ETV Bharat / business

ವೃದ್ಧಾಪ್ಯದಲ್ಲಿ ನಿಮ್ಮ ಕೈ ಹಿಡಿಯುವ ಟಾಪ್​ 3 ಪಿಂಚಣಿ ಯೋಜನೆಗಳಿವು - Pension Plans In India

author img

By ETV Bharat Karnataka Team

Published : May 28, 2024, 2:33 PM IST

ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದ್ದೀರಾ? ಹಾಗಾದ್ರೆ ಇಲ್ಲಿವೆ ಟಾಪ್ 3 ಪಾಲಿಸಿಗಳು.

ಪಿಂಚಣೆ ಯೋಜನೆ
ಪಿಂಚಣೆ ಯೋಜನೆ (ETV Bharat)

ನಿವೃತ್ತಿ ಹೊಂದಿದ ಬಳಿಕವೂ ಆರಾಮದಾಯಕ ಜೀವನ ನಡೆಸಲು ಬಹುತೇಕರು ಬಯಸುತ್ತಾರೆ. ಇದಕ್ಕಾಗಿಯೇ ವೃತ್ತಿಯಲ್ಲಿರುವಾಗಲೇ ಹಲವಾರು ಪಿಂಚಣೆ ಯೋಜನಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ನೆನಪಿಡಿ, ವಯಸ್ಸಿನಲ್ಲಿರುವಾಗಲೇ ಸರಿಯಾದ ಪಿಂಚಣೆ ಯೋಜನೆಗಳನ್ನು ಆಯ್ಕೆ ಮಾಡಿಕೊಂಡರೆ ವೃದ್ದಾಪ್ಯದಲ್ಲಿ ನೆಮ್ಮದಿಯ ಜೀವನ ಸಾಗಿಸಬಹುದಾಗಿದೆ. ನೀವೂ ಕೂಡ ಇಂತಹ ಪಿಂಚಣೆ ಯೋಜನೆಯಲ್ಲಿ ಹೂಡಿಕೆ ಮಾಡಬೇಕೆಂದು ಬಯಸಿದ್ದರೆ ಇಲ್ಲಿವೆ ಪ್ರಮುಖ ಪಿಂಚಣಿ ಯೋಜನೆಗಳು.

1. LIC ನ್ಯೂ ಜೀವನ್​ ಶಾಂತಿ ಯೋಜನೆ: ಇದು ಕಡಿಮೆ ಸಮಯದಲ್ಲಿ ಪಿಂಚಣಿ ಪಡೆಯಬಹುದಾದ ಯೋಜನೆ. ಪಾಲಿಸಿಯ ವಯಸ್ಸಿನ ಮಿತಿ ಗರಿಷ್ಠ 30, ಕನಿಷ್ಠ 79 ವರ್ಷ ಆಗಿರಲಿದೆ. ಈ ಪ್ರೀಮಿಯಮ್ ಖರೀದಿಸಲು ಏಕಕಾಲಕ್ಕೆ ಹಣ ಪಾವತಿ ಮಾಡಬೇಕಿದೆ. ಕಂತುಗಳ ಆಯ್ಕೆ ಲಭ್ಯವಿಲ್ಲ. ಕನಿಷ್ಠ ಹೂಡಿಕೆ ಹಣ 1.5 ಲಕ್ಷ ರೂ ಆಗಿದ್ದು ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಮೆಚುರಿಟಿ ವಯಸ್ಸು 31 ರಿಂದ 80 ವರ್ಷಗಳು. ಈ ಪಾಲಿಸಿಯಲ್ಲಿ ನಾಲ್ಕು ರೀತಿಯ ಆಯ್ಕೆ ಮೂಲಕ (ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ, ವಾರ್ಷಿಕ) ಪಿಂಚಣಿ ಪಡೆಯಬಹುದು. ಇದನ್ನು ಆನ್​ಲೈನ್​ ಮತ್ತು ಆಫ್​ಲೈನ್​ ಮೂಲಕ ಖರೀದಿಸಬಹುದು. ಇದರಿಂದ ತೆರಿಗೆ ವಿನಾಯಿತಿಯ ಪ್ರಯೋಜನವನ್ನೂ ಪಡೆಯಬಹುದು.

