ETV Bharat / business

ಆತಂಕದ ಸುದ್ದಿ: ಶೇ 10ರಷ್ಟು ಉದ್ಯೋಗಿಗಳನ್ನು ವಜಾ ಮಾಡಲಿದೆ ಟೆಸ್ಲಾ - TESLA - TESLA

ಎಲೋನ್ ಮಸ್ಕ್ ನೇತೃತ್ವದ ಟೆಸ್ಲಾ ತನ್ನ ಶೇ 10ರಷ್ಟು ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ.

Musk's Tesla
Musk's Tesla
author img

By ETV Bharat Karnataka Team

Published : Apr 16, 2024, 12:24 PM IST

ಸ್ಯಾನ್ ಫ್ರಾನ್ಸಿಸ್ಕೋ : ಎಲೋನ್ ಮಸ್ಕ್ ನೇತೃತ್ವದ ಟೆಸ್ಲಾ ಕಂಪನಿಯು ಜಾಗತಿಕವಾಗಿ ಶೇ 10ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಮುಂದಿನ ಹಂತದ ಬೆಳವಣಿಗೆಗಾಗಿ ಕಂಪನಿಯು ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ನಿರ್ಧರಿಸಿದೆ ಎಂದು ಇಮೇಲ್​ನಲ್ಲಿ ಎಲೋನ್ ಮಸ್ಕ್ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

"ಟೆಸ್ಲಾ ಬೆಳವಣಿಗೆಯಾಗುತ್ತಿದ್ದಂತೆ ಕಂಪನಿಯಲ್ಲಿ ಒಂದೇ ರೀತಿಯ ಕೆಲಸ ಮಾಡುವ ಹಲವಾರು ಅನಗತ್ಯ ಹುದ್ದೆಗಳು ಸೃಷ್ಟಿಯಾಗಿವೆ. ನಾವು ಸಂಸ್ಥೆಯ ಸಮಗ್ರ ಪರಿಶೀಲನೆ ನಡೆಸಿದ್ದೇವೆ ಮತ್ತು ಜಾಗತಿಕವಾಗಿ ನಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಶೇಕಡಾ 10 ಕ್ಕಿಂತ ಕಡಿಮೆ ಮಾಡುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇವೆ. ಉದ್ಯೋಗಿಗಳನ್ನು ವಜಾಗೊಳಿಸುವುದು ನನಗೆ ಒಂಚೂರೂ ಇಷ್ಟವಿಲ್ಲ. ಆದರೆ, ಅದನ್ನು ಮಾಡಲೇಬೇಕಿದೆ. ಇದು ಮುಂದಿನ ಬೆಳವಣಿಗೆಯ ಹಂತಕ್ಕೆ ಸಾಗಲು ನಮಗೆ ಅನುವು ಮಾಡಿಕೊಡುತ್ತದೆ" ಎಂದು ಮಸ್ಕ್ ಇಮೇಲ್​ನಲ್ಲಿ ಬರೆದಿದ್ದಾರೆ.

ವರದಿಗಳ ಪ್ರಕಾರ ಎಲೆಕ್ಟ್ರಿಕ್ ವಾಹನ (ಇವಿ) ತಯಾರಕ ಟೆಸ್ಲಾದಲ್ಲಿ 2023ರ ಕೊನೆಯಲ್ಲಿ 1,40,000 ಕ್ಕೂ ಅಧಿಕ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಈ ಸಂಖ್ಯೆಯ ಪ್ರಕಾರ 14 ಸಾವಿರಕ್ಕೂ ಹೆಚ್ಚು ಟೆಸ್ಲಾ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಬಹುದು. ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಇಳಿಕೆಯಾಗುತ್ತಿದೆ ಎಂದು ಟೆಸ್ಲಾ ಎರಡು ವಾರಗಳ ಹಿಂದೆ ಹೇಳಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಉದ್ಯೋಗ ಕಡಿತವನ್ನು ಕಂಪನಿ ಘೋಷಿಸಿರುವುದು ಗಮನಾರ್ಹ.

ಏತನ್ಮಧ್ಯೆ, ಪ್ರತಿಭಾವಂತ ಯುವಕರು ತಮ್ಮ ಕೃತಕ ಬುದ್ಧಿಮತ್ತೆ (ಎಐ) ಉದ್ಯಮವಾದ ಎಕ್ಸ್ಎಐಗೆ ಸೇರಬೇಕು ಎಂದು ಮಸ್ಕ್ ಕೇಳಿಕೊಂಡಿದ್ದಾರೆ. ಪ್ರಸ್ತುತ, ಮಸ್ಕ್ ಅವರ ಎಕ್ಸ್ಎಐ ಕಂಪನಿಯು ಉತ್ಪನ್ನ, ಡೇಟಾ ಮತ್ತು ಮೂಲಸೌಕರ್ಯ ವಿಭಾಗಗಳಲ್ಲಿ ಎಂಜಿನಿಯರ್​ಗಳು ಮತ್ತು ವಿನ್ಯಾಸಕಾರರನ್ನು ನೇಮಿಸಿಕೊಳ್ಳುತ್ತಿದೆ.

ಭಾರತಕ್ಕೆ ಭೇಟಿ ನೀಡಲಿದ್ದಾರೆ ಮಸ್ಕ್: ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ ಈ ತಿಂಗಳು ಭಾರತಕ್ಕೆ ಆಗಮಿಸಲಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ ಮತ್ತು ಇಲ್ಲಿ ಹೊಸ ಟೆಸ್ಲಾ ಕಾರ್ಖಾನೆ ಆರಂಭಿಸುವ ಯೋಜನೆಗಳ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆಯಿದೆ. ಭೇಟಿಯ ದಿನಾಂಕವು ಇನ್ನೂ ನಿಗದಿಯಾಗಿಲ್ಲವಾದರೂ, ಭಾರತದಲ್ಲಿ ಹೂಡಿಕೆಯನ್ನು ಸ್ವಾಗತಿಸುವುದಾಗಿ ಪ್ರಧಾನಿ ಹೇಳಿದ್ದಾರೆ.

ಟೆಸ್ಲಾ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವುದು ಸಹಜ ಪ್ರಕ್ರಿಯೆಯಾಗಿದೆ ಎಂದು ಈ ತಿಂಗಳ ಆರಂಭದಲ್ಲಿ ಮಸ್ಕ್ ಹೇಳಿದ್ದರು. ಎಲೆಕ್ಟ್ರಿಕ್ ವಾಹನಗಳ ಆಮದಿನ ಮೇಲಿನ ತೆರಿಗೆಯನ್ನು ಸುಮಾರು 85% ರಷ್ಟು ಕಡಿತಗೊಳಿಸಲು ಯೋಜಿಸಿರುವ ಹೊಸ ಎಲೆಕ್ಟ್ರಿಕ್ ವಾಹನ ನೀತಿಯನ್ನು ಭಾರತ ಘೋಷಿಸಿದೆ.

ಇದನ್ನೂ ಓದಿ : 2024ರ ಮಧ್ಯಭಾಗದಲ್ಲಿ ಆರ್​ಬಿಐಯಿಂದ ರೆಪೊ ದರ ಹೆಚ್ಚಳ ಸಾಧ್ಯತೆ: ಕ್ರಿಸಿಲ್ - Repo Rate

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.