆಂಬರ್​ನಿಂದ ತರಬೇತಿ ಶುರುವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗ್ತಿದ್ದೀರಾ? ಈ ಸಂಗತಿಗಳನ್ನು ತಪ್ಪದೆ ಪಾಲಿಸಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.