2. LIC ಜೀವನ್​ ಅಕ್ಷಯ್​ 7 ಯೋಜನೆ: ಇದು ತಕ್ಷಣದ ವರ್ಷಾಶನ ಯೋಜನೆ. ಪಾಲಿಸಿಯ ವಯಸ್ಸಿನ ಮಿತಿ ಕನಿಷ್ಠ 35 ಮತ್ತು ಗರಿಷ್ಠ 85 ವರ್ಷ. ಸಿಂಗಲ್​ ಪ್ರೀಮಿಯಂ ಪಾಲಿಸಿ. ಅಂದರೆ ಏಕಕಾಲದಲ್ಲಿ ಹಣ ಪಾವತಿಸಬೇಕು. ಕನಿಷ್ಠ ಹೂಡಿಕೆ ಹಣ 1 ಲಕ್ಷ ಆಗಿದ್ದು, ಗರಿಷ್ಠ ಹೂಡಿಕೆಗೆ ಮಿತಿ ಇಲ್ಲ. ಇದರಲ್ಲಿ ವರ್ಷಗಳ ಆಯ್ಕೆ ಇರಲಿದ್ದು ಯಾವುದನ್ನಾದರೂ ಆಯ್ದುಕೊಳ್ಳಬಹುದಾಗಿದೆ. ಇದನ್ನು ಆನ್​ಲೈನ್​ ಮತ್ತು ಆಫ್​ಲೈನ್​ ಮೂಲಕ ಖರೀದಿಸಬಹುದು. ಇದರಿಂದ ತೆರಿಗೆ ವಿನಾಯಿತಿಯ ಪ್ರಯೋಜನ ಪಡೆಯಬಹುದಾಗಿದೆ.

3) SBI ಸರಳ್​ ರಿಟೈರ್ಮೆಂಟ್​​ ಸೆವರ್​: ಇದು ಸಾಮಾನ್ಯ ಉಳಿತಾಯ ಯೋಜನೆ. ಪಾಲಿಸಿಯ ವಯಸ್ಸಿನ ಮಿತಿ ಕನಿಷ್ಠ 18 ಆಗಿದ್ದು ಗರಿಷ್ಠ 65 ವರ್ಷ. ಮೆಚುರಿಟಿ ವಯಸ್ಸು 40 ರಿಂದ 70 ವರ್ಷ ಆಗಿದೆ. ಪಾಲಿಸಿ ಅವಧಿ ಕನಿಷ್ಠ 10 ವರ್ಷ ಗರಿಷ್ಠ 40ವರ್ಷಗಳವರೆಗೆ ಇರಲಿದೆ. ಇದರಲ್ಲಿ 4 ಆಯ್ಕೆ ಮೂಲಕ (ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ, ವಾರ್ಷಿಕ) ಪಿಂಚಣಿ ಪಡೆಯಬಹುದು. ಹೂಡಿಕೆಯ ಕನಿಷ್ಠ ಹಣ 7500 ರೂ ಆಗಿರಲಿದೆ. ಗರಿಷ್ಠ ಹೂಡಿಕೆಗೆ ಮಿತಿ ಇಲ್ಲ.

ಇದನ್ನೂ ಓದಿ: ನಿಮಗೆ ಪ್ರತಿ ತಿಂಗಳು ಆದಾಯ ಬರಬೇಕಾ?, ಯಾವುದೇ ರಿಸ್ಕ್​ ಬೇಡವೇ: ಹಾಗಾದರೆ ಇಲ್ಲಿವೆ ಸರ್ಕಾರದ ಅತ್ಯುತ್ತಮ 10 ಉಳಿತಾಯ ಯೋಜನೆಗಳು - LIFE ALTIMATE SMALL SAVINGS SCHEMES

ETV Bharat Logo

Copyright © 2024 Ushodaya Enterprises Pvt. Ltd., All Rights Reserved.